newsfirstkannada.com

ಇಂದು ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟನೆ; ಇದರ ವಿಶೇಷತೆ ಏನು ಗೊತ್ತಾ?

Share :

18-07-2023

  ಪೋರ್ಟ್ ಬ್ಲೇರ್‌ನ ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ

  ವಿಡಿಯೋ ಕಾನ್ಫರೆನ್ಸ್​ ಮೂಲಕ ಉದ್ಘಾಟಿಸಲಿರುವ ಪ್ರಧಾನಿ ಮೋದಿ

  710 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾದ ಹೊಸ ಟರ್ಮಿನಲ್

ಇಂದು ಪ್ರಧಾನಿ ನರೇಂದ್ರ ಮೋದಿ ಪೋರ್ಟ್ ಬ್ಲೇರ್‌ನ ವೀರ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲಿದ್ದಾರೆ. ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಉದ್ಘಾಟಿಸಲಿದ್ದಾರೆ.

ಸುಮಾರು 710 ಕೋಟಿ ರೂಪಾಯಿ ವೆಚ್ಚದಲ್ಲಿ ಹೊಸ ಟರ್ಮಿನಲ್ ನಿರ್ಮಾಣ ಮಾಡಲಾಗಿದೆ. ಈ ವಿಮಾನ ನಿಲ್ದಾಣ ಅಂಡಮಾನ್ ಮತ್ತು ನಿಕೋಬಾರ್ ಸಂಪರ್ಕ ಹೆಚ್ಚಿಸಲಿದೆ.

ಅಂದಹಾಗೆಯೇ ಇಂದು ಉದ್ಘಾಟನೆಗೊಳ್ಳಲಿರಿವ ವೀರ ಸಾವರ್ಕರ್ ಅಂತರಾಷ್ಟ್ರೀಯ ವಿಮಾನ ನಿಲ್ದಾಣವನ್ನು  40,800 ಚದರ ಮೀಟರ್‌ನ ಒಟ್ಟು ಪ್ರದೇಶಹೊಂದಿದ್ದು, ಹೊಸ ಟರ್ಮಿನಲ್ ಕಟ್ಟಡವು ವಾರ್ಷಿಕವಾಗಿ ಸುಮಾರು 50 ಲಕ್ಷ ಪ್ರಯಾಣಿಕರನ್ನು ನಿಭಾಯಿಸುವ ಸಾಮರ್ಥ್ಯವನ್ನು ಹೊಂದಿದೆ.

80 ಕೋಟಿ ರೂಪಾಯಿ ವೆಚ್ಚದಲ್ಲಿ ಎರಡು ಬೋಯಿಂಗ್-767-400 ಮತ್ತು ಎರಡು ಏರ್‌ಬಸ್-321 ಮಾದರಿಯ ವಿಮಾನಗಳಿಗೆ ಸೂಕ್ತವಾದ ಅಪ್ರಾನ್ ನಿರ್ಮಾಣ ಮಾಡಲಾಗಿದೆ. ಏಕಕಾಲಕ್ಕೆ ಹತ್ತು ವಿಮಾನಗಳ ನಿಲುಗಡೆಗೆ ಅವಕಾಶ ಮಾಡಲಾಗಿದೆ.

ಈ ಮೊದಲು ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕರು ಹೆಚ್ಚಾಗಿ ಬರುತ್ತಿದ್ದರಿಂದ ಕೆಲ ಸಮಸ್ಯೆಗಳು ಉಂಟಾಗುತ್ತಿದ್ದವು. ಹೀಗಾಗಿ ಕೇಂದ್ರ ಸರ್ಕಾರ ಹೊಸ ಟರ್ಮಿನಲ್​ ನಿರ್ಮಾಣದ ಕಾರ್ಯ ಕೈಗೊಂಡಿತ್ತು. ಸದ್ಯ ಈ ನಿರ್ಮಾಣದ ಕಾರ್ಯಗಳೆಲ್ಲ ಮುಗಿದಿದ್ದು ಹೊಸ ಟರ್ಮಿನಲ್​ಗಾಗಿ ಬರೋಬ್ಬರಿ 710 ಕೋಟಿ ರೂ.ಗಳನ್ನು ವೆಚ್ಚ ಮಾಡಲಾಗಿದೆ.

ಒಟ್ಟು 28 ಚೆಕ್​ ಮಾಡುವ ಕೌಂಟರ್​ಗಳನ್ನು ಹೊಂದಿದ್ದು ಮೂರು ಪ್ರಯಾಣಿಕರ ಬೋರ್ಡಿಂಗ್​ ಬ್ರಿಡ್ಜ್​ಗಳನ್ನ ನಿರ್ಮಿಸಲಾಗಿದೆ. ಉನ್ನತ ತಂತ್ರಜ್ಞಾನದೊಂದಿಗೆ ಟರ್ಮಿನಲ್​ ರೂಫ್​ಗೆ ಸ್ಕೈಲೈಟ್ಸ್​ ಅನ್ನು ಅಳವಡಿಸಲಾಗಿದ್ದು ಇವು ದಿನದ 12 ಗಂಟೆವರೆಗೆ ನೈಸರ್ಗಿವಾದ ಬೆಳಕನ್ನು ನೀಡುತ್ತವೆ. ಈ ಸಮಯದಲ್ಲಿ ವಿದ್ಯುತ್​ ಅನ್ನು ಬಳಕೆ ಮಾಡುವುದಿಲ್ಲ ಎನ್ನಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಇಂದು ವೀರ ಸಾವರ್ಕರ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್ ಉದ್ಘಾಟನೆ; ಇದರ ವಿಶೇಷತೆ ಏನು ಗೊತ್ತಾ?

https://newsfirstlive.com/wp-content/uploads/2023/07/Modi-7.jpg

Load More