ವಿವಿಧ ಸಿಇಓಗಳ ಜತೆ ವಾಣಿಜ್ಯಕ್ಕೆ ಸಂಬಂಧಿಸಿದಂತೆ ಮೋದಿ ಸಂವಾದ
ಅಮೆರಿಕ ಪ್ರವಾಸ ಮುಗಿಸಿದ ಬಳಿಕ ಈಜಿಪ್ಟ್‌ಗೆ ಪ್ರಧಾನಿ ಮೋದಿ ಭೇಟಿ
ಈಜಿಪ್ಟ್ನಲ್ಲಿ ಅಲ್ ಹಕೀಮ್ ಮಸೀದಿಗೆ ಭೇಟಿ ನೀಡಲಿರೋ ಮೋದಿ
ಪ್ರಧಾನಿ ಮೋದಿ ಕೈಗೊಂಡಿದ್ದ ಐತಿಹಾಸಿಕ ಹಾಗೂ ಮಹತ್ವದ ಅಮೆರಿಕ ಪ್ರವಾಸ ಅತ್ಯಂತ ಯಶಸ್ವಿಯಾಗಿ ಮುಕ್ತಾಯವಾಗಿದೆ. ಕೊನೆಯ ದಿನ ಸಾಕಷ್ಟು ಮಹತ್ವದ ಒಂಪ್ಪಂದಗಳಿಗೆ ಸಾಕ್ಷಿಯಾಯ್ತು. ಅಮೆರಿಕದಿಂದ ನೇರ ಮೋದಿ ಭಾರತಕ್ಕೆ ವಾಪಸ್ ಆಗ್ತಿಲ್ಲ. ಬದಲಿಗಿ ಮತ್ತೊಂದು ಐತಿಹಾಸಿಕ ಪ್ರವಾಸಕ್ಕೆ ಮುಂದಾಗಿದ್ದಾರೆ.
ಖುದ್ದು ಅಮೆರಿಕವೇ ಆಹ್ವಾನ ನೀಡಿದ ಕಾರಣ ಪ್ರಧಾನಿ ನರೇಂದ್ರ ಮೋದಿ ದೊಡ್ಡಣ್ಣನೂರಿಗೆ ಕಾಲಿಟ್ಟು ಮೂರು ದಿನಗಳ ಕಾಲ ಆತಿಥ್ಯ ಸ್ವೀಕರಿಸಿದ್ದಾರೆ. ಪ್ರಧಾನಿಗಳ ಸ್ಟೇಟ್ ವಿಸಿಟ್ ಇವತ್ತಿಗೆ ಅಂತ್ಯವಾಗಿದೆ.
ಜಗತ್ತಿನ ದೊಡ್ಡ ದೊಡ್ಡ ಉದ್ಯಮಿಗಳ ಜೊತೆಗೆ ಚರ್ಚೆ
ಮೋದಿ ಅಮೆರಿಕದ ಪ್ರವಾಸದ 3ನೇ ದಿನ ಮಹತ್ವ ಪಡೆದುಕೊಂಡಿದ್ದು, ಉದ್ಯಮಿಗಳೊಂದಿಗಿನ ಸಭೆ. ವ್ಯಾಪಾರ, ತಂತ್ರಜ್ಞಾನ, ಮತ್ತು ಮನರಂಜನೆ ಕ್ಷೇತ್ರದ ಪ್ರಮುಖ ಭಾರತೀಯ ಮತ್ತು ಅಮೆರಿಕನ್ ಬ್ಯುಸಿನೆಸ್ಮ್ಯಾನ್ಗಳು ಪ್ರಧಾನಿ ಮೋದಿ ಜೊತೆ ವೈಟ್ ಹೌಸ್ನ ಔತಣ ಕೂಟದಲ್ಲಿ ಭಾಗವಹಿಸಿದ್ದರು. ಇದಾದ ಬಳಿಕ ವೈಟ್ ಹೌಸ್ನಲ್ಲಿ ಸಿಇಓಗಳ ಜೊತೆ ಪ್ರಧಾನಿ ಮೋದಿ ಸಂವಾದವನ್ನೂ ನಡೆಸಿದ್ರು. ಈ ವೇಳೆ ಅಮೆರಿಕ ಅಧ್ಯಕ್ಷ ಜೋ ಬೈಡನ್, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ, ಗೂಗಲ್ನ ಸಿಇಒ ಸುಂದರ್ ಪಿಚೈ, ಫೇಸ್ಬುಕ್ ಸಿಇಒ ಮಾರ್ಕ್ ಜುಕರ್ಬರ್ಗ್, ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ, ಮಹೀಂದ್ರ ಚೇರ್ಮೆನ್ ಆನಂದ್ ಮಹೀಂದ್ರ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ದರು. ಈ ಸಭೆಯಲ್ಲಿ ತಂತ್ರಜ್ಞಾನಗಳು ಭವಿಷ್ಯಕ್ಕೆ ಎಷ್ಟು ಮುಖ್ಯವಾಗುತ್ತೆ ಅನ್ನೋ ನಿಟ್ಟಿನಲ್ಲಿ ಚರ್ಚೆಯಾಯ್ತು.
ಮೋದಿ ‘ತಂತ್ರಜ್ಞಾನ’
ಇದರ ನಡುವೆ ಅಮೆರಿಕ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಜೊತೆ ಪ್ರಧಾನಿ ಮೋದಿ ಜಂಟಿ ಸುದ್ದಿಗೋಷ್ಠಿ ನಡೆಸಿದ್ದರು. ಈ ವೇಳೆ ಮಾತನಾಡಿದ ಪ್ರಧಾನಿ ಮೋದಿ, ಉಭಯ ದೇಶಗಳ ಸ್ನೇಹ ಸಂಬಂಧ, ಸಹಕಾರ ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗಲಿದೆ ಎಂದರು. ಇದೇ ಕಾರ್ಯಕ್ರಮದಲ್ಲಿ ಮಾತಾಡಿದ ಕಮಲಾಹ್ಯಾರಿಸ್ ಭಾರತವನ್ನ ಕೊಂಡಾಡಿದ್ರು. ವಿಶ್ವ ಮಟ್ಟದಲ್ಲಿ ಸಿಕ್ತಿರೋ ಗೌರವವನ್ನ ಮೆಚ್ಚಿಕೊಂಡರು.
ನಾನು ಅಮೆರಿಕದ ಉಪರಾಷ್ಟ್ರಪತಿಯಾಗಿ ಜಗತ್ತಿನಾದ್ಯಂತ ಸಂಚರಿಸೋ ವೇಳೆ ನಾನು ಭಾರತದ ಜಾಗತಿಕ ಪರಿಣಾಮವನ್ನು ಗಮನಿಸಿದ್ದೇನೆ. ಆಗ್ನೇಯ ಏಷ್ಯಾದಲ್ಲಿ ಭಾರತ-ನಿರ್ಮಿತ ಲಸಿಕೆಗಳು ಜೀವಗಳನ್ನು ಉಳಿಸಿವೆ. ಆಫ್ರಿಕನ್ ಖಂಡದಲ್ಲಿ ಭಾರತದ ದೀರ್ಘಾವಧಿಯ ಪಾಲುದಾರಿಕೆಗಳು ಸಮೃದ್ಧಿ ಮತ್ತು ಭದ್ರತೆಯನ್ನು ಹೆಚ್ಚಿಸಿವೆ. ಇಂಡೋ-ಪೆಸಿಫಿಕ್ನಲ್ಲಿ ಭಾರತವು ಮುಕ್ತ ಸಹಕಾರ ನೀಡಿದೆ. ಇನ್ನು, ಸಂಶೋಧನೆ, ಮೆಡಿಸೆನ್ಸ್ ಹಾಗೂ ವಿಜ್ಞಾನ ಕ್ಷೇತ್ರದಕ್ಕಿ ಭಾರತದ ಕೊಡುಗೆ ಸಾಕಷ್ಟಿದೆ.
-ಕಮಲಾಹ್ಯಾರಿಸ್, ಅಮೆರಿಕ ಉಪಾಧ್ಯಕ್ಷೆ
ಪ್ರಧಾನಿ ಮೋದಿಗೆ, ಅಮೆರಿಕ ಅಧ್ಯಕ್ಷ ಬೈಡನ್ ವಿಶೇಷ ಟಿ-ಶರ್ಟ್ ಅನ್ನು ಗಿಫ್ಟ್ ಆಗಿ ನೀಡಿದರು. ದಿ ಫ್ಯೂಚರ್ ಈಸ್ ಅಮೆರಿಕ ಌಂಡ್ ಇಂಡಿಯಾ ಅನ್ನೋ ಬರಹದ ಟಿ-ಶರ್ಟ್ ಅದಾಗಿದೆ. ಹೀಗೆ ಅಮೆರಿಕದಲ್ಲಿ ಹತ್ತಾರು ಸಭೆಗಳು, ಒಂದಷ್ಟು ಮಹತ್ವದ ಒಪ್ಪಂದಗಳು, ಔತಣಕೂಟ, ಅನಿವಾಸಿ ಭಾರತೀಯರೊಂದಿಗಿನ ಮಾತು ಹೀಗೆ ಸಾಕಷ್ಟು ನೆನಪು ಹಾಗೂ ಗಳಿಕೆಯೊಂದಿಗೆ ಪ್ರಧಾನಿ ಮೋದಿ ಅಮರಿಕ ಪ್ರವಾಸ ಮುಗಿಸಿದ್ದಾರೆ.
ಪ್ರಧಾನಿಯಿಂದ ಮತ್ತೊಂದು ಐತಿಹಾಸಿಕ ಪ್ರವಾಸ
ಅಮೆರಿಕ ಪ್ರವಾಸ ಮುಗಿಸಿದ ಪ್ರಧಾನಿ ಮೋದಿ, ಈಜಿಪ್ಟ್ನತ್ತ ಫ್ಲೈಟ್ ಏರಿ ಹೊರಟಿದ್ದಾರೆ. ಇದೇ ಮೊದಲ ಬಾರಿಗೆ ಮೋದಿ ಈಜಿಪ್ಟ್‌ಗೆ ಭೇಟಿ ನೀಡಲಿದ್ದು, 2 ದಿನಗಳ ಕಾಲ ಪ್ರವಾಸ ಕೈಗೊಂಡಿದ್ದಾರೆ. ಈ ಭೇಟಿಯ ವೇಳೆ ಮೋದಿ ಓಲ್ಡ್ ಕೈರೋದಲ್ಲಿರುವ ಐತಿಹಾಸಿಕ ಅಲ್ ಹಕೀಮ್ ಮಸೀದಿಗೆ ಭೇಟಿ ನೀಡಲಿದ್ದಾರೆ. ಇದು ಕುತೂಹಲಕ್ಕೆ ಕಾರಣವಾಗಿದೆ. ಅಟ್ ದ ಸೇಮ್ ಟೈಮ್ ಮಹತ್ವವನ್ನೂ ಪಡೆದುಕೊಂಡಿದೆ.
ಈಜಿಪ್ಟ್ನಲ್ಲಿ ಮಸೀದಿಗೆ ಮೋದಿ ಭೇಟಿ
ಅಮೆರಿಕ ಪ್ರವಾಸದ ಬೆನ್ನಲ್ಲೇ ಶುರುವಾಗಿರೋ ಈಜಿಫ್ಟ್ ಟೂರ್ ಕೂಡ ಸಾಕಷ್ಟು ಮಹತ್ವವನ್ನ ಪಡೆದುಕೊಂಡಿದೆ. ಮೋದಿಯ ಈ ಭೇಟಿ ಹೇಗಿರಲಿದೆ ಅನ್ನೋ ಕುತೂಹಲವೂ ಇದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ