newsfirstkannada.com

ಚಂದ್ರಯಾನ-3 ನೌಕೆ ಇಳಿಸಿದ ಸ್ಥಳಕ್ಕೆ ‘ಶಿವಶಕ್ತಿ’ ಎಂದು ನಾಮಕರಣ -ಪ್ರಧಾನಿ ಮೋದಿ ಘೋಷಣೆ

Share :

26-08-2023

    ಚಂದ್ರಯಾನ-2 ಇಳಿದ ಜಾಗಕ್ಕೆ ಏನೆಂದು ಹೆಸರು ಗೊತ್ತಾ..?

    ಹೆಮ್ಮೆ ಇಸ್ರೋ ಅಂಗಳದಲ್ಲಿ ಪ್ರಧಾನಿ ಮೋದಿ ಭಾವುಕ

    ನಮ್ಮ ವಿಜ್ಞಾನಿಗಳನ್ನು ಮೋದಿ ಹೇಗೆಲ್ಲ ಕೊಂಡಾಡಿದರು..?

ಬೆಂಗಳೂರು: ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3 ನೌಕೆ ಇಳಿಸಿದ ಸ್ಥಳಕ್ಕೆ ‘ಶಿವಶಕ್ತಿ’ ಎಂದು ಹಾಗೂ ಚಂದ್ರಯಾನ-2 ಇಳಿದ ಸ್ಥಳಕ್ಕೆ ‘ತಿರಂಗ ಪಾಯಿಂಟ್’ ಎಂದು ನಾಮಕರಣ ಮಾಡಲು ಭಾರತ ನಿರ್ಧಾರ ಮಾಡಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ಚಂದ್ರಯಾನ-3 ಯಶಸ್ಸಿನ ಬೆನ್ನಲ್ಲೇ ಇವತ್ತು ಪ್ರಧಾನಿ ನರೇಂದ್ರ ಮೋದಿ ಬೆಂಗಳೂರಿನ ಇಸ್ರೋದ ಕಚೇರಿಗೆ ಭೇಟಿ ನೀಡಿ ವಿಜ್ಞಾನಿಗಳನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ ವಿಜ್ಞಾನಿಗಳ ಮತ್ತು ಭಾರತದ ಸಾಧನೆ ಬಗ್ಗೆ ವಿಶ್ವದಲ್ಲಿನ ಭಾರತೀಯರು ಹೆಮ್ಮೆ ಪಡುತ್ತಿದ್ದಾರೆ. ಚಂದ್ರನ ದಕ್ಷಿಣ ಧ್ರುವದ ಮೇಲೆ ಚಂದ್ರಯಾನ-3ಯ ಲ್ಯಾಂಡರ್ ವಿಕ್ರಮ್ ಯಶಸ್ವಿಯಾಗಿ ಲ್ಯಾಂಡ್ ಆಗಿತ್ತು. ಈ ಲ್ಯಾಂಡ್ ಆದ ಸ್ಥಳಕ್ಕೆ ಶಿವಶಕ್ತಿ ಎಂದು ಕರೆದಿದ್ದಾರೆ. ಅಲ್ಲದೇ ಈ ಹಿಂದೆ ಅಂದರೆ 2019 ಜುಲೈ 22 ರಂದು ಉಡಾವಣೆ ಮಾಡಲಾದ ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವದ ಮೇಲೆ ಇಳಿಯಲು ವಿಫಲವಾಗಿತ್ತು. ಆದರೆ ಮೇಲ್ಮೈ ಮೇಲೆ ರಭಸವಾಗಿ ಬಿದ್ದಿದ್ದರಿಂದ ಯಾಂತ್ರಿಕ ಸಮಸ್ಯೆಗಳು ಉಂಟಾಗಿದ್ದವು. ಹೀಗಾಗಿ ಆ ಸ್ಥಳವನ್ನು ‘ತಿರಂಗ ಪಾಯಿಂಟ್​’ ಎಂದು ನಾಮಕರಣ ಮಾಡಲು ಭಾರತ ನಿರ್ಧಾರ ಮಾಡಿದೆ ಎಂದಿದ್ದಾರೆ. .

2019ರಲ್ಲಿನ ಚಂದ್ರಯಾನ-2

ಚಂದ್ರಯಾನ-2 ಲ್ಯಾಂಡ್ ಆಗುವ ವೇಳೆ ರಭಸವಾಗಿ ಲ್ಯಾಂಡ್ ಆಗಿ ವಿಫಲವಾಯಿತು. ಇದು ನಮ್ಮ ಮುಂದಿನ ಸಂಶೋಧನೆಗೆ ದಾರಿ ಮಾಡಿ ಕೊಟ್ಟಿತು. ಹೀಗಾಗಿ ಈ ಸ್ಥಳವನ್ನು ತಿರಂಗ ಪಾಯಿಂಟ್ ಎನ್ನೋಣ. ಚಂದ್ರಯಾನ-2ಯಿಂದಲೇ ಚಂದ್ರಯಾನ-3ರಲ್ಲಿ ಯಶಸ್ವಿಯಾಗಲು ಕಾರಣವಾಯಿತು ಎಂದು ಮೋದಿ ಹೇಳಿದರು.

ಇನ್ನು ಇದೇ ವೇಳೆ ಪ್ರಧಾನಿ ಮೋದಿಯವರು ನ್ಯಾಷನಲ್​ ಸ್ಪೇಸ್  ಡೇ ಅನ್ನು ಕೂಡ ಘೋಷಣೆ ಮಾಡಿದರು. ಪ್ರತಿ ವರ್ಷ ಆಗಸ್ಟ್​ 23 ಅನ್ನು ರಾಷ್ಟ್ರೀಯ ಬಾಹ್ಯಾಕಾಶ ದಿನವೆಂದು ಆಚರಣೆ ಮಾಡೋಣ ಎಂದು ಘೋಷಣೆ ಮಾಡಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಚಂದ್ರಯಾನ-3 ನೌಕೆ ಇಳಿಸಿದ ಸ್ಥಳಕ್ಕೆ ‘ಶಿವಶಕ್ತಿ’ ಎಂದು ನಾಮಕರಣ -ಪ್ರಧಾನಿ ಮೋದಿ ಘೋಷಣೆ

https://newsfirstlive.com/wp-content/uploads/2023/08/CHANDRAYAN_SHIVASHAKTI.jpg

Load More