newsfirstkannada.com

ಪ್ರಧಾನಿ ಮೋದಿ ಹುಟ್ಟುಹಬ್ಬದ ಸಂಭ್ರಮ; ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣ ಲೋಕಾರ್ಪಣೆ

Share :

17-09-2023

  5 ವರ್ಷಗಳಿಗೆ 13 ಸಾವಿರ ಕೋಟಿ ವೆಚ್ಚದ ಯೋಜನೆ..!

  ಮೆಟ್ರೋದಲ್ಲಿ ಪ್ರಧಾನಿಗೆ ಶುಭಕೋರಿದ ಸಾರ್ವಜನಿಕರು

  ಪೌರಕಾರ್ಮಿಕ ಪಾದ ತೊಳೆದು ಸಂಸದ ಪ್ರತಾಪ್​ ಸಿಂಹ

ಪ್ರಧಾನಿ ಮೋದಿ 74ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಇನ್ನು ತಮ್ಮ ಜನ್ಮದಿನದ ಸಂದರ್ಭದಲ್ಲೇ ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣವನ್ನು ಮೋದಿ ಲೋಕಾರ್ಪಣೆ ಮಾಡಿದ್ದಾರೆ. ಹಾಗೂ ಕರಕುಶಲ ಕರ್ಮಿಗಳ ಶ್ರೇಯೋಭಿವೃದ್ಧಿಗಾಗಿ 13 ಸಾವಿರ ಕೋಟಿ ವೆಚ್ಚದ ಪಿಎಂ ವಿಶ್ವಕರ್ಮ ಯೋಜನೆಗೂ ಚಾಲನೆ ನೀಡಿದ್ದರು. ಪ್ರಧಾನಿ ನರೇಂದ್ರ ಮೋದಿ. ಭಾರತ ಕಂಡಿರುವ ಅತ್ಯುತ್ತಮ ಪ್ರಧಾನಿಗಳಲ್ಲಿ ಒಬ್ಬರು. ತಮ್ಮ ರಾಜತಾಂತ್ರಿಕ ನೀತಿ, ದಿಟ್ಟ ನಿರ್ಧಾರಗಳಿಂದ ಭಾರತದ ಕೀರ್ತಿ ಪತಾಕೆಯನ್ನು ಜಗದಗಲಕ್ಕೂ ಹರಡಿದ್ದಾರೆ. ಇವತ್ತು ಭಾರತದ ಹೆಮ್ಮೆಯ ಪ್ರಧಾನಿಯಾಗಿರುವ ನರೇಂದ್ರ ಮೋದಿಯವರ ಜನ್ಮದಿನ. ಇಡೀ ಭರತ ಭೂಮಿಯೇ ಪ್ರಧಾನಿ ಹುಟ್ಟುಹಬ್ಬವನ್ನು ಆಚರಿಸುತ್ತಿದೆ. ಪ್ರಧಾನಿ ಮೋದಿ ಜನ್ಮದಿನದಂದೇ ವಿಶ್ವದ ಅತಿದೊಡ್ಡ ಕನ್​ವೆನ್ಷನ್​ ಸೆಂಟರ್​ ಉದ್ಘಾಟನೆಯಾಗಿದೆ.

‘ಯಶೋಭೂಮಿ’ಯ ಮೊದಲ ಹಂತ ಲೋಕಾರ್ಪಣೆ
ಪಿಎಂ ವಿಶ್ವಕರ್ಮ ಯೋಜನೆಗೂ ‘ನಮೋ’ ಚಾಲನೆ

ಪ್ರಧಾನಿ ನರೇಂದ್ರ ಮೋದಿ ತಮ್ಮ ಜನ್ಮದಿನದಂದು ಸಾವಿರಾರು ಕೋಟಿ ವೆಚ್ಚದ ಅಭಿವೃದ್ಧಿ ಕಾರ್ಯಕ್ರಮಗಳನ್ನು ಉದ್ಘಾಟಿಸಿದ್ರು. ದ್ವಾರಕಾದಲ್ಲಿರುವ ಇಂಡಿಯಾ ಇಂಟರ್​ನ್ಯಾಷನಲ್​ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್ ‘ಯಶೋಭೂಮಿ’ಯ ಮೊದಲ ಹಂತವನ್ನು ಲೋಕಾರ್ಪಣೆ ಮಾಡಿದರು.

ಯಶೋಭೂಮಿಯ ವಿಶೇಷತೆ ಏನು?

73 ಸಾವಿರ ಚ.ಮೀ. ಪ್ರದೇಶದಲ್ಲಿ ಯಶೋಭೂಮಿ ನಿರ್ಮಾಣ ಮಾಡಲಾಗಿದೆ. ಇಲ್ಲಿ 15 ಸಮ್ಮೇಳನ ಕೊಠಡಿ ನಿರ್ಮಿಸಲಾಗಿದೆ. ಮುಖ್ಯ ಸಭಾಂಗಣ ಮತ್ತು 13 ಇತರ ಸಮ್ಮೇಳನ ಕೊಠಡಿ ಸೇರಿವೆ. ಸುಮಾರು 11,000 ಪ್ರತಿನಿಧಿಗಳು ಭಾಗಿಯಾಗುವಷ್ಟು ಸಾಮರ್ಥ್ಯ ಹೊಂದಿದೆ. ದೇಶದಲ್ಲೇ ಅತಿ ದೊಡ್ಡ ಎಲ್​ಇಡಿ ಪರದೆಯನ್ನು ಅಳವಡಿಕೆ ಮಾಡಲಾಗಿದೆ. ಮುಖ್ಯ ಸಭಾಂಗಣವು 6,000 ಆಸನ ಸಾಮರ್ಥ್ಯ ಹೊಂದಿದೆ. ಇನ್ನು ಪ್ರವಾಸಿಗರಿಗೆ ವಿಶ್ವ ದರ್ಜೆಯ ಸೌಲಭ್ಯದ ಅನುಭವವನ್ನು ಇಂಡಿಯಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್ ನೀಡುತ್ತದೆ. ಇಂಡಿಯಾ ಇಂಟರ್‌ನ್ಯಾಶನಲ್ ಕನ್ವೆನ್ಷನ್ ಮತ್ತು ಎಕ್ಸ್‌ಪೋ ಸೆಂಟರ್ ಉದ್ಘಾಟನೆ ಬಳಿಕ, ವಿಶ್ವಕರ್ಮ ಜಯಂತಿಯಂದು ಕರಕುಶಲ ಕಾರ್ಮಿಕರಿಗೆ 13 ಸಾವಿರ ಕೋಟಿ ರೂ.ಗಳ ಪ್ರಧಾನಿ ವಿಶ್ವಕರ್ಮ ಯೋಜನೆಗೆ ಚಾಲನೆ ನೀಡಿದ್ರು. ಇದಕ್ಕೂ ಮುನ್ನ ಕುಶಲಕರ್ಮಿಗಳೊಂದಿಗೆ ಮೋದಿ ಸಂವಾದ ನಡೆಸಿದರು. ಅವರ ಯೋಗಕ್ಷೇಮ, ಉದ್ಯೋಗ, ಕೆಲಸದ ಬಗ್ಗೆ ವಿಚಾರಿಸಿದರು. ಇನ್ನು ಈ ಯೋಜನೆಯ ಫಲಾನುಭವಿಗಳಿಗೆ ಅಭಿನಂದನಾ ಪತ್ರ ನೀಡಿ, ಗೌರವಿಸಿದ್ದರು.

ಮೆಟ್ರೋದಲ್ಲಿ ಪ್ರಧಾನಿ ಮೋದಿಗೆ ಶುಭಕೋರಿದ ಜನತೆ

ಇನ್ನು, ದ್ವಾರಕಾ ಸೆಕ್ಟರ್ 21 ರಿಂದ ಸೆಕ್ಟರ್ 25 ರವರೆಗೆ ವಿಸ್ತರಿಸಲಾದ ದೆಹಲಿ ಏರ್‌ಪೋರ್ಟ್ ಎಕ್ಸ್‌ಪ್ರೆಸ್ ಲೈನ್ ಅನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ರು. ಈ ವೇಳೆ ಮೆಟ್ರೋ ನೌಕರರೊಂದಿಗೆ ಪ್ರಧಾನಿ ಮೋದಿ ಸಂವಾದ ನಡೆಸಿದರು. ಬಳಿಕ ಮೆಟ್ರೋದಲ್ಲಿ ಪ್ರಯಾಣ ಮಾಡಿದ ಪ್ರಧಾನಿಗೆ ಜನತೆ ಹುಟ್ಟು ಹಬ್ಬಕ್ಕೆ ಶುಭಕೋರಿದ್ರು. ಈ ವೇಳೆ ಮಹಿಳೆಯೊಬ್ಬರು ಸಂಸ್ಕೃತದಲ್ಲಿ ಪ್ರಧಾನಿಗೆ ವಿಶ್​ ಮಾಡಿದರು. ಇತರೆ ಪ್ರಯಾಣಿಕರು ಕೂಡ ನಮ್ಮ ನೆಚ್ಚಿನ ಪ್ರಧಾನಿಗೆ ಶುಭಕೋರಿ, ಸೆಲ್ಫಿ ತೆಗೆದುಕೊಂಡಿರು. ಇನ್ನು ತಮ್ಮ ಬರ್ತ್​ಡೇಗೆ ಪುಟ್ಟ ಬಾಲಕ ನೀಡಿದ ಚಾಕ್ಲೇಟ್​ ಅನ್ನು ಪ್ರಧಾನಿಗೆ ಮೋದಿ ಸ್ವೀಕರಿಸಿದ್ರು. ಹಾಗೂ ಮಕ್ಕಳ ಜೊತೆ ಎಂಜಾಯ್​ ಮಾಡಿದರು.

ಪೌರಕಾರ್ಮಿಕರ ಪಾದಪೂಜೆ ಮಾಡಿದ ಪ್ರತಾಪ್​ ಸಿಂಹ

ಪ್ರಧಾನಿ ಮೋದಿಯವರ ಜನ್ಮದಿನವನ್ನು ಇಡೀ ಭಾರತದಾದ್ಯಂತ ಬಿಜೆಪಿ ನಾಯಕರು, ಕಾರ್ಯಕರ್ತರು ಸೆಲೆಬ್ರೇಟ್​ ಮಾಡಿದರು. ಮೈಸೂರು-ಕೊಡಗು ಕ್ಷೇತ್ರದ ಸಂಸದ ಪ್ರತಾಪ್​ ಸಿಂಹ, ಮೋದಿ ಜನ್ಮದಿನದ ಅಂಗವಾಗಿ ಪೌರಕಾರ್ಮಿಕರ ಪಾದ ಪೂಜೆ ಮಾಡಿ, ಗಮನ ಸೆಳೆದರು. ಒಟ್ಟಾರೆಯಾಗಿ ನರೇಂದ್ರ ಮೋದಿಯವರು ಪ್ರಧಾನಿಯಾದ ಬಳಿಕ ಭಾರತದ ಅಭಿವೃದ್ಧಿಯ ವೇಗ ದುಪ್ಪಟ್ಟಾಗಿದೆ. ಭಾರತವನ್ನು ವಿಶ್ವಗುರುವಿನ ಸಾಲಿನಲ್ಲಿ ನಿಲ್ಲಿಸಲು ಪ್ರಧಾನಿ ಅವಿರತವಾಗಿ ಶ್ರಮಿಸುತ್ತಿದ್ದಾರೆ. ಭಾರತಾಂಭೆಯ ಹೆಮ್ಮೆಯ ಪುತ್ರ ಪ್ರಧಾನಿ ಮೋದಿಯ ನೂರು ಕಾಲ ಸುಖವಾಗಿರಲಿ ಎಂದು ಶುಭ ಹಾರೈಸೋಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಪ್ರಧಾನಿ ಮೋದಿ ಹುಟ್ಟುಹಬ್ಬದ ಸಂಭ್ರಮ; ವಿಶ್ವದ ಅತಿದೊಡ್ಡ ಪ್ರದರ್ಶನ ಸಭಾಂಗಣ ಲೋಕಾರ್ಪಣೆ

https://newsfirstlive.com/wp-content/uploads/2023/09/pm-modi_-3.jpg

Load More