newsfirstkannada.com

VIDEO: ಪ್ರೀತಿಯಿಂದ ಮೋದಿಯನ್ನು ಅಪ್ಪಿಕೊಂಡ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್​!

Share :

20-05-2023

    ಮೋದಿ ಇರೋ ಜಾಗಕ್ಕೆ ಬಂದ ಬೈಡನ್

    ಭಾರತ, ಅಮೆರಿಕಾ ಸ್ನೇಹಕ್ಕೆ ಇದೇ ಸಾಕ್ಷಿ

    ಹಿರೋಶಿಮಾದಲ್ಲಿ ಮೋದಿ ಮೇನಿಯಾ

ಹಿರೋಶಿಮಾ: ಪ್ರಧಾನಿ ನರೇಂದ್ರ ಮೋದಿ ಅವರು ಸದ್ಯ ಅಮೆರಿಕಾ ಪ್ರವಾಸದಲ್ಲಿದ್ದಾರೆ. ಜಪಾನ್‌ನ ಹಿರೋಶಿಮಾದಲ್ಲಿ ನಡೆಯುತ್ತಿರುವ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಪಾಲ್ಗೊಂಡಿದ್ದಾರೆ. ಜಿ7 ಶೃಂಗಸಭೆಯಲ್ಲಿ ದೇಶ ವಿದೇಶದ ಗಣ್ಯರು ಜೊತೆ ನರೇಂದ್ರ ಮೋದಿ ಅವರು ಪಾಲ್ಗೊಂಡಿದ್ದಾರೆ.

ಇನ್ನು, ಜಿ7 ಶೃಂಗಸಭೆಯಲ್ಲಿ ಒಂದು ನರೇಂದ್ರ ಮೋದಿ ಹಾಗೂ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಅದ್ಭುತವಾದ ಸ್ನೇಹ ಬಾಂಧವ್ಯದ ದೃಶ್ಯ ಕ್ಯಾಮರಾದಲ್ಲಿ ಸೆರೆಯಾಗಿದೆ. ಜಿ7 ಶೃಂಗಸಭೆಯು ಆರಂಭವಾಗುವ ಮುನ್ನ ಅಮೆರಿಕಾ ಅಧ್ಯಕ್ಷ ಜೋ ಬೈಡನ್ ಮೋದಿ ಕುಳಿತ ಸ್ಥಳಕ್ಕೆ ಬಂದು ಪ್ರೀತಿಯಿಂದ ಅಪ್ಪಿಕೊಂಡು ಶುಭಾಶಯ ತಿಳಿಸಿದ್ದಾರೆ. ಇದೀಗ ಈ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ನರೇಂದ್ರ ಮೋದಿ ಅವರು ಹಲವು ಗಣ್ಯರ ಜೊತೆ ಕುಳಿತುಕೊಂಡಿದ್ದರು. ಇದೇ ವೇಳೆ ಮೋದಿ ಅವರು ಕುಳಿತ ಜಾಗಕ್ಕೆ ಜೋ ಬೈಡೆನ್ ಬಂದಿದ್ದಾರೆ. ಹೀಗೆ ಜೋ ಬೈಡೆನ್ ಅವರನನ್ನು ನೋಡ ನೋಡುತ್ತಿದ್ದಂತೆ ಕುರ್ಚಿ ಮೇಲೆ ಕುಳಿತಿದ್ದ ನರೇಂದ್ರ ಮೋದಿ ಅವರು ದಿಢೀರನೇ ಎದ್ದು ಕೈ ಕುಲುಕಿಸಿ ಅಪ್ಪುಗೆ ನೀಡಿದ್ದಾರೆ. ಈ ದೃಶ್ಯವನ್ನು ಬಿಜೆಪಿ ತಮ್ಮ ಅಧಿಕೃತ ಟ್ವಿಟರ್​​ ಖಾತೆಯಲ್ಲಿ ಶೇರ್​​ ಮಾಡಿಕೊಂಡಿದ್ದಾರೆ. ಜೋ ಬೈಡನ್ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರು ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ.

ಸದ್ಯ ಮೇ 19ರಿಂದ 21ರವರೆಗೆ ಜಪಾನ್‌ನ ಹಿರೋಶಿಮಾ ನಗರದಲ್ಲಿ ಜಿ7 ಶೃಂಗಸಭೆಯಲ್ಲಿ ಪ್ರಧಾನಿ ಮೋದಿ ಪಾಲ್ಗೊಳ್ಳಲಿದ್ದಾರೆ. ಜೊತೆಗೆ ಜಪಾನ್‌, ಪಪುವಾ ನ್ಯೂಗಿನಿಯಾ ಮತ್ತು ಆಸ್ಪ್ರೇಲಿಯಾಗಳಿಗೂ ಸಹ ಭೇಟಿ ನೀಡಲಿದ್ದಾರೆ. ಒಟ್ಟು 6 ದಿನಗಳ ಕಾಲದ ಅಮೆರಿಕ ಪ್ರವಾಸ ಮಾಡಲಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

VIDEO: ಪ್ರೀತಿಯಿಂದ ಮೋದಿಯನ್ನು ಅಪ್ಪಿಕೊಂಡ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್​!

https://newsfirstlive.com/wp-content/uploads/2023/05/PM-Modi-Jai-Biden.jpg

Load More