newsfirstkannada.com

ಅಂತಾರಾಷ್ಟ್ರೀಯ ಯೋಗ ದಿನ: ಅಮೆರಿಕದಲ್ಲಿ ಅನಿವಾಸಿ ಭಾರತೀಯರೊಂದಿಗೆ ಪ್ರಧಾನಿ ಯೋಗ ಆಚರಣೆ

Share :

Published June 21, 2023 at 7:47am

    ಮೂರು ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ಮೋದಿ

    ಪ್ರಧಾನಿ ಮೋದಿಯವರು ಯೋಗ ಬಗ್ಗೆ ವಿಶ್ವಕ್ಕೆ ಸಂದೇಶ ಸಾರಿದ್ದಾರೆ

    ಯೋಗ ದಿನದ ಕುರಿತು ಭಾರತದ ಸ್ಪಂದನೆಗೆ ಇಡೀ ವಿಶ್ವವೇ ಸಂದಿಸಿದೆ

ವಾಷಿಂಗ್ಟನ್​ ಡಿ.ಸಿ: ಅಮೆರಿಕ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ 9ನೇ ಅಂತಾರಾಷ್ಟ್ರೀಯ ಯೋಗ ದಿನವನ್ನು ಮುನ್ನಡೆಸಲಿದ್ದಾರೆ. ನ್ಯೂಯಾರ್ಕ್​ ನಗರದಲ್ಲಿರುವ ಅನಿವಾಸಿ ಭಾರತೀಯರೊಂದಿಗೆ ಯೋಗ ಕಾರ್ಯಕ್ರಮದಲ್ಲಿ ಪ್ರಧಾನಿ ಪಾಲ್ಗೊಳ್ಳಲಿದ್ದಾರೆ.

ಪ್ರಧಾನಿ ಮೋದಿಯವರು 3 ದಿನಗಳ ಕಾಲ​ ಪ್ರವಾಸದ ಕೈಗೊಂಡಿದ್ದು ನಿನ್ನೆಯೇ ಅಮೆರಿಕಕ್ಕೆ ಪ್ರಯಾಣ ಬೆಳಸಿದ್ದಾರೆ. ಇನ್ನು ಅಂತಾರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ವಿಡಿಯೋ ಮೂಲಕ ವಿಶೇಷ ಸಂದೇಶ ಕಳುಹಿಸಿದ್ದಾರೆ. ಒಂದು ಭೂಮಿ, ಒಂದು ಕುಟುಂಬ ಎಂದಿದ್ದಾರೆ. ಈ ಹಿಂದೆ ಯೋಗ ದಿನಕ್ಕೆ ಭಾರತ ಕೊಟ್ಟ ಸಂದೇಶಕ್ಕೆ ಇಡೀ ವಿಶ್ವವೇ ಸ್ಪಂದಿಸಿದೆ. ಯೋಗದಿಂದ ಜನರ ಜೀವನದಲ್ಲಿ ಮಹತ್ವದ ಬದಲಾವಣೆಗಳು ಆಗಿವೆ. ಎಲ್ಲೆಡೆ ಆರೋಗ್ಯ ಸುಧಾರಿಸಿದೆ ಎಂದಿದ್ದಾರೆ.

ಯೋಗದಿನದಂದು ಇಡೀ ವಿಶ್ವವೇ ಒಂದಾಗಿದೆ. ಹೀಗಾಗಿ ವಿಶ್ವದ ಜನರಲ್ಲಿ ಆರೋಗ್ಯ ವೃದ್ಧಿಯಾಗುತ್ತಿದೆ. ಭಾರತ ಕೊಟ್ಟ ಕರೆಗೆ ವಿಶ್ವಸಂಸ್ಥೆ ಸ್ಪಂದನೆ ಮಾಡಿದ್ದಕ್ಕೆ ಇಂದು ವಿಶ್ವದ್ಯಾಂತ ಇರುವ ದೇಶಗಳಲ್ಲಿ ಯೋಗ ಅಭ್ಯಾಸ ಮಾಡಲಾಗುತ್ತಿದೆ ಎಂದು ಮೋದಿ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಂತಾರಾಷ್ಟ್ರೀಯ ಯೋಗ ದಿನ: ಅಮೆರಿಕದಲ್ಲಿ ಅನಿವಾಸಿ ಭಾರತೀಯರೊಂದಿಗೆ ಪ್ರಧಾನಿ ಯೋಗ ಆಚರಣೆ

https://newsfirstlive.com/wp-content/uploads/2023/06/PM_MODI_YOGA.jpg

Load More