newsfirstkannada.com

ಮೋದಿಗೆ ಆಹ್ವಾನ ನೀಡಿದ ಪಾಕಿಸ್ತಾನ; ಹೊಸ ಚರ್ಚೆ ಹುಟ್ಟುಹಾಕಿದ ಪಾಕ್​ನ ಬಿಗ್​ ಸ್ಟೇಟ್​​ಮೆಂಟ್..!

Share :

Published August 30, 2024 at 9:52am

    ಪಾಕಿಸ್ತಾನದಲ್ಲಿ ನಡೆಯುವ ಎಸ್​ಸಿಓ ಸಭೆಗೆ ಹಾಜರಾಗ್ತಾರಾ ನರೇಂದ್ರ ಮೋದಿ

    ಪ್ರಧಾನಿ ನರೇಂದ್ರ ಮೋದಿಯವರಿಗೆ ಈಗಾಗಲೇ ಆಹ್ವಾನ ಕಳಿಸಿರುವ ಪಾಕಿಸ್ತಾನ

    ಈ ಹಿಂದೆ ಕಝಕಿಸ್ತಾನಕ್ಕೆ ತೆರಳದ ಪ್ರಧಾನಿ ಮೋದಿ ಈಗ ಪಾಕಿಸ್ತಾನಕ್ಕೆ ಹೋಗ್ತಾರಾ?

ಇಸ್ಲಾಮಾಬಾದ್: ಅಕ್ಟೋಬರ್ ಮಧ್ಯದಲ್ಲಿ ಅಂದ್ರೆ 15-16ರಂದು ಪಾಕಿಸ್ತಾನದಲ್ಲಿ ಶಾಂಘೈ ಕೋಆಪರೇಷನ್ ಆರ್ಗನೈಸೇಷನ್​ನ ಸಭೆ ನಡೆಯಲಿದೆ. ಈಗಾಗಲೇ ಇದಕ್ಕೆ ಮುಹೂರ್ತವೂ ನಿಗದಿಯಾಗಿ, ಪಾಕಿಸ್ತಾನದಲ್ಲಿ ಈ ಒಂದು ಸಭೆ ನಿಗದಿಯಾದ ಕಾರಣ, ಪಾಕ್ ಭಾರತವನ್ನು ಆಹ್ವಾನಿಸುತ್ತದೆಯೋ ಇಲ್ಲವೊ ಅನ್ನೋ ಅನುಮಾನಗಳು ಸೃಷ್ಟಿಯಾಗಿದ್ದವು. ಆದ್ರೆ ಪಾಕ್ ಈಗ ಈ ಅನುಮಾನಗಳಿಗೆ ತೆರೆ ಎಳೆದಿದೆ. ಈಗಾಗಲೇ ಭಾರತದ ಪ್ರಧಾನಿ ನರೇಂದ್ರ ಮೋದಿಗೆ ನಾವು ಆಹ್ವಾನ ಕಳುಹಿಸಿದ್ದೇವೆ. ಅವರು ಎಸ್​ಸಿಓ ಸಭೆಯಲ್ಲಿ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ:ಚೀನಾದ ಬೀಜಿಂಗ್​ ಹಿಂದಿಕ್ಕಿದ ಭಾರತದ ಈ ನಗರ; ಏಷ್ಯಾದ ಬಿಲೆನಿಯರ್ ಕ್ಯಾಪಿಟಲ್ ಎಂದೇ ಖ್ಯಾತಿ ಪಡೆದಿದ್ದು ಹೇಗೆ?

ಈ ಬಗ್ಗೆ ಸ್ಪಷ್ಟಿಕರಣ ಕೊಟ್ಟಿರುವ ಪಾಕಿಸ್ತಾನದ ವಿದೇಶಾಂಗ ಸಚಿವಾಲಯದ ವಕ್ತಾರ ಮಮ್ತಾಜ್ ಜೆಹ್ರಾ ಬಲೂಚ್ ಹೇಳಿದ್ದಾರೆ. ಒಟ್ಟು 13 ದೇಶಗಳು ಸೇರುವ ಈ ಸಭೆಗೆ ಆಯಾ ದೇಶದ ಪ್ರಧಾನಿ ಹಾಗೂ ಅಧ್ಯಕ್ಷರಿಗೆ ನಾವ ಈಗಾಗಲೇ ಆಹ್ವಾನವನ್ನು ಕಳುಹಿಸಿದ್ದೇವೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರಿಗೂ ಕೂಡ ನಮ್ಮ ಆಹ್ವಾನ ತಲುಪಿದೆ, ಭಾರತ ಈ ಒಂದು ಸಭೆಯಲ್ಲಿ ಭಾಗವಹಿಸುವುದಾಗಿ ಹೇಳಿದೆ ಎಂದು ಮಮ್ತಾಜ್ ಹೇಳಿದ್ದಾರೆ.

ಈ ಬಾರಿ ಪಾಕಿಸ್ತಾನದಲ್ಲಿ ನಡೆಯುವ ಈ ಸಭೆಯಲ್ಲಿ ವಿವಿಧ ದೇಶಗಳ ಮಂತ್ರಿಗಳು ಪ್ರಧಾನಿಗಳು ಸೇರಿ ಹಲವು ಸುತ್ತಿನ ಮಾತುಕತೆಗಳನ್ನು ನಡೆಸುತ್ತಾರೆ. ದೇಶಗಳ ನಡುವಿನ , ಹಣಕಾಸಿನ, ಆರ್ಥಿಕ, ಸಾಮಾಜಿಕ ಹಾಗೂ ಸಾಂಸ್ಕೃತಿಕ ನೆಲಗಟ್ಟಿನಲ್ಲಿ ಮಾತುಕತೆಗಳು ನಡೆಯುತ್ತವೆ. ಈ ಹಿಂದೆ ಅಂದ್ರೆ ಇದೇ ವರ್ಷದ ಜುಲೈ 3-4 ರಂದು ಕಝಕಿಸ್ತಾನದದಲ್ಲಿ ಶಾಂಘೈ ಕೋಆಪರೇಷನ್ ಆಗರ್ಗನೈಸೇಷನ್ ಸಭೆ ನಡೆದಿತ್ತು. ಈ ಸಭೆಗೂ ಕೂಡ ಪ್ರಧಾನಿ ನರೇಂದ್ರ ಮೋದಿ ಹಾಜರಾಗಿರಲಿಲ್ಲ. ಬದಲಿಗೆ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹಾಜರಾಗಿ ಭಾರತವನ್ನು ಪ್ರತಿನಿಧಿಸಿದ್ದರು.

ಇದನ್ನೂ ಓದಿ: ಪಾಕಿಸ್ತಾನದ ಒಳಗೆ ರಣಭೀಕರ ಮಾರಣಹೋಮ.. ಸಾವಿನ ಸಂಖ್ಯೆ 60ಕ್ಕೂ ಹೆಚ್ಚು; ಕಾರಣವೇನು?

ಸದ್ಯ ಭಾರತ ಹಾಗೂ ಪಾಕಿಸ್ತಾನದ ನಡುವಿನ ಬಾಂಧವ್ಯದಲ್ಲಿ ದೊಡ್ಡ ಬಿರುಕೇ ಉಂಟಾಗಿದೆ. 2019 ಆಗಸ್ಟ್ 5 ರಂದು ಜಮ್ಮು ಕಾಶ್ಮೀರದಿಂದ ಆರ್ಟಿಕಲ್ 370ಯನ್ನು ವಜಾಗೊಳಿಸಿದ ಬಳಿಕ ಪಾಕ್ ಹಾಗೂ ಭಾರತ ನಡುವೆ ಆಗಲೇ ಹದಗೆಟ್ಟಿದ್ದ ಸಂಬಂಧ ಇನ್ನಷ್ಟು ತೀವ್ರಮಟ್ಟಕ್ಕೆ ಹೋಗಿದೆ. ಹೀಗಾಗಿ ಈ ಬಾರಿ ಪಾಕಿಸ್ತಾನದಲ್ಲಿ ನಡೆಯುತ್ತಿರುವ ಎಸ್​ಸಓ ಸಭೆಗೆ ಪ್ರಧಾನಿ ನರೇಂದ್ರ ಮೋದಿ ಹೋಗುವುದು ಬಹುತೇಕ ಅನುಮಾನವಿದೆ. ಕಳೆದ ಬಾರಿ ಕಝಕಿಸ್ತಾನದಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ವಿದೇಶಾಂಗ ಸಚಿವ ಎಸ್ ಜೈಶಂಕರ್​ ಈ ಬಾರಿಯೂ ಕೂಡ ಪಾಕ್​ನಲ್ಲಿ ಬಾರತವನ್ನು ಪ್ರತಿನಿಧಿಸುವ ಸಾಧ್ಯತೆ ಇದೆ ಎನ್ನಲಾಗ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿಗೆ ಆಹ್ವಾನ ನೀಡಿದ ಪಾಕಿಸ್ತಾನ; ಹೊಸ ಚರ್ಚೆ ಹುಟ್ಟುಹಾಕಿದ ಪಾಕ್​ನ ಬಿಗ್​ ಸ್ಟೇಟ್​​ಮೆಂಟ್..!

https://newsfirstlive.com/wp-content/uploads/2024/08/SOC-MEETING-1.jpg

Load More