newsfirstkannada.com

ಸನಾತನ ಧರ್ಮ ಮುಗಿಸಿ ಮತ್ತೆ ಗುಲಾಮಗಿರಿಗೆ ತಳ್ಳುವಿರಾ.. INDIA ಒಕ್ಕೂಟಕ್ಕೆ INDI ಎಂದು ಕರೆದ ಪ್ರಧಾನಿ ಮೋದಿ

Share :

Published September 14, 2023 at 5:26pm

    ಸಾವಿರಾರು ವರ್ಷಗಳ ನಂಬಿಕೆಯನ್ನೇ ಮುಗಿಸೋ ಕೆಲಸ‌ ಮಾಡಿದೆ

    ಭಾರತದ ಸಂಸ್ಕೃತಿ ಮೇಲೆ ದಾಳಿ ಮಾಡುವ ಕುತಂತ್ರ ಮಾಡುತ್ತಿದೆ

    ಸನಾತನ ಧರ್ಮವನ್ನ ನಿರ್ಮೂಲನೆ ಮಾಡಲು INDI ಈ ಒಕ್ಕೂಟ

ಭೋಪಾಲ್: ಸ್ವಾಮಿ ವಿವೇಕಾನಂದ ಮತ್ತು ಲೋಕಮಾನ್ಯ ತಿಲಕರಿಗೆ ಸ್ಫೂರ್ತಿ ನೀಡಿದ ಸನಾತನ ಧರ್ಮವನ್ನು ವಿರೋಧ ಪಕ್ಷಗಳ ಇಂಡಿಯಾ ಮೈತ್ರಿಕೂಟ ನಿರ್ಮೂಲನೆ ಮಾಡಲು ಬಯಸುತ್ತಿದೆ. ವಿರೋಧ ಪಕ್ಷಗಳ ಒಕ್ಕೂಟವು ಸನಾತನ ಧರ್ಮವನ್ನು ನಾಶ ಮಾಡಲು ಬಯಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ತೀವ್ರ ವಾಗ್ದಾಳಿ ನಡೆಸಿದ್ದಾರೆ. ಮಧ್ಯಪ್ರದೇಶದ ಱಲಿಯಲ್ಲಿ ಮಾತಾಡಿದ ಪ್ರಧಾನಿ ನರೇಂದ್ರ ಮೋದಿ, ಸನಾತನ ಧರ್ಮವನ್ನು ಮುಗಿಸಲು ಮತ್ತು ದೇಶವನ್ನು 1,000 ವರ್ಷಗಳ ಕಾಲ ಗುಲಾಮಗಿರಿಗೆ ತಳ್ಳಲು ಬಯಸುತ್ತಿದ್ದಾರೆ ಎಂದು ಹೇಳಿದರು.

ಹೀಗೆ ಮಾತು ಮುಂದುವರೆಸಿದ ನರೇಂದ್ರ ಮೋದಿ, ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದೇ ಅವರ ಉದ್ದೇಶವಾಗಿದೆ. ಸ್ವಾಮಿ ವಿವೇಕಾನಂದ, ಲೋಕಮಾನ್ಯ ತಿಲಕ್ ರಂತವರಿಗೆ ಸ್ಫೂರ್ತಿಯಾಗಿರುವ ಸನಾತನ ಧರ್ಮ. ಇಂತಹ ಸನಾತನ ಧರ್ಮವನ್ನ ನಿರ್ಮೂಲನೆ ಮಾಡಲು ಈ ಒಕ್ಕೂಟ ಹೊರಟಿದೆ. ಅವರುಗಳು ಈಗಾಗಲೇ ಓಪನ್ ಆಗಿ ಹಿಂದೂ ಧರ್ಮವನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ನಾಳೆ ಈ ಕಾರ್ಯವನ್ನು ಇನ್ನಷ್ಟು ಹೆಚ್ಚು ಮಾಡಲಿದ್ದಾರೆ. ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಂತವರನ್ನ ನಾವು ತಡೆಗಟ್ಟಬೇಕಿದೆ ಎಂದು ಕಿಡಿಕಾರಿದ್ದಾರೆ.

ಇದನ್ನು ಓದಿ: ಬಿಗ್​ಬಾಸ್​ ಶುರುವಾದ್ರೆ ಯಾವ್ಯಾವ ಸೀರಿಯಲ್​ಗೆ ಹೊಡೆತ ಬೀಳಲಿದೆ? ರಾಮಾಚಾರಿ, ತ್ರಿಪುರ ಸುಂದರಿಗೂ ಆತಂಕವೇ?

ಇನ್ನು INDIA ಮಿತ್ರಕೂಟಕ್ಕೆ INDI ಎಂದೇ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣ ಮಾಡಿದರು. INDI ಒಕ್ಕೂಟಕ್ಕೆ ನಾಯಕರಿಲ್ಲ. ಭಾರತದ ಸಂಸ್ಕೃತಿಯ ಮೇಲೆ ದಾಳಿ ಮಾಡಲು ಮುಂದಾಗಿದ್ದಾರೆ. ಸನಾತನ ಸಂಸ್ಕೃತಿಯನ್ನು ಕೊನೆಗೊಳಿಸುವ ನಿರ್ಣಯದೊಂದಿಗೆ ಮೈತ್ರಿ ಅನುಷ್ಠಾನಕ್ಕೆ ಬಂದಿದೆ. ದೇಶ ಮತ್ತು ಸಮಾಜವನ್ನು ವಿಭಜನೆ ಮಾಡುವ ಕೆಲಸ ಮಾಡುತ್ತಿದೆ. ಭಾರತದ ಸಂಸ್ಕೃತಿ ಮೇಲೆ ದಾಳಿ ಮಾಡುವ ಕುತಂತ್ರ ನಡೆಸುತ್ತಿದೆ. ಸಾವಿರಾರು ವರ್ಷಗಳ ನಂಬಿಕೆಯ ಮುಗಿಸುವ ಕೆಲಸ‌ ಮಾಡಿದೆ ಎಂದು ಆರೋಪ ಮಾಡಿದ್ದಾರೆ.

ಭಾಷಣದಲ್ಲಿ ಇಂಡಿಯಾ ಮೈತ್ರಿಕೂಟವನ್ನೇ ಟಾರ್ಗೆಟ್ ಮಾಡಿದ ಪ್ರಧಾನಿ ನರೇಂದ್ರ ಮೋದಿ ಅವರು ಸನಾತನ ಧರ್ಮವನ್ನು ಮುಗಿಸಲು ಮತ್ತು ದೇಶವನ್ನು 1,000 ವರ್ಷಗಳ ಕಾಲ ಗುಲಾಮಗಿರಿಗೆ ತಳ್ಳಲು ಬಯಸುತ್ತಿದ್ದಾರೆ ಎಂದು ಆರೋಪಿಸಿದರು. ಹಿಂದೂ ಧರ್ಮದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುವುದೇ ಅವರ ಉದ್ದೇಶವಾಗಿದೆ. ಸ್ವಾಮಿ ವಿವೇಕಾನಂದ, ಲೋಕಮಾನ್ಯ ತಿಲಕ್ ರಂತವರಿಗೆ ಸ್ಫೂರ್ತಿಯಾಗಿರುವ ಸನಾತನ ಧರ್ಮ. ಇಂತಹ ಸನಾತನ ಧರ್ಮವನ್ನ ನಿರ್ಮೂಲನೆ ಮಾಡಲು ಈ ಒಕ್ಕೂಟ ಹೊರಟಿದೆ. ಅವರುಗಳು ಈಗಾಗಲೇ ಓಪನ್ ಆಗಿ ಹಿಂದೂ ಧರ್ಮವನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ನಾಳೆ ಈ ಕಾರ್ಯವನ್ನು ಇನ್ನಷ್ಟು ಹೆಚ್ಚು ಮಾಡಲಿದ್ದಾರೆ. ಜನರು ಈ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಇಂತವರನ್ನ ನಾವು ತಡೆಗಟ್ಟಬೇಕಿದೆ ಎಂದು ಕರೆ ನೀಡಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಸನಾತನ ಧರ್ಮ ಮುಗಿಸಿ ಮತ್ತೆ ಗುಲಾಮಗಿರಿಗೆ ತಳ್ಳುವಿರಾ.. INDIA ಒಕ್ಕೂಟಕ್ಕೆ INDI ಎಂದು ಕರೆದ ಪ್ರಧಾನಿ ಮೋದಿ

https://newsfirstlive.com/wp-content/uploads/2023/09/pm-modi-5.jpg

Load More