newsfirstkannada.com

ಅರಬ್​ ರಾಷ್ಟ್ರದಲ್ಲಿರುವ ಭಾರತೀಯರಿಗೆ ಸಿಹಿ ಸುದ್ದಿ ಕೊಟ್ಟ ಮೋದಿ.. ಅದೇನದು? ಈ ಸ್ಟೋರಿನಾ ಮಿಸ್​ ಮಾಡ್ದೇ ನೋಡಿ

Share :

15-07-2023

  ಫ್ರಾನ್ಸ್​ನಿಂದ ಅರಬ್​ ರಾಷ್ಟ್ರಕ್ಕೆ ಕಾಲಿಟ್ಟ ನರೇಂದ್ರ ಮೋದಿ

  UAE ಜೊತೆಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡ ನರೇಂದ್ರ ಮೋದಿ

  ಅರಬ್​ ರಾಷ್ಟ್ರದಲ್ಲಿರುವ ಭಾರತೀಯರಿಗೆ ಸಿಹಿ ಸುದ್ದಿ ಕೊಟ್ಟ ಭಾರತದ ಪ್ರಧಾನಿ

ಪ್ರಧಾನಿ ನರೇಂದ್ರ ಮೋದಿ ಅವರು ವಿದೇಶಿ ಪ್ರವಾಸದಲ್ಲಿದ್ದಾರೆ. ಫ್ರಾನ್ಸ್​ ಪ್ರವಾಸದ ಬಳಿಕ ಇಂದು (ಶನಿವಾರ) ಮುಂಜಾನೆ ಯುಎಇಗೆ ಪ್ರಯಾಣ ಬೆಳೆಸಿದ್ದರು. ಈ ವೇಳೆ ಅಧ್ಯಕ್ಷ ಶೇಖ್​​ ಮೊಹಮ್ಮದ್​​ ಬಿನ್​ ಜಾಯೆದ್​​ ಅಲ್​ ನಹ್ಯಾನ್​​ ಅವರನ್ನು ಭೇಟಿ ಮಾಡಿದ್ದು, ದ್ವಿಪಕ್ಷೀಯ ವಿಷಯಗಳ ಕುರಿತು ಚರ್ಚೆ ನಡೆಸಿದರು.

ಮೋದಿ ಹಾಗೂ ಶೇಖ್​​ ಮೊಹಮ್ಮದ್​​ ಬಿನ್​ ಜಾಯೆದ್​​ ಅಲ್​ ನಹ್ಯಾನ್ ಭೇಟಿ ವೇಳೆ ಭಾರತ- ಯುಎಇ ಕರೆನ್ಸಿಗಳ ಮೂಲಕ ವ್ಯಾಪಾರ ನಡೆಸಲು ನಿರ್ಧಾರ ಮಾಡಲಾಗಿದೆ. ಜೊತೆಗೆ ಎರಡು ದೇಶಗಳ ಪೇಮೆಂಟ್ ವ್ಯವಸ್ಥೆ ಲಿಂಕ್ ಮಾಡಲು ಒಪ್ಪಂದ ಮಾಡಲಾಗಿದೆ.

ಯುಎಇ ಜೊತೆಗೆ ಶೈಕ್ಷಣಿಕ ಒಪ್ಪಂದ ಮಾಡಿಕೊಂಡ ಪ್ರಧಾನಿ ನರೇಂದ್ರ ಮೋದಿ, ಭಾರತದ ಐಐಟಿ ದೆಹಲಿ ಕ್ಯಾಂಪಸ್ ಅನ್ನು ಅಬುಧಾಬಿಯಲ್ಲಿ ತೆರೆಯಲು ಒಪ್ಪಂದ ಮಾಡಲಾಗಿದೆ. ಜಾಗತಿಕವಾಗಿ ಭಾರತದ ಶಿಕ್ಷಣ ಸಂಸ್ಥೆ ಬೆಳೆಯಲು ಅವಕಾಶ ಕಲ್ಪಿಸಲಾಗಿದೆ.

ಯುಎಇಗೆ ಭೇಟಿಗೂ ಮುನ್ನ ಫ್ರಾನ್ಸ್​ ಪ್ರವಾಸದಲ್ಲಿದ್ದ ಮೋದಿ ಅಲ್ಲಿನ ಅಧ್ಯಕ್ಷ ಇಮ್ಯಾನುಯೆಲ್​ ಮ್ಯಾಕ್ರೋನ್​ ಅವರನ್ನು ಭೇಟಿ ಮಾಡಿ ಬಾಸ್ಟಿಲ್​ ಡೇ ಆಚರಣೆಯಲ್ಲಿ ಭಾಗವಹಿಸಿದರು. ಈ ವೇಳೆ ಫ್ರಾನ್ಸ್​ ಜೊತೆಗೆ ಹಲವು ಒಪ್ಪಂದಗಳನ್ನು ಮೋದಿ ಮಾಡಿಕೊಂಡಿದ್ದಾರೆ. ಅದರಲ್ಲಿ 36 ರಫೇಲ್ ಯುದ್ಧ ವಿಮಾನಗಳನ್ನು ಖರೀದಿಸಲು ಭಾರತ ಮುಂದಾಗಿದೆ. ಜೊತೆಗೆ 4 ಜಲಾಂತರಗಾಮಿ ನೌಕೆಯನ್ನು ಖರೀದಿಸಲು ಒಪ್ಪಂದ ಮಾಡಿಕೊಂಡಿದೆ. ಇದರ ಜೊತೆಗೆ ಫ್ರಾನ್ಸ್​ನಲ್ಲೂ ಭಾರತೀಯರಿಗಾಗಿ ಯುಪಿಐ ವ್ಯವಹಾರ ಕಲ್ಪಿಸುವ ವ್ಯವಸ್ಥೆ ಬಗ್ಗೆಯೂ ಮಾತನಾಡಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅರಬ್​ ರಾಷ್ಟ್ರದಲ್ಲಿರುವ ಭಾರತೀಯರಿಗೆ ಸಿಹಿ ಸುದ್ದಿ ಕೊಟ್ಟ ಮೋದಿ.. ಅದೇನದು? ಈ ಸ್ಟೋರಿನಾ ಮಿಸ್​ ಮಾಡ್ದೇ ನೋಡಿ

https://newsfirstlive.com/wp-content/uploads/2023/07/Modi-5.jpg

Load More