ಗ್ರೀಸ್ನಿಂದ ನೇರವಾಗಿ ಬೆಂಗಳೂರಿಗೆ ಆಗಮನ
HAL ವಿಮಾನ ನಿಲ್ದಾಣದ ಆಚೆ ಮೋದಿ ಭಾಷಣ
‘ಜೈ ವಿಜ್ಞಾನ್, ಜೈ ಅನುಸಂಧಾನ್’ ಎಂದು ಘೋಷಣೆ
ವಿಶ್ವದ ಬಾಹ್ಯಾಕಾಶ ಯಾನದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ ಇಸ್ರೋ ವಿಜ್ಞಾನಿಗಳಿಗೆ ಎಲ್ಲೆಡೆ ಮೆಚ್ಚುಗೆಯ ಮಹಾಪೂರ ಹರಿದು ಬರ್ತಿದೆ. ಇದೀಗ ಪ್ರಧಾನಿ ನರೇಂದ್ರ ಬೆಂಗಳೂರಿಗೆ ಆಗಮಿಸಿದ್ದು, ಇಸ್ರೋ ವಿಜ್ಞಾನಿಗಳನ್ನು ಅಭಿನಂದಿಸುತ್ತಿದ್ದಾರೆ.
ಬೆಂಗಳೂರಿನ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಮೋದಿ ಜೈ ಜವಾನ್, ಜೈ ಕಿಶಾನ್, ಜೈ ವಿಜ್ಞಾನ್, ಜೈ ಅನುಸಂಧಾನ್ ಎಂದು ಘೋಷಣೆ ಕೂಗಿದರು. ಬಳಿಕ ಇಡೀ ವಿಶ್ವಕ್ಕೆ ನಮ್ಮ ವಿಜ್ಞಾನಿಗಳು ಭಾರತದ ತಾಖತ್ತನ್ನು ತೋರಿಸಿಕೊಟ್ಟಿದ್ದಾರೆ ಎಂದು ಹೇಳಿದರು. HALನಿಂದ ರಸ್ತೆ ಮಾರ್ಗದ ಮೂಲಕ ನೇರವಾಗಿ ಇಸ್ರೋ ಕಚೇರಿಯನ್ನು ಮೋದಿ ತಲುಪಿದ್ದಾರೆ.
ಪ್ರಧಾನಿ ಮೋದಿ ಸಂಚರಿಸಲಿರುವ ರಸ್ತೆಗಳಲ್ಲಿ ಬಿಗಿಭದ್ರತೆ ಕೈಗೊಳ್ಳಲಾಗಿದೆ. ರಸ್ತೆಯುದ್ದಕ್ಕೂ ಸುಮಾರು 2 ಸಾವಿರ ಪೊಲೀಸರನ್ನು ನಿಯೋಜಿಸಲಾಗಿದ್ದು, ಮಧ್ಯರಾತ್ರಿ 2 ಗಂಟೆಯಿಂದಲೇ ತೀವ್ರ ಕಟ್ಟೆಚ್ಚರ ವಹಿಸಲಾಗುತ್ತೆ. ಇನ್ನು ಪ್ರಧಾನಿ ಮೋದಿ ಸಂಚರಿಸುವ ರಸ್ತೆಗಳ ಬದಲಿಗೆ ಸಾರ್ವಜನಿಕರು ಪರ್ಯಾಯ ಮಾರ್ಗ ಬಳಕೆಗೆ ಪೊಲೀಸರು ಮನವಿ ಮಾಡಿದ್ದಾರೆ.
ಹೆಚ್‌ಎಎಲ್ ವಿಮಾನನಿಲ್ದಾಣದಿಂದ ಓಲ್ಡ್ ಮದ್ರಾಸ್ ರಸ್ತೆ, ಹಲಸೂರು, ಎಂ.ಜಿ.ರಸ್ತೆ, ರಾಜಭವನ, ಮೇಖ್ರಿ ಸರ್ಕಲ್, ಸದಾಶಿವನಗರ ಜಂಕ್ಷನ್, ಯಶವಂತಪುರ ಸರ್ಕಲ್, ಗೊರಗುಂಟೆಪಾಳ್ಯ, ಪೀಣ್ಯ ಮೊದಲ ಹಂತ ಅಲ್ಲಿಂದ ಜಾಲಹಳ್ಳಿ ಕ್ರಾಸ್ ಬಳಿಕ ಇಸ್ರೋ ಕಚೇರಿಗೆ ಮೋದಿ ತಲುಪಲಿದ್ದಾರೆ. ಮೋದಿ ಬೆಂಗಳೂರಿಗೆ ಆಗಮಿಸಲಿದ್ದು ರೋಡ್ ಶೋ ನಡೆಸಲಿದ್ದಾರೆ ಎನ್ನಲಾಗಿತ್ತು ಆದ್ರೆ ರೋಡ್ ಶೋ ಇರುವುದಿಲ್ಲ ಅಂತ ಸಂಸದೆ ಶೋಭಾ ಕರಂದ್ಲಾಜೆ ಸ್ಪಷ್ಟನೆ ನೀಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ