newsfirstkannada.com

ಮೋದಿ ಅಮೆರಿಕಾ ಪ್ರವಾಸ; ವಿಶ್ವಸಂಸ್ಥೆಯಲ್ಲಿ ನಮೋ ಯೋಗಾಭ್ಯಾಸ

Share :

20-06-2023

    ಐತಿಹಾಸಿಕ ಯೋಗ ಕಾರ್ಯಕ್ರಮದಲ್ಲಿ ಅಧಿಕಾರಿಗಳು ಭಾಗಿ!

    ವಸುದೈವ ಕುಟುಂಬಕಮ್​ ಘೋಷಾವಾಕ್ಯದೊಂದಿಗೆ ಯೋಗದಿನ

    ಜೂನ್​ 21ರಿಂದ 24ರವೆರೆಗೆ ಮೋದಿ ಅಮೆರಿಕಾ ಪ್ರವಾಸ!

ಭಾರತದ ಸಂಸ್ಕೃತಿಯಾಗಿರೋ ಯೋಗಕ್ಕೆ ಈಗ ಡಿಮ್ಯಾಂಡ್ ಹೆಚ್ಚಾಗಿದೆ. ಯೋಗ ದಿನದ ಮೂಲಕ ಇಡೀ ವಿಶ್ವವನ್ನ ತನ್ನತ್ತ ಸೆಳೆಯಲು ಮೋದಿ ಸಜ್ಜಾಗಿದ್ದಾರೆ. ಯೋಗದ ಮಹತ್ವವನ್ನ ಇಡೀ ಮನುಕುಲಕ್ಕೆ ಸಾರಲು ವಿಶ್ವದ ದೊಡ್ಡಣ್ಣ ಅಮೆರಿಕ ಮೋದಿಗೆ ಆಹ್ವಾನ ನೀಡಿದೆ. ವಿಶ್ವಸಂಸ್ಥೆಯ ಅಂಗಳದಲ್ಲಿ ಮೋದಿಯ ಯೋಗಾಭ್ಯಾಸ ಹೊಸ ಮನ್ವಂತರ ಸೃಷ್ಟಿಸಲು ಸಜ್ಜಾಗಿದೆ. ಪ್ರಧಾನಿಯಾಗಿ ಗದ್ದುಗೆ ಏರಿದ ಬಳಿಕ ದೇಶದ ಮಾತ್ರವಲ್ಲದೇ ವಿಶ್ವದೆಲ್ಲೆಡೆ ಛಾಪು ಮೂಡಿಸಿರೋ ಮೋದಿ ಈಗ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಅಣಿಯಾಗಿದ್ದಾರೆ. ಹಲವು ಮಾದರಿ ಕಾರ್ಯಗಳ ಮೂಲಕ ಇಡೀ ವಿಶ್ವವನ್ನೇ ತನ್ನತ್ತ ತಿರುಗಿ ನೋಡುವಂತೆ ಮಾಡಿದ್ದ ಮೋದಿ, ಈಗ ವಿಶ್ವದ ದೊಡ್ಡಣ್ಣ ಅಂತಲೇ ಖ್ಯಾತಿ ಹೊಂದಿರೋ ಅಮೆರಿಕಾದಲ್ಲಿ ಹೊಸ ಮನ್ವಂತರ ಸೃಷ್ಟಿಸಲು ಸಜ್ಜಾಗಿದ್ದಾರೆ.

ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಮೋದಿ ಮನ್ವಂತರ!

ಪ್ರಧಾನಿ ನರೇಂದ್ರ ಮೋದಿ ಜೂನ್​ 21ರಿಂದ 24ರವರೆಗೆ ಅಮೆರಿಕಾ ಪ್ರವಾಸ ಕೈಗೊಳ್ಳಲಿದ್ದಾರೆ. ಈ ವೇಳೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯಲ್ಲಿ ಜೂನ್​ 21ರಂದು ನಡೆಯಲಿರುವ ಅಂತರಾಷ್ಟ್ರೀಯ ಯೋಗ ದಿನ ಕಾರ್ಯಕ್ರಮವನ್ನ ಮೋದಿ ಮುನ್ನಡೆಸಲಿದ್ದಾರೆ. ಭಾರತೀಯರ ಪಾಲಿಗೆ ಇದೊಂದು ಐತಿಹಾಸಿಕ ಕ್ಷಣವಾಗಲಿದೆ. ಮೋದಿ ಅವರ ಪ್ರಯತ್ನದ ಫಲವಾಗಿ 2014ರಲ್ಲಿ ವಿಶ್ವಸಂಸ್ಥೆಯು ಜೂನ್​ 21ರ ದಿನವನ್ನ ಅಂತರಾಷ್ಟ್ರೀಯ ದಿನ ಅಂತ ಘೋಷಣೆ ಮಾಡಿತ್ತು. ಈ ಹಿನ್ನಲೆ ಈ ಬಾರಿಯ ಜೂನ್​ 21ರಂದು ವಿಶ್ವಸಂಸ್ಥೆಯ ಅಂಗಳದಲ್ಲಿ 9ನೇ ಅಂತರಾಷ್ಟ್ರೀಯ ಯೋಗ ದಿನದ ಅಂಗವಾಗಿ ಮೋದಿ ಯೋಗಾಭ್ಯಾಸ ಮಾಡಲಿದ್ದಾರೆ. ಯೋಗದಿಂದಾಗುವ ಪ್ರಯೋಜನಗಳ ಕುರಿತು ಇಡೀ ವಿಶ್ವಕ್ಕೆ ಜಾಗೃತಿ ಮೂಡಿಸಲಿದ್ದಾರೆ.

ಜೂನ್​ 21ರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆವೆರೆಗೆ ಯೋಗಾಭ್ಯಾಸ

ವಸುದೈವ ಕುಟುಂಬಕಂ​ ಘೋಷವಾಕ್ಯದೊಂದಿಗೆ ಮೋದಿ ಯೋಗದಿನವನ್ನ ಮುನ್ನಡೆಸಲಿದ್ದಾರೆ. ಜೂನ್​ 21ರ ಬೆಳಿಗ್ಗೆ 8 ಗಂಟೆಯಿಂದ 9 ಗಂಟೆ ವೆರೆಗೆ ವಿಶ್ವಸಂಸ್ಥೆಯ ಪ್ರಧಾನ ಕಚೇರಿಯ ನಾರ್ಥ್​ ಲಾನ್​ನಲ್ಲಿ ಮೋದಿ ನೇತೃತ್ವದಲ್ಲಿ ಯೋಗ ಕಾರ್ಯಕ್ರಮ ನಡೆಯಲಿದೆ. ಐತಿಹಾಸಿಕ ಯೋಗ ಕಾರ್ಯಕ್ರಮದಲ್ಲಿ ವಿಶ್ವಸಂಸ್ಥೆಯ ಉನ್ನತ ಅಧಿಕಾರಿಗಳು, ವಿವಿಧ ದೇಶದ ರಾಯಭಾರಿಗಳು, ಸದಸ್ಯ ರಾಷ್ಟ್ರಗಳ ಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ ಮುಖ್ಯಸ್ಥರು ಹಾಗೂ ಸದಸ್ಯರು ಭಾಗವಹಿಸು ನಿರೀಕ್ಷೆ ಇದೆ. ಯೋಗ ದಿನದಲ್ಲಿ ಪಾಲ್ಗೊಂಡ ನಂತರ ಮೋದಿ ವಾಷಿಂಗ್ಟನ್ ಡಿಸಿಗೆ ಪ್ರಯಾಣಿಸಲಿದ್ದಾರೆ. ಅಲ್ಲಿ ಅಮೆರಿಕ ಕಾಂಗ್ರೆಸ್ ಉದ್ದೇಶಿಸಿ ಭಾಷಣ ಮಾಡಿ ಬಳಿಕ ಜೋ ಬೈಡನ್ ಅವರನ್ನ ಭೇಟಿಯಾಗಲಿದ್ದಾರೆ. ಜೋ ಬೈಡೆನ್ ಮತ್ತು ಜಿಲ್ ಬೈಡೆನ್ ಆಯೋಜಿಸಿರುವ ಸರ್ಕಾರಿ ಔತಣದಲ್ಲಿ ಸಹ ಮೋದಿ ಪಾಲ್ಗೊಳ್ಳಲಿದ್ದಾರೆ.

ಅಮೆರಿಕ ಸಂಸತ್‌ನಲ್ಲಿ ನರೇಂದ್ರ ಮೋದಿ ಭಾಷಣ

ಜೂನ್‌ 22ರಂದು ಮೋದಿ ಅಮೆರಿಕ ಅಧ್ಯಕ್ಷ ಜೋ ಬೈಡೆನ್‌ ಅವರನ್ನ ಭೇಟಿ ಮಾಡಿ, ದ್ವಿಪಕ್ಷೀಯ ಮಾತುಕತೆ ನಡೆಸುವ ನಿರೀಕ್ಷೆ ಇದೆ. ಅದೇ ದಿನ ಅಮೆರಿಕ ಸಂಸತ್ತನ್ನು ಉದ್ದೇಶಿಸಿ ಮೋದಿ ಭಾಷಣ ಸಹ ಮಾಡಲಿದ್ದಾರೆ. ವಾಷಿಂಗ್ಟನ್‌ನಲ್ಲಿ ವಿವಿಧ ಕಂಪನಿಗಳ ಸಿಇಒಗಳು, ವೃತ್ತಿಪರರು, ಉದ್ಯಮಿಗಳ ಜತೆ ಸಂವಾದ ನಡೆಸುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳು ಮೋದಿ ಅವರ ಅಮೆರಿಕ ಪ್ರವಾಸ ಪಟ್ಟಿಯಲ್ಲಿವೆ. ಯೋಗ ದಿನದ ಮೂಲಕ ಹೊಸ ಮೈಲಿಗಲನ್ನ ಸೃಷ್ಟಿಸಲು ಸಜ್ಜಾಗಿರೋ ನಮೋ ವಿಶ್ವಸಂಸ್ಥೆಯ ಅಂಗಳದಲ್ಲಿ ಛಾಪು ಮೂಡಿಸಲಿದ್ದಾರೆ. ವಸುದೈವ ಕುಟುಂಬಕಮ್‌ ಘೋಷವಾಕ್ಯವನ್ನ ವಿಶ್ವಕ್ಕೆ ಸಾರಿ ಭಾರತದ ಘನತೆಯನ್ನ ಎತ್ತಿಹಿಡಿಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ ಅಮೆರಿಕಾ ಪ್ರವಾಸ; ವಿಶ್ವಸಂಸ್ಥೆಯಲ್ಲಿ ನಮೋ ಯೋಗಾಭ್ಯಾಸ

https://newsfirstlive.com/wp-content/uploads/2023/06/pm-modi-1.jpg

Load More