ದಶದಾನದ ಪೆಟ್ಟಿಗೆಯಲ್ಲಿತ್ತು ಬೆಳ್ಳಿ ಗಣೇಶ, ಬೆಳ್ಳಿ ದೀಪ!
ಬೈಡನ್‌ಗೆ ಪ್ರಧಾನಿ ಮೋದಿ ಈ ದಾನವನ್ನು ಕೊಟ್ಟಿದ್ದು ಏಕೆ?
ದೊಡ್ಡಣ್ಣನ ಮನೆಯಲ್ಲಿ ಹಿಂದೂ ಸಂಪ್ರದಾಯದ ಉಡುಗೊರೆ
ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಪ್ರವಾಸದಲ್ಲಿದ್ದು ಪ್ರತಿಯೊಂದು ವಿಚಾರದಲ್ಲಿಯೂ ಜಗತ್ತಿನ ಗಮನ ಸೆಳೆಯುವ ಕೆಲಸವನ್ನು ಮಾಡ್ತಿದ್ದಾರೆ. ಅಷ್ಟೇ ಅಲ್ಲ, ನಮ್ಮ ದೇಶದ ಸಂಸ್ಕೃತಿಯನ್ನು, ಹಿಂದೂ ಸಂಪ್ರದಾಯಗಳನ್ನು ದಶದಿಕ್ಕಿಗೂ ಪರಿಚಯಿಸುವ ಕೆಲಸವನ್ನು ಮಾಡ್ತಿದ್ದಾರೆ. ಇದ್ರಲ್ಲಿ ನಮ್ಗೆ ಭಾರೀ ವಿಶೇಷವಾಗಿ ಕಾಣಿಸಿದ್ದು ಅಂದ್ರೆ, ದೊಡ್ಡಣ್ಣ ಬೈಡನ್‌ಗೆ ದಶದಾನವನ್ನು ಗಿಫ್ಟ್ ಆಗಿ ನೀಡಿದ್ದು. ಅದ್ರಲ್ಲಿ ಕರ್ನಾಟಕದ ಮೈಸೂರಿನಲ್ಲಿ ಬೆಳೆದಿರೋ ವಸ್ತುವೊಂದು ಇತ್ತು ಅನ್ನೋದೇ ನಮ್ಮೆಲ್ಲರಿಗೂ ಹೆಮ್ಮೆಯ ವಿಚಾರವಾಗಿ ಕಾಣಿಸ್ತಿದೆ. ಹಾಗಾದ್ರೆ, ದಶದಾನದ ವಿಶೇಷತೆ ಏನು? ಬೈಡನ್‌ಗೆ ಮೋದಿ ಈ ದಾನವನ್ನು ಕೊಟ್ಟಿದ್ದು ಏಕೆ? ಅನ್ನೋದು ಕುತೂಹಲಕಾರಿಯಾಗಿದೆ.
ದೊಡ್ಡಣ್ಣ ಬೈಡನ್‌ಗೆ ‘ದಶದಾನ’ ಪೆಟ್ಟಿಗೆ ನೀಡಿದ ಮೋದಿ!
ಗಿಫ್ಟ್ ಪೆಟ್ಟಿಗೆಯಲ್ಲಿ ಏನೇನಿತ್ತು? ಯಾವ ರಾಜ್ಯದ ವಸ್ತುಗಳು?
ಈ ಬಾರಿ ಸ್ವತಃ ಅಮೆರಿಕದ ಆಹ್ವಾನದ ಮೇಲೆ ಮೋದಿ ಪ್ರವಾಸಕ್ಕೆ ಹೋಗಿದ್ದು, ಈ ಸಮಯದಲ್ಲಿ ಪ್ರತಿಯೊಂದು ಕ್ಷಣದಲ್ಲಿಯೂ ಜಗತ್ತಿನ ಗಮನ ಸೆಳೆಯುವ ಕೆಲ್ಸವನ್ನು ಮೋದಿ ಮಾಡ್ತಿದ್ದಾರೆ. ಅಮೆರಿಕ ಜನರು ಕೂಡ ಮೋದಿ ಆಗಮನಕ್ಕೆ ಮುಂತ್ರಮುಗ್ಧರಾಗಿರೋದು ಕಾಣಿಸ್ತಿದೆ. ಇದ್ರಲ್ಲಿ ನಮ್ಮೆಲ್ಲರಿಗೂ ವಿಶೇಷವಾಗಿ ಕಾಣಿಸಿದ್ದು ಅಂದ್ರೆ ಮೋದಿ ನೀಡಿರೋ ದಶದಾನ. ಇದ್ರಲ್ಲಿ ತುಪ್ಪದ ದಾನ, ಬೆಲ್ಲದ ದಾನ, ಧಾನ್ಯದ ದಾನ, ಚಿನ್ನದ ದಾನ, ಉಪ್ಪಿನ ದಾನ, ಬೆಳ್ಳಿ ದಾನ, ಎಳ್ಳಿನ ದಾನ, ಭೂಮಿಯ ದಾನ, ಗೋವಿನ ದಾನ, ವಸ್ತ್ರ ದಾನವನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ.
ಇನ್ನೊಂದು ವಿಶೇಷತೆ ಅಂದ್ರೆ ಮೋದಿ ದೊಡ್ಡಣ್ಣನಿಗೆ ಕೊಟ್ಟಿರೋ ದಶದಾನದಲ್ಲಿ ಭಾರತದ ಅನೇಕ ರಾಜ್ಯಗಳ ಲಿಂಕ್ ಇದೆ. ಅದ್ರಲ್ಲಿ ತುಪ್ಪ ಪಂಜಾಬ್‌ನಲ್ಲಿ ತಯಾರಾಗಿರೋದು, ಬೆಲ್ಲ ಮಹಾರಾಷ್ಟ್ರದಲ್ಲಿ ತಯಾರಾಗಿದ್ದು, ಧಾನ್ಯ ದಾನದಲ್ಲಿ ನೀಡಿರೋ ಅಕ್ಕಿ ಉತ್ತರಖಂಡ ರಾಜ್ಯದಲ್ಲಿ ಬೆಳೆದಿರೋದು, ಚಿನ್ನದ ದಾನದಲ್ಲಿ ನೀಡಿರೋ ನಾಣ್ಯ ರಾಜಸ್ಥಾನದಲ್ಲಿ ನಿರ್ಮಾಣವಾಗಿದೆ. ಉಪ್ಪಿನ ದಾನದಲ್ಲಿ ನೀಡಿರೋ ಉಪ್ಪು ಗುಜರಾತ್ ರಾಜ್ಯದ್ದು, ಬೆಳ್ಳಿಯ ದಾನದಲ್ಲಿರೋ ನಾಣ್ಯವೂ ರಾಜಸ್ಥಾನದಲ್ಲಿ ತಯಾರಾಗಿರೋದು, ಎಳ್ಳಿನ ದಾನದಲ್ಲಿ ನೀಡಿರೋ ಬಿಳಿ ಎಳ್ಳು ತಮಿಳುನಾಡಿನಲ್ಲಿ ಬೆಳೆದಿದ್ದು, ಭೂಮಿದಾನದ ಪ್ರತಿಕವಾಗಿ ನೀಡಿರೋ ಶ್ರೀಗಂಧದ ತುಂಡು ಕರ್ನಾಟಕದ ಮೈಸೂರಿನದ್ದು, ಗೋದಾನದ ಪ್ರತಿಕವಾಗಿ ನೀಡಿರೋ ಬೆಳ್ಳಿ ತೆಂಗಿನಕಾಯಿ ಪಶ್ಚಿಮ ಬಂಗಾಳದಲ್ಲಿ ನಿರ್ಮಾಣವಾಗಿರೋದು.
ಈ ರೀತಿಯಾಗಿ ನಾನಾ ರಾಜ್ಯಗಳ ಪ್ರತೀಕವಾಗಿ ನರೇಂದ್ರ ಮೋದಿ ದಶದಾನವನ್ನು ನೀಡಿದ್ದಾರೆ. ಅದ್ರಲ್ಲಿರೋ ಪ್ರತಿಯೊಂದು ದಾನವದ ವಸ್ತುಗಳು ಒಂದೊಂದು ರೀತಿಯ ಮಹತ್ವವನ್ನು ಹೊಂದಿವೆ. ಹಾಗಾದ್ರೆ, ಪ್ರಧಾನಿ ಸ್ಥಾನಕ್ಕೆ ಏರಿ 9 ವರ್ಷದಲ್ಲಿ ಯಾರಿಗೂ ದಶದಾನ ನೀಡದ ಮೋದಿ ಬೈಡನ್‌ಗೆ ನೀಡಿದ್ದು ಏಕೆ? ಅದನ್ನು ಹೇಳೋದಕ್ಕೂ ಮುನ್ನ ದಶದಾನ ಪೆಟ್ಟಿಗೆಯಲ್ಲಿ ಬೆಳ್ಳಿ ಗಣೇಶ ಮೂರ್ತಿ, ಬಿಳ್ಳಿ ದೀಪವನ್ನು ಇಟ್ಟು ಗಿಫ್ಟ್ ಕೊಟ್ಟಿದ್ದಾರೆ.

ವಿಘ್ನ ವಿನಾಶಕ, ಬೆಳ್ಳಿ ದೀಪ… ಏನನ್ನ ಸೂಚಿಸುತ್ತೆ?
ನರೇಂದ್ರ ಮೋದಿಯನ್ನು ಔತಣಕ್ಕೆ ಕರೆದಿದ್ದ ಬೈಡನ್ ದಂಪತಿ ಹಲವಾರು ವಸ್ತುಗಳನ್ನು ಗಿಫ್ಟ್ ಮೋದಿಗೆ ಕೊಟ್ಟಿದ್ದಾರೆ. ಹಾಗೇ ಇದೇ ಸಂದರ್ಭದಲ್ಲಿ ನರೇಂದ್ರ ಮೋದಿ ಕೂಡ ಗಿಫ್ಟ್ ಮಾಡಿದ್ದಾರೆ. ಬಟ್, ಮೋದಿ ಮಾಡಿರೋ ಗಿಫ್ಟ್‌ಗಳು ಏನು ಅನ್ನೋ ಕುತೂಹಲ ಇಡೀ ಜಗತ್ತಿಗೆ ಉಂಟಾಗಿದೆ. ಈಗಾಗ್ಲೇ ನಾವು ಒಂದು ಪೆಟ್ಟಿಗೆಯಲ್ಲಿ ಮೋದಿ ದಶದಾನದ ಗಿಫ್ಟ್ ಅನ್ನು ಬೈಡನ್‌ಗೆ ಕೊಟ್ಟಿದ್ದಾರೆ ಅನ್ನೋದನ್ನು ಹೇಳಿದ್ದೇವೆ. ಹಾಗೇ ಅದ್ರಲ್ಲಿರೋ ದಾನಗಳು ಯಾವುವು? ಅವು ಯಾವ ಯಾವ ರಾಜ್ಯದಲ್ಲಿ ತಯಾರಿಸಿದ್ದವು ಅನ್ನೋದನ್ನು ಹೇಳಿದ್ದೇವೆ. ಆದ್ರೆ, ಅದೇ ದಶದಾನ ಪೆಟ್ಟಿಯಲ್ಲಿ ಮೋದಿ ಬೆಳ್ಳಿ ಗಣೇಶ ವಿಗ್ರಹ ಮತ್ತು ಬೆಳ್ಳಿ ದೀಪವನ್ನು ನೀಡಿದ್ದಾರೆ. ಅರೇ, ದಶದಾನದಲ್ಲಿ ಧಾನ್ಯಗಳನ್ನು ನೋಡೋದು ಸಹಜ. ಹಾಗಾದ್ರೆ ಗಣೇಶನ ವಿಗ್ರಹವನ್ನು, ಬೆಳ್ಳಿ ದೀಪವನ್ನು ಕೊಟ್ಟಿದ್ದು ಏಕೆ ಅನ್ನೋ ಪ್ರಶ್ನೆ ಸಹಜವಾಗಿ ಹುಟ್ಟಿಕೊಳ್ಳುತ್ತೆ.
ಗಣೇಶನನ್ನು ವಿಘ್ನ ನಿನಾಶಕ ಅಂತಾ ಕರೆಯುತ್ತೇವೆ. ಯಾವುದೇ ಶುಭ ಕಾರ್ಯ ಮಾಡೋ ಮುನ್ನ, ಮನೆಯಲ್ಲಿ ಮಂಗಳ ಕಾರ್ಯ ಮಾಡುವಾಗ ಮೊದಲು ಗಣೇಶನಿಗೆ ಪೂಜೆ ಮಾಡಿ ಪ್ರಾರ್ಥನೆ ಸಲ್ಲಿಸಿ ಮುಂದಿನ ಕೆಲ್ಸ ಶುರು ಮಾಡುತ್ತೇವೆ. ಅಂದ್ರೆ, ಶುಭ ಕಾರ್ಯಕ್ಕೆ ಯಾವುದೇ ಅಡ್ಡಿ ಆತಂಕಗಳು ಎದುರಾಗಬಾರದು ಅನ್ನೋದು ಇದ್ರ ಹಿಂದಿರೋ ಉದ್ದೇಶ. ಇನ್ನೊಂದು ವಿಶೇಷ ಅಂದ್ರೆ, ಯಾವುದೇ ದೇವಸ್ಥಾನಗಳ ನಿರ್ಮಾಣ, ಯಾವುದೇ ದೇವರ ಪ್ರತಿಷ್ಠಾಪನೆ ಸಂದರ್ಭದಲ್ಲಿಯೂ ಆರಂಭದಲ್ಲಿ ಗಣೇಶನಿಗೆ ಪ್ರಥಮ ಪೂಜೆ ಸಲ್ಲಿಕೆ ಮಾಡಲಾಗುತ್ತದೆ. ಅಷ್ಟಕ್ಕೂ ಗಣೇಶನ ಪೂಜೆ ಯಾಕೆ ಮೊದಲು ಮಾಡ್ಬೇಕು ಅನ್ನೋ ಬಗ್ಗೆ ಹಿಂದೂ ಪುರಾಣಗಳಲ್ಲಿ, ಜ್ಯೋತಿಷ್ಯ ಶಾಸ್ತ್ರಗಳಲ್ಲಿ ಉಲ್ಲೇಖವಿದೆ. ಇನ್ನು ಬೈಡನ್‌ಗೆ ಮೋದಿ ಯಾಕೆ ಗಣೇಶನ ವಿಗ್ರಹ ಕೊಟ್ರು ಅಂದ್ರೆ ಬೈಡನ್‌ಗೆ ಒಳ್ಳೆಯದಾಗಲಿ, ಅವರು ಕೈಗೊಳ್ಳುವ ಕೆಲ್ಸದಲ್ಲಿ ಯಾವುದೇ ಅಡ್ಡಿಯಿಲ್ಲದೇ ನಡೆಯಲಿ ಅನ್ನೋ ಉದ್ದೇಶದಲ್ಲಿ ಕೊಟ್ಟಿರೋ ಸಾಧ್ಯತೆ ಇರುತ್ತೆ. ಹಾಗೇ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧದಲ್ಲಿ ವಿಘ್ನತೆ ಎದುರಾಗದೇ ಇರ್ಲಿ ಅನ್ನೋ ಭಾವನೆಯೂ ಇದ್ದೇ ಇರುತ್ತೆ.
ಮತ್ತೊಂದು ವಿಚಾರ ಅಂದ್ರೆ, ದಶದಾನದ ಗಿಫ್ಟ್ ಬಾಕ್ಸ್‌ನಲ್ಲಿ ಬೆಳ್ಳಿ ದೀಪವನ್ನು ಇಟ್ಟು ಕೊಡಲಾಗಿದೆ. ನಾವು ದೀಪವನ್ನು ಬೆಳಕಿನ ಸಂಕೇತ ಅಂತಾ ನಂಬಿಕೆ ಇಟ್ಟಿದ್ದೇವೆ. ಅಂದ್ರೆ ಕತ್ತೆಲೆಯನ್ನು ಓಡಿಸುವುದು, ಜೀವನದಲ್ಲಿ ಕಷ್ಟವನ್ನು ದೂರ ಮಾಡುವ ಸಂಕೇತ ಇದಾಗಿರುತ್ತೆ. ಇದೇ ಹಿನ್ನೆಲೆಯಲ್ಲಿ ಬೈಡನ್‌ಗೆ ಕಷ್ಟಗಳು ಎದುರಾರಾಗ ಅದು ದೂರವಾಗ್ಲಿ, ದೀಪ ಬೆಳಗುವಂತಾಗ್ಲಿ ಅನ್ನೋ ಸಂಕೇತದ ಅಡಿಯಲ್ಲಿ ಮೋದಿ ಬೆಳ್ಳಿ ದೀಪನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ ಎನ್ನಲಾಗಿದೆ.
ಪ್ರಧಾನಿ ನರೇಂದ್ರ ಮೋದಿ ಏನೇ ಮಾಡಿದ್ರೂ ಅಲ್ಲೊಂದು ವಿಶೇಷತೆ ಇದ್ದೇ ಇರುತ್ತೆ. ಹಾಗೇ ಅಷ್ಟೇ ಗೌಪ್ಯವಿಚಾರಗಳು ಇದ್ದೇ ಇರ್ತಾವೆ. ಬೈಡನ್‌ಗೆ ದಶದಾನ ನೀಡಿರೋ ವಿಚಾರವೂ ಅಷ್ಟೇ, ಮೋದಿ ಅಮೆರಿಕ ಪ್ರವಾಸಕ್ಕೆ ಹೋಗಿ ಬೈಡನ್‌ಗೆ ಗಿಫ್ಟ್ ಕೊಡುವವರೆಗೂ ಒಂದೇ ಒಂದು ಚಿಕ್ಕ ಸುಳಿವು ಆ ಬಗ್ಗೆ ಇರಲಿಲ್ಲ. ಅಷ್ಟೊಂದು ಗೌಪ್ಯದ ಮೋದಿ ಗಿಫ್ಟ್ ಕೊಡುವುದರಲ್ಲಿಯೂ ತೋರಿಸಿದ್ದಾರೆ. ಈ ಮೂಲಕ ದೊಡ್ಡಣ್ಣನ ಮನೆಯಲ್ಲಿ ಹಿಂದೂ ಸಂಪ್ರದಾಯ ರಾರಾಜಿಸುವಂತೆ ನರೇಂದ್ರ ಮೋದಿ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ