newsfirstkannada.com

ಫ್ರಾನ್ಸ್​​ನತ್ತ ಹೊರಟ ಮೋದಿ.. ಯಾಕೆ ಪ್ಯಾರಿಸ್ ಪ್ರವಾಸ ಮಾಡ್ತಿದ್ದೇನೆ ಎಂದು ತಿಳಿಸಿದ ಪ್ರಧಾನಿ

Share :

13-07-2023

    ಫ್ರಾನ್ಸ್​ ಪ್ರವಾಸದ ವೇಳೆ ಹಲವು ಮಹತ್ವದ ಚರ್ಚೆಗಳು ನಡೆಯಲಿವೆ

    ಮೋದಿ ಭೇಟಿಯಿಂದ ಭಾರತ-ಫ್ರಾನ್ಸ್​ ರಕ್ಷಣಾ ಒಪ್ಪಂದಕ್ಕೆ ಇನ್ನಷ್ಟು ಬಲ

    ಫ್ರಾನ್ಸ್​ನಲ್ಲಿನ ಪ್ರಸಿದ್ಧ ಮ್ಯೂಸಿಯಂಗೆ ಭೇಟಿ ನೀಡಲಿರುವ ಮೋದಿ

ಪ್ರಧಾನಿ ಮೋದಿ ಇಂದಿನಿಂದ 2 ದಿನಗಳ ಕಾಲ ಫ್ರಾನ್ಸ್​ನ ಪ್ರವಾಸ ಕೈಗೊಂಡಿದ್ದಾರೆ. ಬೆಳಗ್ಗೆ ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮೋದಿ ಫ್ರಾನ್ಸ್​ನತ್ತ ಪ್ರಯಾಣ ಬೆಳಸಿದ್ದಾರೆ. ರಾಜಧಾನಿ ಪ್ಯಾರೀಸ್​​ಗೆ ಭೇಟಿ ನೀಡಲಿರುವ ಮೋದಿ, ಫ್ರಾನ್ಸ್​ ಅಧ್ಯಕ್ಷ ಇಮ್ಯಾನ್ಯುಯಲ್ ಮ್ಯಾಕ್ರನ್ ಜೊತೆ ರಕ್ಷಣೆ ಮತ್ತು ಬಾಹ್ಯಾಕಾಶ ಸೇರಿದಂತೆ ವಿವಿಧ ಕ್ಷೇತ್ರಗಳ ಪರಸ್ಪರ ಸಹಕಾರದ ಬಗ್ಗೆ ಮಹತ್ವದ ಒಪ್ಪಂದ ಮಾಡಿಕೊಳ್ಳಲಿದ್ದಾರೆ.

ಫ್ರಾನ್ಸ್​ ಪ್ರವಾಸದ ಬಗ್ಗೆ ತಮ್ಮ ವೆಬ್​​ಸೈಟ್​ನಲ್ಲಿ ಬರೆದುಕೊಂಡಿರುವ ಮೋದಿ, ಅಲ್ಲಿನ ಅಧ್ಯಕ್ಷ ಮ್ಯಾಕ್ರನ್ ಆಹ್ವಾನದ ಮೇರೆಗೆ ಹೋಗುತ್ತಿದ್ದೇನೆ.  French National Day ಪರೇಡ್​ಗೆ ಮುಖ್ಯ ಅತಿಥಿಯಾಗಿ ಆಹ್ವಾನಿಸಿದ್ದಾರೆ. 269 ಸದಸ್ಯರ ಭಾರತದ ಸೇನಾ ತಂಡ, ವಾಯುಪಡೆಯ ರಫೆಲ್‌ ಫೈಟರ್ ಜೆಟ್​ಗಳು ಕೂಡ ಈ ಪರೇಡ್​ನಲ್ಲಿ ಪಾಲ್ಗೊಳ್ಳಲಿವೆ. ಎರಡು ರಾಷ್ಟ್ರಗಳ ಜೊತೆ ಮಹತ್ವದ ಮಾತುಕತೆಯನ್ನು ಎದುರು ನೋಡುತ್ತಿದ್ದೇನೆ ಎಂದು ತಿಳಿಸಿದ್ದಾರೆ.

ಇನ್ನು ಮೋದಿ ಅವರು ಅಲ್ಲಿನ  ಪ್ರಸಿದ್ಧ ಮ್ಯೂಸಿಯಂಗೆ ಭೇಟಿ ನೀಡಲಿದ್ದಾರೆ. ಮೋದಿಗೆ ಗೌರವಾರ್ಥವಾಗಿ ಅಧ್ಯಕ್ಷ ಮ್ಯಾಕ್ರನ್ ವಿಶೇಷ ಭೋಜನಕೂಟ ಆಯೋಜನೆ ಮಾಡಲಿದ್ದಾರೆ. ಭಾರತ ಮತ್ತು ಫ್ರಾನ್ಸ್​ ನಡುವೆ ಮೊದಲಿಂದಲೂ ರಕ್ಷಣಾ ಒಪ್ಪಂದ ನಡೆಯುತ್ತಿದೆ. ಈ ಹಿನ್ನೆಲೆಯಲ್ಲಿ ಇದನ್ನು ಇನ್ನಷ್ಟು ಬಲಗೊಳಿಸಲು ನೌಕಾಪಡೆಗಾಗಿ ರಫೇಲ್ ಫೈಟರ್ ಜೆಟ್​ಗಳನ್ನು ಭಾರತ ಖರೀದಿ ಮಾಡುವ ಬಗ್ಗೆ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅಧ್ಯಕ್ಷತೆಯಲ್ಲಿ ಮಂಡಳಿ ಸಭೆ ನಡೆಯಲಿದೆ. ಸಭೆಯಲ್ಲಿ 25 ರಫೇಲ್ ಫೈಟರ್ ಜೆಟ್, 3 ಸ್ಕಾರ್ಪಿನ್ ಸಬ್ ಮರೀನ್ ಖರೀದಿಗೆ ಭಾರತ ಒಪ್ಪಿಗೆ ನೀಡುವ ಸಾಧ್ಯತೆ ಇದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರಾನ್ಸ್​​ನತ್ತ ಹೊರಟ ಮೋದಿ.. ಯಾಕೆ ಪ್ಯಾರಿಸ್ ಪ್ರವಾಸ ಮಾಡ್ತಿದ್ದೇನೆ ಎಂದು ತಿಳಿಸಿದ ಪ್ರಧಾನಿ

https://newsfirstlive.com/wp-content/uploads/2023/07/FRANCE_MODI.jpg

Load More