newsfirstkannada.com

ಮೋದಿ-ಜೋ ಬೈಡನ್​ ಜುಗಲ್​ ಬಂದಿ.. ಶ್ವೇತಭವನದಲ್ಲಿ ಔತಣಕೂಟ; ಟಾಪ್ 10 ಫೋಟೋಗಳು ಇವೆ ನೋಡಿ

Share :

23-06-2023

    ಶ್ವೇತಭವನದಲ್ಲಿ ಪ್ರಧಾನಿ ಮೋದಿಯವರಿಗೆ ಭರ್ಜರಿ ಔತಣಕೂಟ

    ಪ್ರಧಾನಿ ಮೋದಿಯವರನ್ನು ಕಣ್ಣು ತುಂಬಿಕೊಳ್ಳಲು ಬಂದ ಬಾಲಕಿ

    ಅಮೆರಿಕದಲ್ಲಿನ ಮೋದಿಯವರ ಟಾಪ್​- 10 ಫೋಟೋ ಇಲ್ಲಿವೆ..!

ಅಮೆರಿಕದಲ್ಲಿ ಎರಡು ದೇಶದ ಗಣ್ಯರ ಸಮಾಗಮ ನಡೆದಿದೆ. ಮೂರು ದಿನಗಳ ಪ್ರವಾಸ ಕೈಗೊಂಡಿರುವ ಪ್ರಧಾನಿ ಮೋದಿಯವರಿಗೆ ಅಧ್ಯಕ್ಷ ಜೋ ಬೈಡನ್​ ಅದ್ಧೂರಿಯಾಗಿ ಬರಮಾಡಿಕೊಂಡಿದ್ದಾರೆ. ಶ್ವೇತಭವನದಲ್ಲಿ ಮೋದಿಯವರಿಗಾಗಿ ಸಸ್ಯಾಹಾರಿ, ಸರಳ, ಇಂಡಿಯನ್​ ಫುಡ್​ ಮೆನುಗಳನ್ನು ಸಿದ್ಧಪಡಿಸಲಾಗಿತ್ತು.

ಮೋದಿಯ ಈ ಭೇಟಿಯಿಂದ ಭಾರತದ ಮತ್ತು ಅಮೆರಿಕ ನಡುವಿನ ಸಂಬಂಧ ಇನ್ನಷ್ಟು ಬಲಿಷ್ಠವಾಗಲಿದೆ. ಇದರ ಜೊತೆಗೆ ಎರಡು ದೇಶದ ದಿಗ್ಗಜರು ಮಿಲಿಟರಿ ಹಾಗೂ ವಾಣಿಜ್ಯಕ್ಕೆ ಸಂಬಂಧಿಸಿದಂತೆ ಕೆಲವು ಮಹತ್ವದ ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಈ ವೇಳೆ ಕ್ಲಿಕ್​ ಮಾಡಿದಂತ ಕೆಲವು ಫೋಟೋಗಳು ಇಲ್ಲಿವೆ..

ಭಾರತದ ಪ್ರಧಾನಿ ಮೋದಿ ಹಾಗೂ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ವೇದಿಕೆಗೆ ಆಗಮಿಸುತ್ತಿರುವ ವೇಳೆ ನೆರೆದಿದ್ದವರ ಕಡೆ ಕೈಬೀಸಿದರು.

ಪ್ರಧಾನಿ ಮೋದಿಯವರ ಭಾಷಣ ಮುಗಿದ ನಂತರ ಅಧ್ಯಕ್ಷ ಜೋ ಬೈಡನ್ ಮೋದಿ ಬಳಿಗೆ ಬಂದು ಪರಸ್ಪರ ಅಪ್ಪಿಕೊಂಡರು.

ಶ್ವೇತಭವನದಲ್ಲಿ ಔತಣಕೂಟದ ಬಳಿಕ ಹೊರ ಬಂದ ಜೋ ಬೈಡನ್, ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್​ ಮತ್ತು ಪ್ರಧಾನಿ ಮೋದಿಯವರು ಜನರತ್ತ ಕೈ ಮಾಡಿ, ಖುಷಿ ಹಂಚಿಕೊಂಡರು.

ಅಮೆರಿಕದಲ್ಲಿ ಪ್ರಧಾನಿ ಮೋದಿಯವರು ಭಾರತೀಯರನ್ನು ಭೇಟಿಯಾದ ಕ್ಷಣ. ಈ ವೇಳೆ ಹತ್ತಿರದಿಂದ ಮೊದಿಯವರನ್ನು ನೋಡುತ್ತಿದ್ದಂತೆ ಭಾರತೀಯರು ಹರ್ಷ ವ್ಯಕ್ತಪಡಿಸಿದರು. ಈ ವೇಳೆ ಅವರು ಇಂಡಿಯನ್ ಬಾವುಟ ಹಿಡಿದುಕೊಂಡಿದ್ದರು.

ಅಧ್ಯಕ್ಷ ಜೋ ಬೈಡನ್ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಶ್ವೇತಭವನದಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಈ ವೇಳೆ ಎರಡು ದೇಶದ ವಾಣಿಜ್ಯ ಸಂಬಂಧಗಳ ಬಗ್ಗೆ ಚರ್ಚೆ ನಡೆಸಿದ್ರು.

ವಾಷಿಂಗ್ಟನ್‌ನಲ್ಲಿರುವ ಶ್ವೇತಭವನದಲ್ಲಿ ಪ್ರಧಾನಿ ಮೋದಿಯವರಿಗೆ ಅದ್ಧೂರಿ ಔತಣಕೂಟ ಏರ್ಪಡಿಸಲಾಗಿತ್ತು. ಈ ವೇಳೆ ಊಟದ ಮೆನು ಈ ರೀತಿ ಸಿಂಗರಿಸಲಾಗಿತ್ತು.

ವೇದಿಕೆ ಮೇಲೆ ಭಾಷಣ ಮಾಡುತ್ತಿದ್ದ ಪ್ರಧಾನಿ ಮೋದಿಯವರು ಜೋ ಬೈಡನ್​ ಕಡೆ ನೋಡಿ ನಕ್ಕರು.

ಅಮೆರಿಕದ ಪ್ರಥಮ ಮಹಿಳೆ ಜಿಲ್ ಬಿಡೆನ್​ ಅವರಿಗೆ ಪ್ರಧಾನಿ ಮೋದಿಯವರು ಡೈಮೆಂಡ್​ ಅನ್ನು ಗಿಫ್ಟ್​ ಆಗಿ ನೀಡಿದ್ರು. ಈ ವೇಳೆ ಅಧ್ಯಕ್ಷ ಜೋ ಬೈಡನ್​ರನ್ನು ಕಾಣಬಹುದು.

ಪ್ರಧಾನಿ ಮೋದಿಯವರನ್ನು ನೋಡಲು ಬಾಲಕಿ, ತನಗೆ ಮೋದಿ ಕಾಣಿಸದಿದ್ದರಿಂದ ಅವಳ ಪೋಷಕರು ಭುಜದ ಮೇಲೆ ಹೊತ್ತುಕೊಂಡು ಪ್ರಧಾನಿಯವರನ್ನು ತೋರಿಸಿದ್ರು.

ರಾಬರ್ಟ್ A.F. ಥರ್ಮನ್ ಅವರೊಂದಿಗೆ ಪ್ರಧಾನಿ ಮೋದಿಯವರು ಸಂವಾದ ನಡೆಸಿದ ಕ್ಷಣ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೋದಿ-ಜೋ ಬೈಡನ್​ ಜುಗಲ್​ ಬಂದಿ.. ಶ್ವೇತಭವನದಲ್ಲಿ ಔತಣಕೂಟ; ಟಾಪ್ 10 ಫೋಟೋಗಳು ಇವೆ ನೋಡಿ

https://newsfirstlive.com/wp-content/uploads/2023/06/PM_MODI_JEO_BIDEN_1.jpg

Load More