newsfirstkannada.com

PM Modi: ಫ್ರಾನ್ಸ್ ಪ್ರವಾಸದಲ್ಲಿ ಪ್ರಧಾನಿ ಮೋದಿ.. 40 ವರ್ಷಗಳ ಹಿಂದಿನ ವಿಶೇಷ ನೆನಪನ್ನು ಬಿಚ್ಚಿಟ್ಟ ಪ್ರಧಾನಿ

Share :

Published July 14, 2023 at 7:46am

Update July 14, 2023 at 7:48am

    ‘ಫ್ರಾನ್ಸ್ ರಾಷ್ಟ್ರೀಯ ದಿನ’ಕ್ಕೆ ಮೋದಿ ಮುಖ್ಯ ಅತಿಥಿ

    ‘ನಮಸ್ತೆ ಫ್ರಾನ್ಸ್’ ಕಾರ್ಯಕ್ರಮದಲ್ಲಿ ಸ್ನೇಹ ಸ್ಮರಿಸಿದರು

    ಚಂದ್ರಯಾನ-3 ಬಗ್ಗೆಯೂ ಮಾತಾಡಿದ ಪ್ರಧಾನಿ ಮೋದಿ

ಪ್ರಧಾನಿ ನರೇಂದ್ರ ಮೋದಿಯನ್ನು ‘ಫ್ರಾನ್ಸ್ ರಾಷ್ಟ್ರೀಯ ದಿನ’ದ ಅಂಗವಾಗಿ ಮುಖ್ಯ ಅತಿಥಿಯಾಗಿ ಪ್ಯಾರಿಸ್ ಆಹ್ವಾನಿಸಿದೆ. ಈ ಹಿನ್ನೆಲೆಯಲ್ಲಿ ಎರಡು ದಿನಗಳ ಕಾಲ ಫ್ರಾನ್ಸ್​ ಪ್ರವಾಸದಲ್ಲಿರುವ ಮೋದಿ ನಿನ್ನೆ ನಡೆದ ‘ನಮಸ್ತೆ ಫ್ರಾನ್ಸ್’ ಎಂಬ ಕಾರ್ಯಕ್ರಮದಲ್ಲಿ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು.

ಭಾರತ ಮತ್ತು ಫ್ರಾನ್ಸ್​ ನಡುವಿನ ಸಂಬಂಧ ತುಂಬಾ ಹಳೆಯದು. ಜೊತೆಗೆ ಫ್ರಾನ್ಸ್‌ನೊಂದಿಗಿನ ನನ್ನ ಬಾಂಧವ್ಯ ಕೂಡ ತುಂಬಾ ಹಳೆಯದು. ಈ ಸ್ನೇಹವನ್ನು ಯಾವತ್ತೂ ಮರೆಯಲು ಸಾಧ್ಯವಿಲ್ಲ. ಸುಮಾರು 40 ವರ್ಷಗಳ ಹಿಂದೆ, ಗುಜರಾತ್‌ನ ಅಹಮದಾಬಾದ್‌ನಲ್ಲಿ ಫ್ರಾನ್ಸ್‌ನ ಸಾಂಸ್ಕೃತಿಕ ಕೇಂದ್ರವನ್ನು ಪ್ರಾರಂಭಿಸಲಾಯಿತು. ಅದೇ ಕೇಂದ್ರದ ಮೊದಲ ಸದಸ್ಯ ನಾನು ನಿಮ್ಮೊಂದಿಗೆ ಮಾತನಾಡ್ತಿದ್ದೇನೆ ಎಂದರು. ಫ್ರಾನ್ಸ್‌ನ ಸಾಂಸ್ಕೃತಿಕ ಕೇಂದ್ರ ಅವಧಿಯ ತಮ್ಮ ಸದಸ್ಯತ್ವ ಕಾರ್ಡ್​​ ಕೂಡ ಇದೀಗ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗಿದೆ.

ಚಂದ್ರಯಾನ 3 ಕುರಿತು ಪ್ರಸ್ತಾಪ

ಇದೇ ವೇಳೆ ಚಂದ್ರಯಾನ-3 ಬಗ್ಗೆಯೂ ಮೋದಿ ಪ್ರಸ್ತಾಪ ಮಾಡಿದರು. ಭಾರತ ಚಂದ್ರಯಾನ 3 ಉಡಾವಣೆಗೆ ಸಿದ್ಧವಾಗಿದೆ. ಕೆಲವೇ ಗಂಟೆಗಳಲ್ಲಿ ಭಾರತ ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ಎಂದರು.

ನಾನು ಹಲವಾರು ಬಾರಿ ಫ್ರಾನ್ಸ್‌ಗೆ ಬಂದಿದ್ದೇನೆ. ಈ ಬಾರಿ ನನ್ನ ಭೇಟಿ ವಿಶೇಷವಾಗಿದೆ. ಇಂದು ಫ್ರಾನ್ಸ್‌ನ ರಾಷ್ಟ್ರೀಯ ದಿನ. ನಾನು ಫ್ರಾನ್ಸ್ ಜನರನ್ನು ಅಭಿನಂದಿಸುತ್ತೇನೆ. ನನ್ನನ್ನು ಆಹ್ವಾನಿಸಿದ್ದಕ್ಕಾಗಿ ನಾನು ಫ್ರಾನ್ಸ್ ಜನರಿಗೆ ಧನ್ಯವಾದ ಹೇಳುತ್ತೇನೆ. ಇದು ಭಾರತ ಮತ್ತು ಫ್ರಾನ್ಸ್ ನಡುವಿನ ಅವಿನಾಭಾವ ಸ್ನೇಹದ ಪ್ರತಿಬಿಂಬವಾಗಿದೆ ಎಂದಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

PM Modi: ಫ್ರಾನ್ಸ್ ಪ್ರವಾಸದಲ್ಲಿ ಪ್ರಧಾನಿ ಮೋದಿ.. 40 ವರ್ಷಗಳ ಹಿಂದಿನ ವಿಶೇಷ ನೆನಪನ್ನು ಬಿಚ್ಚಿಟ್ಟ ಪ್ರಧಾನಿ

https://newsfirstlive.com/wp-content/uploads/2023/07/PM_MODI-5.jpg

Load More