ಭಾರತ ಹಾಗೂ ಅಮೆರಿಕಾ ನಡುವಿನ ಬಾಂಧವ್ಯಕ್ಕೆ ಮೈಲಿಗಲ್ಲು
ದೊಡ್ಡಣ್ಣನ ನೆಲದಲ್ಲಿ ನಿಂತು ವಿಶ್ವದ ಗಮನ ಸೆಳೆದ ಮೋದಿ
ಜಿಲ್ ಬೈಡನ್‌ಗೆ ಗ್ರೀನ್ ಡೈಮಂಡ್ ಗಿಫ್ಟ್ ಕೊಟ್ಟ ಮೋದಿ
ಪ್ರಧಾನಿ ನರೇಂದ್ರ ಮೋದಿ ಅಧಿಕಾರಕ್ಕೆ ಬಂದು 9 ವರ್ಷದಲ್ಲಿ ಅನೇಕ ದೇಶಗಳಿಗೆ ಭೇಟಿ ನೀಡಿದ್ದಾರೆ. ಅಮೆರಿಕಾಗೂ ಹಲವಾರು ಬಾರಿ ವೀಸಿಟ್ ಮಾಡಿದ್ದಾರೆ. ಹೋದಲೆಲ್ಲ ಮೋದಿ ಅವರಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಆದ್ರೆ, ಈ ಬಾರಿ ದೊಡ್ಡಣ್ಣನ ನೆಲದಲ್ಲಿ ಮೋದಿಗೆ ಸಿಕ್ತಿರೋ ರತ್ನಗಂಬಳಿಯ ಸ್ವಾಗತ ವಿಭಿನ್ನವಾಗಿದ್ದು, ಇಡೀ ವಿಶ್ವದ ಗಮನ ಸೆಳೆಯುವಂತಿದೆ. ಹಾಗೇ, ಬೈಡನ್ ದಂಪತಿಗೆ ಮೋದಿ ಕೊಟ್ಟಿರೋ ಗಿಫ್ಟ್‌ಗಳು ಭಾರತೀಯ ಸಂಸ್ಕೃತಿ ಸಂಪ್ರದಾಯವನ್ನು ದಶದಿಕ್ಕಿಕೂ ಸಾರುವಂತಿವೆ.
ನರೇಂದ್ರ ಮೋದಿ ಅಮೆರಿಕಾ ಪ್ರವಾಸದಲ್ಲಿದ್ದು, ಭಾರತದ ಆಪ್ತ ರಾಷ್ಟ್ರಗಳು ಸಂತೋಷದಿಂದ ಎದುರು ನೋಡುತ್ತಿದ್ದರೆ, ಭಾರತದ ವಿರೋಧಿಗಳ ಹೃದಯಲ್ಲಿ ಪುಕಪುಕ ವಾತಾವರಣ ನಿರ್ಮಾಣವಾಗಿದೆ. ಅದಕ್ಕೆ ಕಾರಣ ನರೇಂದ್ರ ಮೋದಿಯವರು ಅಮೆರಿಕಾಗೆ ಈ ಹಿಂದೆ ನೀಡಿರೋ ಭೇಟಿಗೂ ಈಗಿನ ಭೇಟಿಗೂ ಭಾರೀ ವ್ಯತ್ಯಾಸ ಕಾಣಿಸ್ತಿದೆ. ಹೌದು, ಸ್ವತಃ ಅಮೆರಿಕದ ಅಧ್ಯಕ್ಷರ ಆಹ್ವಾನದ ಮೇಲೆ ನರೇಂದ್ರ ಮೋದಿ ಈ ಬಾರಿ ದೊಡ್ಡಣ್ಣನ ದೇಶಕ್ಕೆ ಭೇಟಿ ನೀಡಿದ್ದಾರೆ. ಈ ರೀತಿ ಆಹ್ವಾನ ಸಿಕ್ಕಿದ್ದು ಕೆಲವೇ ಕೆಲವು ದೇಶಗಳ ಪ್ರಧಾನಿಗಳಿಗೆ ಅನ್ನೋದು ವಿಶೇಷ, ಹಾಗೇ ಕಂಡು ಕೇಳರಿಯದ ಪ್ರಮಾಣದಲ್ಲಿ ಮೋದಿಗೆ ಅದ್ಧೂರಿ ಸ್ವಾಗತ ಸಿಕ್ಕಿದೆ. ಹೀಗಾಗಿ ಇಡೀ ಜಗತ್ತೇ ಬೆರಗು ಗಣ್ಣಿನಿಂದ ನೋಡ್ತಾ ಇದೆ. ಹಾಗೇ ನರೇಂದ್ರ ಮೋದಿಯವರು ಕೂಡ ಜಗತ್ತಿನ ಗಮನವನ್ನು ಸೆಳೆಯುವಂತೆ ಮಾಡ್ತಿದ್ದಾರೆ. ದೊಡ್ಡಣ್ಣನ ನೆಲದಲ್ಲಿಯೂ ಮೋದಿ ಮೋದಿ ಅನ್ನೋ ಘೋಷಣೆಗಳು ಮುಳಗುತ್ತಿರೋದನ್ನು ನೋಡಿದ್ರೆ ನಮ್ಮ ಪ್ರಧಾನ ಮಂತ್ರಿಯ ಜನಪ್ರಿಯತೆ ಯಾವ ಪ್ರಮಾಣದಲ್ಲಿದೆ. ಗಡಿ ದಾಟಿ ಹೇಗೆ ಮುಂದೆ ಹೋಗಿದೆ ಅನ್ನೋದನ್ನು ಅರ್ಥ ಮಾಡಿಸುವಂತಿದೆ.
ದೊಡ್ಡಣ್ಣನ ನೆಲದಲ್ಲಿ ನಿಂತು ಯೋಗದ ಮಹತ್ವ ಸಾರಿದ್ರು!
ಭಾರತ ಅಂದ್ರೆ ಏನು ಅನ್ನೋದನ್ನು ಮೋದಿ ಪರಿಚಯಿಸಿದ್ರು!
ಈ ಬಾರಿ ಪ್ರಧಾನಿ ಮೋದಿ ಅವರು ಅಮೆರಿಕಾಕ್ಕೆ ಹೋಗಿ ಕೆಲವು ವಿಷಯಗಳ ಬಗ್ಗೆ ಚರ್ಚಿಸಿ, ಭಾರತ ಮತ್ತು ಅಮೆರಿಕಾದ ನಡುವೆ ಒಳ್ಳೇ ಭಾಂಧವ್ಯ ಬೆಸೆದಿದ್ದಾರೆ. ಉತ್ತಮವಾದ ಸೇತುವೆ ಕಟ್ಟಬೇಕು ಅನ್ನೋದು ಮೋದಿ ಅವರ ಮೂಖ್ಯ ಉದ್ದೇಶ. ಆದರೆ ಮೋದಿ ಅವರು ಅಮೆರಿಕಾಗೆ ಹೋದಾಗ ನಮ್ಮ ಪೂರ್ವಜರು ಜಗತ್ತಿಗೆ ನೀಡಿದ ಅತ್ಯಮೂಲ್ಯ ಕೊಡುಗೆಯಾಗಿರೋ ಯೋಗ ಡೇ ಕೂಡ ಇತ್ತು. ನ್ಯೂಯಾರ್ಕ್‌ನ ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಮುಂದೆ ಹುಲ್ಲುಹಾಸಿನಲ್ಲಿ ಯೋಗ ಕಾರ್ಯಕ್ರಮ ಆಯೋಜಿಸಲಾಗಿತ್ತು. ಇದರಲ್ಲಿ 135 ರಾಷ್ಟ್ರಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು. ಇದೇ ಕಾರಣಕ್ಕೆ ಈ ಯೋಗ ದಿನ ಗಿನ್ನೆಸ್ ವಿಶ್ವ ದಾಖಲೆಯನ್ನ ಸೇರ್ಪಡೆಯಾಗಿದೆ. ಒಂದು ಭೂಮಿ, ಒಂದು ಕುಟುಂಬ ಅಂತ ಹೇಳಿ,’ವಸುದೈವ ಕುಟುಂಬಕಂ’ ಅನ್ನೋದನ್ನ ವಿದೇಶದಲ್ಲಿ ಮೋದಿ ಸಾರಿದ್ದಾರೆ. ವಿಶ್ವಸಂಸ್ಥೆಯ ಪ್ರಧಾನ ಕಚೇರಿ ಮುಂದೆ ಯೋಗದ ಯಾಗ ಶುರುವಾಗುತ್ತಿದ್ದಂತೆ, ಆ ಯಾಗದ ಯಶಸ್ಸು ಇಡೀ ಪ್ರಪಂಚವನ್ನೇ ಸೆಳೆದುಬಿಟ್ಟಿತ್ತು. ಅಮೆರಿಕಾದ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಯೋಗಾ ದಿನ ಆಚರಣೆ ಮಾಡಿ, ಯೋಗದ ಅರ್ಥ ತಿಳಿಸಿ ಭಾರತದ ಸಾಮರ್ಥ್ಯವನ್ನ ಜಗತ್ತಿಗೆ ಸಾರಿದ್ದಾರೆ ಪ್ರಧಾನಿ ಮೋದಿ.
ಭಾರತ, ಅಮೆರಿಕಾ ನಡುವಿನ ಬಾಂಧವ್ಯಕ್ಕೆ ಮೈಲಿಗಲ್ಲು!
ದೊಡ್ಡಣ್ಣನ ನೆಲದಲ್ಲಿ ನಿಂತು ವಿಶ್ವದ ಗಮನ ಸೆಳೆದ ಮೋದಿ!
ನರೇಂದ್ರ ಮೋದಿ ಅವರು ಪ್ರಧಾನಿ ಆದ್ಮೇಲೆ ಅನೇಕ ಬಾರಿ ಅಮೆರಿಕಾಗೆ ಭೇಟಿ ಮಾಡಿದ್ದಾರೆ. ಆದ್ರೆ, ಈ ಬಾರಿ ಅಧಿಕೃತವಾಗಿ ಅಮೆರಿಕ ಅಧ್ಯಕ್ಷರ ಆಹ್ವಾನದ ಮೇಲೆ ಹೋಗಿದ್ದಾರೆ. ಇದ್ಕೂ ಮುನ್ನ ಮನಮೋಹನ್ ಸಿಂಗ್ ಅವರಿಗೆ ಅಮೆರಿಕಾ ಆಹ್ವಾನವನ್ನು ನೀಡಿತ್ತು. ಹೀಗಾಗಿ ಅಮೆರಿಕಾ ಅಧ್ಯಕ್ಷರ ಆಹ್ವಾನದ ಮೇಲೆ ಪ್ರವಾಸಕ್ಕೆ ಹೋಗಿರೋ ಭಾರತದ ಎರಡನೇ ಪ್ರಧಾನಿ ಅನ್ನೋ ಹಿರಿಮೆಯನ್ನು ಮೋದಿ ಪಡೆದಿದ್ದಾರೆ. ಇನ್ನು ಯುಎಸ್ನಲ್ಲಿ ಜಂಟಿ ಅಧಿವೇಶನವನ್ನ ಉದ್ದೇಶಿಸಿ ಎರಡನೇ ಬಾರಿಗೆ ಮೋದಿ ಮಾತಾಡಿದ್ದು, ಈ ಪ್ರಶಂಸೆ ಪಾತ್ರವಾಗಿರೋ ಭಾರತದ ಏಕೈಕ ಪ್ರಧಾನಿ ನರೇಂದ್ರ ಮೋದಿ ಅವರಾಗಿದ್ದಾರೆ. ದೇಶದ ಹಿತವನ್ನ ಬಯಸಿ, ದೂರದೃಷ್ಟಿ ಹೊತ್ತು ಅಮೆರಿಕಾಗೆ ಹೋದ ಮೋದಿ ಅವರಿಗೆ ಸಿಕ್ಕ ಗೌರವ ದೇಶಕ್ಕೆ ಲಭಿಸಿದಂತೆ. ಮೋದಿಯವರ ಅಮೆರಿಕಾದ ಭೇಟಿಯಿಂದ ನೆರೆ ರಾಷ್ಟ್ರಗಳಲ್ಲಿ ತುಸು ಆತಂಕ ಸೃಷ್ಠಿಯಾಗಿದ್ದಂತೂ ನಿಜ. ಈ ಎರಡು ದೇಶಗಳ ಭೇಟಿ ಅನೇಕ ರಾಷ್ಟ್ರಗಳ ನಿದ್ದೆಕೆಡಿಸಿರುವುದಂತೂ ಮೇಲ್ನೋಟಕ್ಕೆ ಕಾಣ್ತಿದೆ. ಹೌದು, ಈ ಭೇಟಿ ಇತರ ರಾಷ್ಟ್ರಗಳ ಮೇಲೂ ಪರಿಣಾಮ ಬೀರಲಿದೆ ಅನ್ನೋ ಮಾತುಗಳು ಹೆಚ್ಚಾಗಿ ಕೇಳಿ ಬರ್ತಿವೆ. ಸರ್ಜಿಕಲ್ ಸ್ಟ್ರೈಕ್, ಏರ್ ಸ್ಟ್ರೈಕ್ ಅಂತ ನಡುಕ ಹುಟ್ಟಿಸಿದ್ದ ಮೋದಿ, ಈ ಬಾರಿ ಅದ್ಯಾವ ಸ್ಟ್ರೈಕ್ ಮಾಡ್ತಾರೋ ಅನ್ನೋ ಟೆನ್ಷನ್ನಲ್ಲಿ ನೆರೆ ರಾಷ್ಟ್ರಗಳು ಕೈ ಹಿಸುಕಿಕೊಳ್ಳುತ್ತಿವೆ ಅಂತೆ.
ಭಾರತ ಮತ್ತು ಅಮೆರಿಕದ ನಡುವೆ ಶಿಕ್ಷಣ, ತಂತ್ರಜ್ಞಾನ, ರಕ್ಷಣೆ, ಬಾಹ್ಯಾಕಾಶ ಸಹಕಾರ ಮತ್ತು ರಕ್ಷಣಾ ಸಹಕಾರದ ಜೊತೆಗೆ ಒಪ್ಪಂದಗಳು ಆಗಿವೆ. ಇದರಿಂದ ಭಾರತ-ಅಮೆರಿಕ ಸಂಬಂಧ ಮುಂದಿನ ಹಂತಕ್ಕೆ ಸಾಗಿ, ಹೊಸ ಯುಗಾರಂಭವನ್ನ ಸೃಷ್ಟಿಸಿವೆ. ಇದರಿಂದ ಖಂಡಿತವಾಗಿ ಭಾರತ ಮತ್ತು ಅಮೆರಿಕ ಬಾಂಧ್ಯವೇ ಮತ್ತೊಂದು ರೂಪ ತಾಳುವುದರಲ್ಲಿ ಅನುಮಾನವೇ ಇಲ್ಲ. ಇನ್ನು ಮೋದಿ ಅಮೆರಿಕಾ ಭೇಟಿ ನಿರ್ಧಾರ ಸ್ವತಃ ಮೋದಿ ಅವರದ್ದಲ್ಲ, ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ದಂಪತಿಯ ಅಧಿಕೃತವಾಗಿ ಆಹ್ವಾನದ ಮೇರೆಗೆ ಮೋದಿ ಅಮೆರಿಕಾ ಭೇಟಿ ಆಗಿದೆ. ಶ್ವೇತಭವನದಲ್ಲಿ ಮೋದಿಯವ್ರ ಬರುವಿಕೆಯನ್ನ ಕಾದಿದ್ದ ಬೈಡೆನ್ ಫ್ಯಾಮಿಲಿ, ಹಿಂದೆ ಯಾವ ರಾಷ್ಟ್ರಕ್ಕೂ ಕೊಡದಷ್ಟು ಗೌರವವನ್ನ ಮೋದಿ ಅವ್ರಿಗೆ ಕೊಟ್ಟು ಸ್ವಾಗತಿಸಿದ್ದಾರೆ. ಇದು ಭಾರತಕ್ಕೆ ಸಿಕ್ಕ ಗೌರವವೂ ಹೌದು. ಬೈಡೆನ್ ಅವ್ರ ಕುಟುಂಬ ಮೋದಿ ಆಗಮನಕ್ಕೆ ಖುಷಿಯಲ್ಲಿ ತೇಲಾಡಿ, ರತ್ನಗಂಬಳಿ ಹಾಸಿ ಆಹ್ವಾನ ಮಾಡಿಕೊಂಡಿದೆ.

ಈ ಗ್ರೀನ್ ಡೈಮಂಡ್ ಹಿಂದಿದೆ ಹಲವು ವಿಶೇಷ!
ಭರ್ಜರಿ ಔತಣಕೂಟ ಆದ ಮೇಲೆ, ಬೈಡೆನ್ ಫ್ಯಾಮಿಲಿ ಜೊತೆ ನರೇಂದ್ರ ಮೋದಿ ಮಾತುಕತೆ ನಡೆಸಿದ್ದಾರೆ. ನಂತರ ಬೈಡೆನ್ ಫ್ಯಾಮಿಲಿ ಮೋದಿಗೆ ವಿಶೇಷವಾದ ಗಿಫ್ಟ್ ಗಳನ್ನ ಕೊಟ್ಟಿದ್ದಾರೆ. ಇದೇ ಸಮಯದಲ್ಲಿ ಬೈಡನ್ ಪತ್ನಿ ಅಮೆರಿಕದ ಪ್ರಥಮ ಹಿಳೆ ಜಿಲ್ ಬೈಡನ್‌ಗೆ ಗ್ರೀನ್ ಡೈಮಂಡ್ ಅನ್ನು ಮೋದಿ ಗಿಫ್ಟ್ ಆಗಿ ಕೊಟ್ಟಿದ್ದಾರೆ. ರಾಜರ ಆಳ್ವಿಕೆ ಸಮಯದಲ್ಲಿ ಬಿಟ್ಟರೆ ಇತ್ತೀಚೆಗೆ ಇತಿಹಾಸದಲ್ಲೇ ಪ್ರಥಮ ಬಾರಿಗೆ ವಜ್ರದ ಉಡುಗೊರೆ ನೀಡಿದ ವ್ಯಕ್ತಿ ಮೋದಿಯಾಗಿದ್ದಾರೆ. ಇನ್ನು ಪ್ರಧಾನಿಯಾಗಿ ನರೇಂದ್ರ ಮೋದಿ 9 ವರ್ಷವಾಯ್ತು. ಹಲವಾರು ದೇಶಗಳಿಗೆ ಪ್ರವಾಸ ಹೋಗಿದ್ದಾರೆ. ಆದ್ರೆ ಯಾರಿಗೂ ವಜ್ರದ ಗಿಫ್ಟ್ ಕೊಟ್ಟಿರಲಿಲ್ಲ. ಇದೇ ಮೊದಲ ಬಾರಿಗೆ ಅಂದ್ರೆ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಮೋದಿ ವಜ್ರವನ್ನು ಗಿಫ್ಟ್ ಆಗಿ ಕೊಟ್ಟಿದ್ದಾರೆ.
ಪ್ರಧಾನಿ ಮೋದಿ ಅವ್ರು ಬೈಡೆನ್ ಪತ್ನಿಗೆ ಕೊಟ್ಟ ಗ್ರೀನ್ ಡೈಮಂಡ್ ಏನ್ ವಿಶೇಷ ಅನ್ನೋದು ನಿಮ್ಗೆ ಪ್ರಶ್ನೆ ಬಂದೇ ಬರಬಹುದು. ಇದು ಸೂರತ್‌ನ ಪ್ರಯೋಗಾಲಯದಲ್ಲಿ ತಯಾರಿಸಿದ 7.5 ಕ್ಯಾರೆಟ್ ಹಸಿರು ವಜ್ರ ಇದಾಗಿದೆ. ಈ ವಜ್ರ ಭೂಮಿಯಿಂದ ಅಗೆದ ವಜ್ರಗಳ ಕೆಮಿಕಲ್ ಮತ್ತು ಆಪ್ಟಿಕಲ್ ಗುಣಲಕ್ಷಣಗಳನ್ನ ತೋರಿಸುತ್ತಂತೆ. ಇದು ಪರಿಸರ ಸ್ನೇಹಿ ಅಂತಲೂ ಹೇಳಲಾಗ್ತಿದೆ. ಯಾಕಂದ್ರೆ ಸೊಲಾರ್ ಮತ್ತು ವಿಂಡ್ ಪವರ್ನಂತಹ ಪರಿಸರ-ವೈವಿಧ್ಯಮಯ ರಿಸೋರ್ಸ್ಗಳನ್ನ ಇದರ ತಯಾರಿಯಲ್ಲಿ ಬಳಸಲಾಗಿದೆಯಂತೆ. ಈ ಗ್ರೀನ್ ಡೈಮಂಡನ್ನಅತ್ಯಾಧುನಿಕ ತಂತ್ರಜ್ಞಾನವನ್ನ ಬಳಸಿಕೊಂಡು ನಿಖರವಾಗಿ ಕೆತ್ತಲಾಗಿದೆ ಅಂತ ಹೇಳಲಾಗ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ