newsfirstkannada.com

ಮೊದಲು ಮೋದಿ ವಿದ್ಯಾರ್ಹತೆ ಬಗ್ಗೆ ಸ್ಪಷ್ಟಪಡಿಸಲಿ -ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಸವಾಲ್

Share :

13-06-2023

    ‘RSSಗೆ ನನ್ನ ಮೇಲೆ ತುಂಬಾ ಪ್ರೀತಿ’

    ಬಿಜೆಪಿಗರ ‘ದಲಿತ ಕಾನ್ವೆಂಟ್’ ಕಮೆಂಟ್​ಗೆ ಕಿಡಿ

    ಬಿಜೆಪಿಯ ಆರೋಪಕ್ಕೆ ಪ್ರಿಯಾಂಕ್ ಕೊಟ್ಟ ಉತ್ತರ ಏನು?

ಬೆಂಗಳೂರು: ಮೊದಲು ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಹತೆ ಏನು ಎಂಬುವುದನ್ನು ಹೇಳಲಿ. ವಿದ್ಯಾರ್ಹತೆಯೇ ಮಾನದಂಡ ಎಂಬುವುದಾದರೆ ಮೋದಿ ಅವ್ರಿಂದಲೇ ಅದು ಆರಂಭವಾಗಲಿ ಎಂದು ಸಚಿವ ಪ್ರಿಯಾಂಕ್ ಖರ್ಗೆ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದ್ದಾರೆ.

ನನ್ನ ಬೆಳವಣಿಗೆ ಅವರಿಗೆ ಇಷ್ಟವಿಲ್ಲವೇ?

ನಗರದಲ್ಲಿ ನ್ಯೂಸ್​ಫಸ್ಟ್ ಜೊತೆ ಮಾತನಾಡಿರುವ ಪ್ರಿಯಾಂಕ್ ಖರ್ಗೆ, ನನ್ನ ವಿದ್ಯಾರ್ಹತೆ ಏನು ಎಂಬುವುದನ್ನು ಚುನಾವಣೆ ಸಂದರ್ಭದಲ್ಲಿ ಸಲ್ಲಿಸಿರುವ ಅಫಿಡವಿಟ್​ನಲ್ಲಿ ನೋಡಲಿ. ನಾನು ನ್ಯಾಷನಲ್ ಲಾ ಸ್ಕೂಲ್ ಪ್ರವೇಶ ಪರೀಕ್ಷೆಯಲ್ಲಿ ಉತ್ತೀರ್ಣನಾಗಿದ್ದೇನೆ. ಬಿಜೆಪಿಯವರು ನನ್ನ ಅಫಿಡವಿಟ್ ಅನ್ನು ಚೆನ್ನಾಗಿ ಓದಿಕೊಳ್ಳಲಿ. ನನ್ನ ಬೆಳವಣಿಗೆ ಅವರಿಗೆ ಇಷ್ಟವಿಲ್ಲವೇ? ಎಂದು ಪ್ರಶ್ನೆ ಮಾಡಿದ್ದಾರೆ.

ಒಬ್ಬರು ನಾನು ಏನೂ ಕಲಿತಿಲ್ಲ ಅಂತಾರೆ. ಮತ್ತೊಬ್ಬರು ನನ್ನನ್ನು ಕಾನ್ವೆಂಟ್ ದಲಿತ ಎನ್ನುತ್ತಾರೆ. ಅವರಲ್ಲೇ ನನ್ನ ಬಗ್ಗೆ ಗೊಂದಲವಿದೆ. ನನ್ನ ಅಫಿಡವಿಟ್ ಚೆನ್ನಾಗಿ ಓದಿಕೊಳ್ಳಲಿ. ನನ್ನ ಮೇಲೆ ಬಿಜೆಪಿ, ಆರ್‌ಎಸ್‌ಎಸ್​ಗೆ ತುಂಬಾ ಪ್ರೀತಿ ಇದೆ. ಅವರಿಗೆ ಸಂವಿಧಾನದ ಬಗ್ಗೆ ಗೌರವ ಇಲ್ಲ. ನನಗೆ ಗೌರವ ಇದೆ. ಇದರಲ್ಲಿ ಮುಚ್ಚುಮರೆ ಏನೂ ಇಲ್ಲ. ನನ್ನ ಬೆಳವಣಿಗೆಯನ್ನು ಇವರು ಸಹಿಸುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಮೊದಲು ಮೋದಿ ವಿದ್ಯಾರ್ಹತೆ ಬಗ್ಗೆ ಸ್ಪಷ್ಟಪಡಿಸಲಿ -ಬಿಜೆಪಿ ನಾಯಕರಿಗೆ ಪ್ರಿಯಾಂಕ್ ಖರ್ಗೆ ಸವಾಲ್

https://newsfirstlive.com/wp-content/uploads/2023/06/PRIYANK_KHARGE.jpg

Load More