ವಿಶ್ವಸಂಸ್ಥೆ ಆವರಣದಲ್ಲಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ
ಯೋಗ ದಿನಾಚರಣೆಯಲ್ಲಿ 180ಕ್ಕೂ ಹೆಚ್ಚು ದೇಶಗಳ ಗಣ್ಯರು ಭಾಗಿ
'ಯೋಗ ಕೇವಲ ವ್ಯಾಯಾಮವಲ್ಲ, ಜೀವನ ವಿಧಾನ' ಎಂದ ಮೋದಿ
ಇಂದು ವಿಶ್ವಸಂಸ್ಥೆ ಆವರಣದಲ್ಲಿ 9ನೇ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮ ಆಯೋಜಿಸಲಾಗಿತ್ತು. ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮದಲ್ಲಿ 180ಕ್ಕೂ ಹೆಚ್ಚು ದೇಶಗಳ ಗಣ್ಯರು ಭಾಗಿಯಾಗಿದ್ದರು.
ಮಹಾತ್ಮ ಗಾಂಧಿ ಪುತ್ಥಳಿಗೆ ಪುಷ್ಪಾರ್ಚನೆ ನೆರವೇರಿಸಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಧಾನಿ ನರೇಂದ್ರ ಮೋದಿ ವಸುಧೈವ ಕುಟುಂಬಕಂ ಶ್ಲೋಕ ಪಠಿಸಿದರು.
ಇನ್ನು, ವೇದಿಕೆ ಮೇಲೆ ಮಾತಾಡಿದ ನರೇಂದ್ರ ಮೋದಿಯವರು, ನನಗೆ ಇಂದು ಬಹಳ ಖುಷಿ ಆಗುತ್ತಿದೆ. ಇಂದು ಸಾವಿರಾರು ಜನ ಇಲ್ಲಿದ್ದಾರೆ. ಯೋಗ ಆರೋಗ್ಯಕ್ಕೆ ಒಳ್ಳೆಯದು. ಎಲ್ಲರೂ ಆರೋಗ್ಯವಾಗಿರಿ, ಸಂತೋಷದಿಂದಿರಿ. ಪ್ರತಿನಿತ್ಯ ಅರ್ಧ ಗಂಟೆ ಯೋಗಾಸನ ಮಾಡಬೇಕು. ಯೋಗ ಮಾಡಿದರೆ ಉತ್ತಮ ಆರೋಗ್ಯ ಕಾಪಾಡಿಕೊಳ್ಳಬಹುದು. ಯೋಗ ಎಂಬುದು ಕೇವಲ ವ್ಯಾಯಾಮವಲ್ಲ, ಜೀವನ ವಿಧಾನ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ