newsfirstkannada.com

ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ ಜೊತೆ ಮೋದಿ ಮಾತುಕತೆ; ಮೂರು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ

Share :

09-09-2023

    ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸಿನಾ ಮಾತುಕತೆ

    ಬಾಂಗ್ಲಾದೇಶದ ಬ್ಯಾಂಗ್ಲಾ ಬ್ಯಾಂಕ್ ಜೊತೆ ಒಪ್ಪಂದ ಮಾಡಿಕೊಂಡ ಮೋದಿ

    ವಿದೇಶಾಂಗ ಇಲಾಖೆ ಹಂಚಿಕೊಂಡಿದೆ ಭಾರತ ಮತ್ತು ಬಾಂಗ್ಲಾ ನಡುವಿನ ಒಡಂಬಡಿಕೆ

ಇಂದು ದೆಹಲಿಯಲ್ಲಿ ಜಿ-20 ಶೃಂಗಸಭೆ ಕರೆಯಲಾಗಿದೆ. ಈ ಸಲುವಾಗಿ ವಿಶ್ವದ ಅನೇಕ ಗಣ್ಯರು ಭಾರತಕ್ಕೆ ಆಗಮಿಸಿದ್ದು, ಪ್ರಧಾನಿ ನರೇಂದ್ರ ಮೋದಿಯವರನ್ನು ಭೇಟಿ ಮಾಡಿದ್ದಾರೆ. ಬಾಂಗ್ಲಾದೇಶ ಪ್ರಧಾನಿ ಶೇಕ್​ ಹಸಿನಾ ಕೂಡ ಮೋದಿಯವರನ್ನು ಭೇಟಿ ಮಾಡಿ ಮಾತನಾಡಿದ್ದು, ಈ ವೇಳೆ  ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಕೆಲವು ಒಪ್ಪಂದಗಳಿಗೆ ಸಹಿ ಹಾಕಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಮತ್ತು ಬಾಂಗ್ಲಾದೇಶದ ಪ್ರಧಾನಿ ಶೇಕ್ ಹಸಿನಾ ಮಾತುಕತೆಯಲ್ಲಿ ಒಟ್ಟು ಮೂರು ದ್ವೀಪಕ್ಷಿಯ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ. ಅದರಲ್ಲಿ ಭಾರತದ ಡಿಜಿಟಲ್ ಪೇಮೆಂಟ್ ತಂತ್ರಜ್ಞಾನಕ್ಕೆ ಸಹಿ ಹಾಕಲಾಗಿದೆ. ಭಾರತದ ನ್ಯಾಷನಲ್‌ ಪೇಮೆಂಟ್ಸ್ ಕೋ ಆಪರೇಟಿವ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಬಾಂಗ್ಲಾದೇಶದ ಬ್ಯಾಂಗ್ಲಾ ಬ್ಯಾಂಕ್ ಜೊತೆ ಒಪ್ಪಂದ ಮಾಡಲಾಗಿದೆ.

ಇದಲ್ಲದೆ, ಸಾಂಸ್ಕೃತಿಕ ಕಲೆ ವಿನಿಮಯಕ್ಕೆ ಒಪ್ಪಿಗೆ ನೀಡಲಾಗಿದೆ. ಜೊತೆಗೆ ಮೂರನೇ ಒಪ್ಪಂದವಾಗಿ ಅರ್ಗಿಕಲ್ಚರಲ್ ರಿಸರ್ಚ್​ನ ICAR ಮತ್ತು BARC ನಡುವೆ ಒಪ್ಪಂದ ಮಾಡಲಾಗಿದೆ.

ಭಾರತ ಮತ್ತು ಬಾಂಗ್ಲಾ ನಡುವಿನ ಒಡಂಬಡಿಕೆ ಬಗ್ಗೆ ವಿದೇಶಾಂಗ ಇಲಾಖೆ ಈ ಮಾಹಿತಿಯನ್ನು ಹಂಚಿಕೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಂಗ್ಲಾದೇಶ ಪ್ರಧಾನಿ ಶೇಕ್ ಹಸಿನಾ ಜೊತೆ ಮೋದಿ ಮಾತುಕತೆ; ಮೂರು ದ್ವಿಪಕ್ಷೀಯ ಒಪ್ಪಂದಗಳಿಗೆ ಸಹಿ

https://newsfirstlive.com/wp-content/uploads/2023/09/Modi-and-Hasina.jpg

Load More