newsfirstkannada.com

ಚಂದ್ರಯಾನ 3 ಸೇಫ್​ ಲ್ಯಾಂಡಿಂಗ್​; ಇಸ್ರೋ ಅಧ್ಯಕ್ಷರಿಗೆ ಭಾವುಕರಾಗಿ ಫೋನ್​ ಮಾಡಿದ ಮೋದಿ ಏನಂದ್ರು?

Share :

Published August 23, 2023 at 10:22pm

Update August 24, 2023 at 8:53am

    ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯಶಸ್ವಿ

    ಕೋಟ್ಯಾಂತರ ಭಾರತೀಯರ ಕನಸು ನನಸಾಗಿದೆ

    ಇಸ್ರೋ ಅಧ್ಯಕ್ಷರಿಗೆ ಫೋನ್​ ಮಾಡಿದ್ದ ಮೋದಿ..!

ಭಾರತದ ಚಂದ್ರಯಾನ 3 ಯಶಸ್ವಿಗಾಗಿ ಇಡೀ ದೇಶವೇ ಎದುರು ನೋಡುತ್ತಿತ್ತು. ಈಗ ಯಾವುದೇ ಅಡೆತಡೆಗಳು ಬಾರದಂತೆ ನಿರ್ವಿಘ್ನವಾಗಿ ಚಂದ್ರಯಾನಕ್ಕೆ ಯಶಸ್ಸು ಸಿಕ್ಕಿದೆ. ಇಂದು 140 ಕೋಟಿ ಭಾರತೀಯರ ಕನಸು ನನಸಾದ ಕ್ಷಣ. ಭಾರತದ ಮಹತ್ವಾಕಾಂಕ್ಷಿ ಚಂದ್ರಯಾನ-3 ಯಶಸ್ವಿ ಆಗಿದ್ದು, ಬಾಹ್ಯಾಕಾಶ ಕ್ಷೇತ್ರದಲ್ಲಿ ಭಾರತ ಇತಿಹಾಸ ನಿರ್ಮಿಸಿದೆ. 42 ದಿನಗಳ ಚಂದ್ರಯಾನದ ಸುದೀರ್ಘ ಪ್ರಯಾಣದ ಬಳಿಕ ಇಂದು ಚಂದ್ರನ ದಕ್ಷಿಣ ಧ್ರುವದ ಮೇಲೆ ಮೊಟ್ಟ ಮೊದಲ ಬಾರಿಗೆ ಭಾರತ ವಿಜಯಪತಾಕೆ ಮೆರೆದಿದೆ. ವಿಕ್ರಮ್ ಲ್ಯಾಂಡರ್ ಸೇಫ್ ಆಗಿ ಲ್ಯಾಂಡ್ ಮಾಡಿದ ಇಸ್ರೋ ಸಾಧನೆಗೆ ಇಡೀ ವಿಶ್ವವೇ ಕೊಂಡಾಡುತ್ತಿದೆ. ಬಹಳ ದಿನಗಳ ಶ್ರಮಕ್ಕೆ ಪ್ರತಿಫಲ ಸಿಗುತ್ತಿದ್ದಂತೆ ವಿಜ್ಞಾನಿಗಳ ತಂಡ, ಇಸ್ರೋ ಸಿಬ್ಬಂದಿ ಖುಷಿಯಲ್ಲಿ ತೇಲಾಡಿದರು.

ಇನ್ನು, ವಿದೇಶದಿಂದಲೇ ಪ್ರಧಾನಿ ನರೇಂದ್ರ ಮೋದಿಯವರು ಈ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಿದ್ದಾರೆ. ಬ್ರಿಕ್ಸ್ ಶೃಂಗ ಸಭೆಯಲ್ಲಿ ಭಾಗಿಯಾಗಿರೋ ಪ್ರಧಾನಿ ನರೇಂದ್ರ ಮೋದಿ ಸೌತ್​ ಆಫ್ರಿಕಾದ ಜೋಹನ್ಸ್​ ಬರ್ಗ್​ನಿಂದಾನೇ ಲೈವ್​ ಆಗಿ ಚಂದ್ರಯಾನ-3 ವಿಕ್ರಮ್ ಲ್ಯಾಂಡಿಂಗ್​ ಕಣ್ತುಂಬಿಕೊಂಡಿದ್ದಾರೆ. ಜೊತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಇಸ್ರೋ ಅಧ್ಯಕ್ಷ ಎಸ್. ಸೋಮನಾಥ್ ಅವರಿಗೆ ಕರೆ ಮಾಡಿ ಶುಭಾಶಯ ತಿಳಿಸಿದ್ದಾರೆ.

ಸೋಮನಾಥ್ ಜೀ.. ನಿಮ್ಮ ಹೆಸರು ಸೋಮನಾಥ್ ಕೂಡ ಚಂದ್ರನೊಂದಿಗೆ ಸಂಪರ್ಕ ಹೊಂದಿದೆ. ನಿಮ್ಮ ಕುಟುಂಬದ ಸದಸ್ಯರೂ ಖುಷಿಯಾಗಿರುತ್ತಾರೆ. ನಿಮಗೂ ಮತ್ತು ನಿಮ್ಮ ತಂಡಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ನಿಮ್ಮ ಇಡೀ ತಂಡವನ್ನು ವೈಯಕ್ತಿಕವಾಗಿ ಅಭಿನಂದಿಸಲು ಶೀಘ್ರದಲ್ಲೇ ಬೆಂಗಳೂರಿಗೆ ಭೇಟಿ ನೀಡುವುದಾಗಿ ಹೇಳಿದರು. ಜೊತೆಗೆ ನಾಸಾ ವಿಜ್ಞಾನಿಗಳು ಕೂಡ ಇಸ್ರೋ ವಿಜ್ಞಾನಿಗಳಿಗೆ ಅಭಿನಂದನೆ ತಿಳಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ 3 ಸೇಫ್​ ಲ್ಯಾಂಡಿಂಗ್​; ಇಸ್ರೋ ಅಧ್ಯಕ್ಷರಿಗೆ ಭಾವುಕರಾಗಿ ಫೋನ್​ ಮಾಡಿದ ಮೋದಿ ಏನಂದ್ರು?

https://newsfirstlive.com/wp-content/uploads/2023/08/chandrayanna-2.jpg

Load More