newsfirstkannada.com

ModiInUSA: ವೈಟ್‌ಹೌಸ್‌ನಲ್ಲಿ ಮೋದಿ, ಬೈಡನ್ ಮಹತ್ವದ ಚರ್ಚೆ; ಭಾರತ, ಅಮೆರಿಕಾ ಮಧ್ಯೆ ಐತಿಹಾಸಿಕ ಒಪ್ಪಂದ ಸಾಧ್ಯತೆ

Share :

22-06-2023

    ಪ್ರಧಾನಿ ನರೇಂದ್ರ ಮೋದಿಗೆ ಶ್ವೇತ ಭವನದಲ್ಲಿ ಭವ್ಯ ಸ್ವಾಗತ

    ಭಾರತಕ್ಕೆ ಫೈಟರ್ ಜೆಟ್ ಎಂಜಿನ್ ತಂತ್ರಜ್ಞಾನ ವರ್ಗಾವಣೆ

    ಅಮೆರಿಕಾ, ಭಾರತ ದ್ವಿಪಕ್ಷೀಯ ಮಾತುಕತೆಯಲ್ಲಿ ಹಲವು ಒಪ್ಪಂದ

ವಾಷಿಂಗ್‌ಟನ್ ಡಿ.ಸಿ: ಅಮೆರಿಕಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿಗೆ ಶ್ವೇತ ಭವನದಲ್ಲಿ ಭವ್ಯ ಸ್ವಾಗತ ಕೋರಲಾಗಿದೆ. ಮೊದಲಿಗೆ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್, ಅಮೆರಿಕಾ ಮೊದಲ ಮಹಿಳೆ ಜಿಲ್ ಬೈಡೆನ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನ ಆತ್ಮೀಯವಾಗಿ ಬರಮಾಡಿಕೊಂಡರು. ಬಳಿಕ ಶ್ವೇತ ಭವನದಲ್ಲಿ ಗನ್ ಸೆಲ್ಯೂಟ್ ನೀಡುವ ಮೂಲಕ ಅಮೆರಿಕಾ ಸರ್ಕಾರದ ಆಹ್ವಾನದ ಮೇರೆಗೆ ಮೋದಿ ಅವರಿಗೆ ಅಧಿಕೃತ ಸ್ವಾಗತ ನೀಡಲಾಗಿದೆ.

ಭವ್ಯ ಸ್ವಾಗತದ ಬಳಿಕ ವೈಟ್‌ಹೌಸ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಸುದ್ದಿಗೋಷ್ಟಿ ನಡೆಸಿದರು. ಇದೇ ವೇಳೆ ಮಾತನಾಡಿದ ಉಭಯ ನಾಯಕರು ಭಾರತ, ಅಮೆರಿಕಾ ನಡುವಿನ ಬಾಂಧವ್ಯ, ಸ್ನೇಹ ಸಂಬಂಧಗಳ ಬಗ್ಗೆ ಪ್ರಸ್ತಾಪ ಮಾಡಿದ್ರು. ಇದಾದ ಬಳಿಕ ಭಾರತ, ಅಮೆರಿಕಾ ನಡುವಿನ ಮಹತ್ವದ ದ್ವಿಪಕ್ಷೀಯ ಒಪ್ಪಂದದ ಕುರಿತು ಮಾತುಕತೆ ನಡೆಸಲಾಗುತ್ತಿದೆ.

ಫೈಟರ್ ಜೆಟ್ ಎಂಜಿನ್ ತಂತ್ರಜ್ಞಾನ ವರ್ಗಾವಣೆ
ಇಂದು ವಾಷಿಂಗ್‌ಟನ್‌ನಲ್ಲಿ ನಡೆಯುವ ಅಮೆರಿಕಾ, ಭಾರತ ದ್ವಿಪಕ್ಷೀಯ ಒಪ್ಪಂದದ ಮಾತುಕತೆ ವೇಳೆ ಹಲವು ವಲಯಗಳ ಅಭಿವೃದ್ಧಿಯ ಬಗ್ಗೆ ಚರ್ಚೆಯಾಗಲಿದೆ. ಇದರಲ್ಲಿ ಪ್ರಮುಖವಾಗಿ ಫೈಟರ್ ಜೆಟ್ ಎಂಜಿನ್ ತಂತ್ರಜ್ಞಾನ ಭಾರತಕ್ಕೆ ವರ್ಗಾವಣೆ ಮಾಡುವುದು. ಅಮೆರಿಕಾದ ಜನರಲ್ ಎಲೆಕ್ಟ್ರಿಕ್ ಕಂಪನಿಯಿಂದ ಭಾರತದ HALಗೆ ತಂತ್ರಜ್ಞಾನ ವರ್ಗಾವಣೆ ಮಾಡುವುದು. ಭಾರತದ ವಾಯುಪಡೆಗೆ ಈ ತಂತ್ರಜ್ಞಾನ ಬಳಸಿ LCA ತೇಜಸ್ ವಿಮಾನದ ಎಂಜಿನ್ ತಯಾರಿ ಮಾಡಬಹುದು. ಈ ಬಗ್ಗೆ ಇಂದು ಅಮೆರಿಕಾದಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ನಿರೀಕ್ಷೆ ಇದೆ.

ಇದಾದ ಬಳಿಕ ಇಂದು ರಾತ್ರಿ 12.15ಕ್ಕೆ ಅಮೆರಿಕಾ ಕಾಂಗ್ರೆಸ್ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡಲಿದ್ದಾರೆ. ಎರಡನೇ ಬಾರಿಗೆ ಅಮೆರಿಕಾದ ಕಾಂಗ್ರೆಸ್ ಉದ್ದೇಶಿಸಿ ಪ್ರಧಾನಿ ನರೇಂದ್ರ ಮೋದಿ ಭಾಷಣ ಮಾಡುತ್ತಿದ್ದಾರೆ. ಇಂದು ಮುಂಜಾನೆ 4 ಗಂಟೆಗೆ ಅಮೆರಿಕಾದ ಶ್ವೇತಭವನದಲ್ಲಿ ಸ್ಟೇಟ್ ಡಿನ್ನರ್ ಆಯೋಜಿಸಲಾಗಿದೆ. ಅಮೆರಿಕಾದ ಮೊದಲ ಮಹಿಳೆ ಜಿಲ್ ಬೈಡೆನ್ ಮೇಲುಸ್ತುವಾರಿಯಲ್ಲಿ ಭೋಜನ ತಯಾರಾಗಿದ್ದು, ಶ್ವೇತಭವನದ ಚೆಫ್ ಗಳಿಂದ ಬಗೆ ಬಗೆಯ ಭಕ್ಷ್ಯ ಭೋಜನ ‌ತಯಾರಾಗಿದೆ. ಭಾರತದ ತ್ರಿವರ್ಣ ಧ್ವಜದ ಬಣ್ಣದ ಹೂವುಗಳ ಪ್ರದರ್ಶನ. ಸಿರಿಧಾನ್ಯಗಳ ಕೇಕ್, ಕಲ್ಲಂಗಡಿ ಹಣ್ಣು, ಅಣಬೆಯ ಆಹಾರ, ಅವಕಾಡೋ ಸಾಸ್ ಸೇರಿದಂತೆ ಅನೇಕ ಭಕ್ಷ್ಯ ಭೋಜನ ತಯಾರು ಮಾಡಲಾಗಿದೆ. ಈ ಸ್ಟೇಟ್ ಡಿನ್ನರ್‌ನಲ್ಲಿ ಆಯ್ದ 450 ಮಂದಿ ಭಾಗಿಯಾಗಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ModiInUSA: ವೈಟ್‌ಹೌಸ್‌ನಲ್ಲಿ ಮೋದಿ, ಬೈಡನ್ ಮಹತ್ವದ ಚರ್ಚೆ; ಭಾರತ, ಅಮೆರಿಕಾ ಮಧ್ಯೆ ಐತಿಹಾಸಿಕ ಒಪ್ಪಂದ ಸಾಧ್ಯತೆ

https://newsfirstlive.com/wp-content/uploads/2023/06/US-MOdi.jpg

Load More