ಎಲ್ಲರನ್ನೂ ಒಂದುಗೂಡಿಸುವುದು ಭಾರತ, ಭಾರತ ಎಂದ ನಮೋ
ಭಾಷಣದಲ್ಲಿ ‘ಇಂಡಿಯಾ’ ಹೆಸರು ಬಳಸದೇ ಮೋದಿ ಅಚ್ಚರಿ ನಡೆ
ಆಸಿಯಾನ್ ದೇಶಗಳ ಮುಂದೆ ಪ್ರಧಾನಿ ಮೋದಿ 'ಭಾರತ'ದ ಕಲರವ
ಇಂಡಿಯಾ ಭಾರತವಾಗಿ ಬದಲಾಗುತ್ತೆ ಅಂತ ಹೊತ್ತಿಕೊಂಡಿರೋ ಚರ್ಚೆಯ ಕಿಡಿಗೆ ಪ್ರಧಾನಿ ಮೋದಿ ಮತ್ತಷ್ಟು ಇಂಬು ಕೊಟ್ಟಿದ್ದಾರೆ. ಇಂಡೋನೇಷ್ಯಾದಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಮೋದಿ ಮಾಡಿದ ಭಾಷಣ ಇಂಡಿಯಾ ಹೆಸರು ಬದಲಾವಣೆಯ ಚರ್ಚೆಗೆ ಪುಷ್ಠಿ ನೀಡಿದೆ.
ಇದನ್ನೂ ಓದಿ: ಇಂಡಿಯಾ ಹೆಸರು ಬದಲಿಸಿದ್ರೆ ಡಾಲರ್ ಮೌಲ್ಯ 15 ರೂ. ಆಗುತ್ತಾ?- ಮೋದಿಗೆ ಕಾಂಗ್ರೆಸ್ ಪ್ರಶ್ನೆ!
ಸರ್ವಜನಾಂಗದ ಶಾಂತಿಯ ತೋಟದಲ್ಲಿ ಅರಳಿರೋ ಹೆಸರು ಬದಲಾವಣೆಯ ಹೂವಿನ ಘಮ ಇಡೀ ದೇಶಕ್ಕೆ ಪಸರಿಸಿ ಪರ ವಿರೋಧದ ಚರ್ಚಗೆ ಕಾರಣವಾಗಿದೆ. ಜಿ20 ಶೃಂಗಸಭೆಯ ಆಹ್ವಾನ ಪತ್ರಿಕೆಯಲ್ಲಿ ರಿಪಬ್ಲಿಕ್ ಆಫ್ ಇಂಡಿಯಾ ಬದಲು ರಿಪಬ್ಲಿಕ್ ಆಫ್ ಭಾರತ್ ಅಂತ ಬಿಂಬಿಸಿ ಚರ್ಚೆಗೆ ಕೇಂದ್ರ ಸರ್ಕಾರ ವೇದಿಕೆ ಕಲ್ಪಿಸಿತ್ತು. ಈ ಮಧ್ಯೆ ಇಂಡೋನೇಷ್ಯಾ ಪ್ರವಾಸದಲ್ಲಿರೋ ಪ್ರಧಾನಿ ನರೇಂದ್ರ ಮೋದಿಯವರ ಅಚ್ಚರಿಯ ನಡೆ ಮತ್ತೊಂದು ಚರ್ಚೆಯನ್ನ ಹುಟ್ಟುಹಾಕಿದೆ.
ಇಂಡೋನೇಷ್ಯಾದ ಶೃಂಗಸಭೆಯಲ್ಲಿ ನಮೋ ಭಾಗಿ!
ಆಸಿಯಾನ್ ದೇಶಗಳ ಮುಂದೆ ‘ಭಾರತ’ದ ಕಲರವ
ಇಂಡೋನೇಷ್ಯಾದ ಜಕರ್ತಾದಲ್ಲಿ ನಡೆಯುತ್ತಿರೋ 20ನೇ ಆಸಿಯಾನ್ ಮತ್ತು ಭಾರತ ಶೃಂಗಸಭೆ ಮತ್ತು 18ನೇ ಪೂರ್ವ ಏಷ್ಯಾ ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ. ಇಂಡೊನೇಷ್ಯಾಗೆ ಮೋದಿ ಪಾದಾರ್ಪಣೆ ಮಾಡ್ತಿದ್ದಂತೆ ಅದ್ದೂರಿ ಸ್ವಾಗತ ಸಿಕ್ಕಿದೆ. ಖಾಸಗಿ ಹೋಟೆಲ್ ಒಂದಕ್ಕೆ ತಲುಪಿದ ಮೋದಿ ಅವರನ್ನ ಅನಿವಾಸಿ ಭಾರತೀಯರು ಆತ್ಮೀಯವಾಗಿ ಬರಮಾಡಿಕೊಂಡಿದ್ದಾರೆ.
‘ಇಂಡಿಯಾ’ ಹೆಸರು ಬಳಸದೇ ಮೋದಿ ಅಚ್ಚರಿ ನಡೆ!
ಭಾರತ, ಭಾರತ ಎನ್ನುತ್ತಲೇ ಭಾಷಣ ಮಾಡಿದ ನಮೋ
ಜಕರ್ತಾದಲ್ಲಿ ನಡೆದ ಆಸಿಯಾನ್ ಶೃಂಗಸಭೆಯಲ್ಲಿ ಭಾಗಿಯಾದ ನರೇಂದ್ರ ಮೋದಿ ಭಾಷಣ ಮಾಡುವ ವೇಳೆ ಅಚ್ಚರಿಯ ನಡೆ ಅನುಸರಿಸಿದ್ದಾರೆ. ಮೋದಿ ಅವರ ಈ ನಡೆ ಭಾರತ ಹೆಸರು ಬದಲಾವಣೆಯ ಊಹಾಪೋಹಕ್ಕೆ ಪುಷ್ಠಿ ನೀಡಿದಂತಿದೆ. ಭಾಷಣದುದ್ದಕ್ಕೂ ಇಂಡಿಯಾ ಎಂಬ ಹೆಸರನ್ನೇ ಬಳಸದ ನಮೋ, ಭಾರತ, ಭಾರತ ಎಂದು ಹೇಳುತ್ತಲೇ ಭಾಷಣ ಮುಗಿಸಿದ್ದಾರೆ.
ನಮ್ಮ ಇತಿಹಾಸ ಮತ್ತು ಭೌಗೋಳಿಕತೆ ಭಾರತದೊಂದಿಗೆ ಎಲ್ಲರನ್ನೂ ಒಂದುಗೂಡಿಸುವುದು. ಎಲ್ಲರ ಪ್ರಾಮುಖ್ಯತೆ, ಕ್ಷೇತ್ರದ ಏಕತೆ, ಶಾಂತಿ ಸಮೃದ್ಧಿ ಕ್ಷೇತ್ರದಲ್ಲಿ ವಿಶ್ವಾಸ ಮೂಡಿಸಿ ಎಲ್ಲರನ್ನೂ ಜೋಡಿಸುವುದು. ಆದ್ದರಿಂದ ಭಾರತದ ಈ ನಿಯಮ ಕೇಂದ್ರಿಯ ಸ್ತಂಭವಾಗಿದೆ. ಭಾರತದ ಗುರಿ, ಪ್ರಾಮುಖ್ಯತೆ, ದೇಶದ ಆಂತರಿಕತೆಯನ್ನ ಸಂಪೂರ್ಣವಾಗಿ ಸಮರ್ಥಿಸಿಕೊಳ್ಳುತ್ತದೆ.
ನರೇಂದ್ರ ಮೋದಿ, ಪ್ರಧಾನಮಂತ್ರಿ
ಇಂಡಿಯಾ ಭಾರತವಾಗಿ ಬದಲಾಗೋ ಬಗ್ಗೆ ಪ್ರಧಾನಿ ಮೋದಿ ಸುಳಿವುಗಳನ್ನ ಬಿಟ್ಟುಕೊಡ್ತಿರೋದು ಅಚ್ಚರಿಗೆ ಕಾರಣವಾಗಿದೆ. ಈ ಮಧ್ಯೆ ಪರ-ವಿರೋಧದ ಚರ್ಚೆಗಳು ರಾಜಕೀಯ ಕೆಸರೆರಚಾಟಕ್ಕೂ ಮುನ್ನುಡಿ ಬರೆದಿದೆ. ಸೆಪ್ಟೆಂಬರ್ 18ರಿಂದ ನಡೆಯುತ್ತಿರೋ ಸಂಸತ್ತಿನ ವಿಶೇಷ ಅಧಿವೇಶನದಲ್ಲಿ ಭಾರತ್ ವಿವಾದಕ್ಕೆ ಸರಿಯಾದ ಉತ್ತರ ಸಿಗುವ ಸಾಧ್ಯತೆಯಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ