newsfirstkannada.com

ಫ್ರಾನ್ಸ್​​ಗೆ ಬಂದಿಳಿದ ಪ್ರಧಾನಿ ಮೋದಿ: ನಾಳೆ ಬಾಸ್ಟಿಲ್ ದಿನ ಆಚರಣೆಯಲ್ಲಿ ಭಾಗಿ; ಮಹತ್ವದ ಚರ್ಚೆ

Share :

13-07-2023

  ಫ್ರಾನ್ಸ್​ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿ

  ಮೋದಿಯನ್ನ ಬರಮಾಡಿಕೊಂಡ ಫ್ರಾನ್ಸ್​​ ಪ್ರಧಾನಿ

  ನಾಳೆಯಿಂದ ಎರಡು ದಿನ ಮೋದಿ ಫ್ರಾನ್ಸ್​ ಪ್ರವಾಸ

ಪ್ಯಾರೀಸ್​​​: ಇಂದು ವಿಮಾನದ ಮೂಲಕ ಪ್ಯಾರೀಸ್​​ ಇಂಟರ್​ನ್ಯಾಷನಲ್​ ಏರ್​ಪೋರ್ಟ್​ಗೆ ಬಂದಿಳಿದ ಪ್ರಧಾನಿ ನರೇಂದ್ರ ಮೋದಿಯನ್ನು ಫ್ರಾನ್ಸ್​​ ಪ್ರಧಾನಿ ಎಲಿಸಬೆತ್ ಬೋರ್ನ್ ಭವ್ಯವಾಗಿ ಸ್ವಾಗತಿಸಿದರು. ಇದಕ್ಕೆ ಫ್ರೆಂಚ್​ ಭಾಷೆಯಲ್ಲೇ ಟ್ವೀಟ್ ಮಾಡಿರುವ ಮೋದಿ, ತನ್ನನ್ನ ಬರಮಾಡಿಕೊಂಡ ಫ್ರಾನ್ಸ್​​ ಪ್ರಧಾನಿ ಎಲಿಸಬೆತ್ ಬೋರ್​​ಗೆ ಧನ್ಯವಾದ ತಿಳಿಸಿದರು.

ಪ್ರಧಾನಿ ನರೇಂದ್ರ ಮೋದಿಯವರು ಎರಡು ದಿನಗಳ ಪ್ರವಾಸಕ್ಕಾಗಿ ಫ್ರಾನ್ಸ್‌ ಬಂದಿದ್ದಾರೆ. ನಾಳೆ ಎರಡು ದೇಶಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳ ಕುರಿತಾದ ಮಹತ್ತರ ಮಾತುಕತೆ ನಡೆಸಲಿದ್ದಾರೆ. ಅದರಲ್ಲೂ ಫ್ರಾನ್ಸ್​​​ ಅಧ್ಯಕ್ಷ ಇಮ್ಯಾನುಯೆಲ್​​ ಮ್ಯಾಕ್ರನ್ ಜತೆಗೆ ಹಲವಾರು ಮಹತ್ವದ ಚರ್ಚೆಗಳನ್ನು ನಡೆಸಲಿದ್ದಾರೆ.

ಈ ಸಂಬಂಧ ಟ್ವೀಟ್​ ಮಾಡಿರುವ ಪ್ರಧಾನಿ ಮೋದಿ, ಮ್ಯಾಕ್ರನ್ ಜತೆಗಿನ ಚರ್ಚೆ ಎರಡು ದೇಶಗಳ ನಡುವಿನ ರಕ್ಷಣಾ ಸಂಬಂಧಗಳ ಬಲಿಷ್ಠಗೊಳಿಸಲಿದೆ. ಮುಂದಿನ 25 ವರ್ಷಗಳಲ್ಲಿ ದೀರ್ಘಾವಧಿಯ ಪಾಲುದಾರಿಕೆಗೆ ಕಾರಣವಾಗಲಿದೆ. ಇದು ನಮ್ಮಲ್ಲಿ ಹೊಸ ಚೈತನ್ಯವನ್ನು ತುಂಬಲಿದೆ ಎಂದಿದ್ದಾರೆ.

ಭಾರತ-ಫ್ರಾನ್ಸ್ ಸಹಕಾರವನ್ನು ಹೆಚ್ಚಿಸಲು ಎದುರು ನೋಡುತ್ತಿದ್ದೇನೆ. ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾದ ಬಳಿಕ ಭಾರತೀಯರೊಂದಿಗೆ ಸಂವಾದ ನಡೆಸಲಿದ್ದೇನೆ ಎಂದರು.

ಬಾಸ್ಟಿಲ್ ಡೇ ಪರೇಡ್‌ನಲ್ಲಿ ಪ್ರಧಾನಿ ಮೋದಿ

ಇನ್ನು, ನಾಳೆ ಫ್ರಾನ್ಸ್‌ನಲ್ಲಿ ನಡೆಯಲಿರೋ ಬಾಸ್ಟಿಲ್ ಡೇ ಪರೇಡ್‌ನಲ್ಲಿ ಗೌರವಾನ್ವಿತ ಅತಿಥಿಯಾಗಿ ಭಾರತದ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲಿದ್ದಾರೆ. ಇವರೊಂದಿಗೆ ಭಾರತೀಯ ಸಶಸ್ತ್ರ ಪಡೆಗಳ ತುಕಡಿಯು ಫ್ರೆಂಚ್ ಸಹವರ್ತಿಗಳ ಜತೆ ಪರೇಡ್‌ನಲ್ಲಿ ಭಾಗವಹಿಸಲಿದೆ ಎಂದು ತಿಳಿದು ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಫ್ರಾನ್ಸ್​​ಗೆ ಬಂದಿಳಿದ ಪ್ರಧಾನಿ ಮೋದಿ: ನಾಳೆ ಬಾಸ್ಟಿಲ್ ದಿನ ಆಚರಣೆಯಲ್ಲಿ ಭಾಗಿ; ಮಹತ್ವದ ಚರ್ಚೆ

https://newsfirstlive.com/wp-content/uploads/2023/07/Modi-France.jpg

Load More