Advertisment

ಕೋಟ್ಯಾಂತರ ಭಾರತೀಯರ ಹೃದಯ ಛಿದ್ರ ಛಿದ್ರ​.. ​ ಫೋಗಾಟ್​ ಅನರ್ಹ ಸುದ್ದಿ ತಿಳಿದು ಮೋದಿ ಹೇಳಿದ್ದೇನು​!

author-image
AS Harshith
Updated On
ಕೋಟ್ಯಾಂತರ ಭಾರತೀಯರ ಹೃದಯ ಛಿದ್ರ ಛಿದ್ರ​.. ​ ಫೋಗಾಟ್​ ಅನರ್ಹ ಸುದ್ದಿ ತಿಳಿದು ಮೋದಿ ಹೇಳಿದ್ದೇನು​!
Advertisment
  • ಭಾರತೀಯರಿಗೆ ಶಾಕ್​​ ನೀಡಿದ ವಿನೇಶ್​​ ಫೋಗಾಟ್​ ಅನರ್ಹಗೊಳಿಸಿದ ಸುದ್ದಿ​
  • ಸುದ್ದಿ ತಿಳಿದು ಟ್ವೀಟ್​ ಮಾಡಿದ ಪ್ರಧಾನಿ ನರೇಂದ್ರ ಮೋದಿ.. ಏನಂದ್ರು?
  • ಹುಸಿಯಾಯ್ತು ನಿರೀಕ್ಷೆ.. ವಿನೇಶ್​​ ಫೋಗಾಟ್​ ಬೆನ್ನಿಗೆ ನಿಂತ ಭಾರತೀಯರು

ಭಾರತೀಯ ಮಹಿಳಾ ಕುಸ್ತಿಪಟು ವಿನೇಶ್​ ಫೋಗಾಟ್​​ ಪ್ಯಾರಿಸ್​​ ಒಲಿಂಪಿಕ್ಸ್​ ಫೈನಲ್​ ಪಂದ್ಯದಲ್ಲಿ ಅನರ್ಹರಾಗಿದ್ದಾರೆ. 100 ಗ್ರಾಂ ಹೆಚ್ಚಿನ ತೂಕ ಹೊಂದಿದ್ದ ಕಾರಣ ಅವರನ್ನು ಅನರ್ಹಗೊಳಿಸಲಾಗಿದೆ. ಈ ವಿಚಾರ ತಿಳಿದು ಪ್ರಧಾನಿ ನರೇಂದ್ರ ಮೋದಿಯವರು ಪ್ರತಿಕ್ರಿಯಿಸಿದ್ದಾರೆ. ಎಕ್ಸ್​ ಖಾತೆಯಲ್ಲಿ ಬರೆಯುವ ಮೂಲಕ ವಿನೇರ್ಶ್ ಫೋಗಾಟ್​ಗೆ ಧೈರ್ಯ ತುಂಬಿದ್ದಾರೆ.

Advertisment

ಪ್ರಧಾನಿ ನರೇಂದ್ರ ಮೋದಿ, ‘ವಿನೇಶ್, ನೀವು ಚಾಂಪಿಯನ್‌ಗಳಲ್ಲಿ ಚಾಂಪಿಯನ್! ನೀವು ಭಾರತದ ಹೆಮ್ಮೆ ಮತ್ತು ಪ್ರತಿಯೊಬ್ಬ ಭಾರತೀಯರಿಗೂ ಸ್ಫೂರ್ತಿ. ಇಂದಿನ ಹಿನ್ನಡೆ ನೋವು ತಂದಿದೆ. ನಾನು ಹೇಳುವ ಪದಗಳು ನಾನು ಅನುಭವಿಸುತ್ತಿರುವ ಹತಾಶೆಯ ಅರ್ಥವನ್ನು ವ್ಯಕ್ತಪಡಿಸಬಹುದು’ ಎಂದು ಬಯಸುತ್ತೇನೆ

‘ಇದೇ ಸಮಯದಲ್ಲಿ, ನೀವು ಸ್ಥಿತಿಸ್ಥಾಪಕತ್ವವನ್ನು ಸಾರುತ್ತೀರಿ ಎಂದು ನನಗೆ ತಿಳಿದಿದೆ. ಸವಾಲುಗಳನ್ನು ಎದುರಿಸುವುದು ನಿಮ್ಮ ಸ್ವಭಾವವಾಗಿದೆ. ಧೈರ್ಯವಾಗಿ ಹಿಂತಿರುಗಿ ಬನ್ನಿ! ನಾವೆಲ್ಲರೂ ನಿಮ್ಮೊಂದಿಗೆ ಇದ್ದೇವೆ’ ಎಂದು ಬರೆದುಕೊಂಡಿದ್ದಾರೆ.

Advertisment


">August 7, 2024

ವಿನೇಶ್​ ಫೋಗಾಟ್​ 50 ಕೆ.ಜಿ ಮಹಿಳಾ ಕುಸ್ತಿ ವಿಭಾಗದಲ್ಲಿ ಸ್ಪರ್ಧಿಸಿದ್ದರು. ನಿನ್ನೆ ನಡೆದ ಸತತ ಮೂರು ಪಂದ್ಯಗಳಲ್ಲಿ ಎದುರಾಳಿಗಳನ್ನು ಎದುರಿಸಿ ಫೈನಲ್​ಗೆ ಲಗ್ಗೆ ಇಟ್ಟರು. ಇಂದು ಫೈನಲ್​ ಪಂದ್ಯ ನಡೆಯಲಿದ್ದು, ಆದರೆ ಅದಕ್ಕೂ ಮುನ್ನ 100 ಗ್ರಾಂ ತೂಕ ಹೆಚ್ಚು ಇರುವ ಕಾರಣ ಪಂದ್ಯದಿಂದ ಅನರ್ಹರಾಗಿದ್ದಾರೆ.
ರಾಹುಲ್​ ಗಾಂಧಿ ಕೂಡ ಈ ಬಗ್ಗೆ ಮಾತನಾಡಿದ್ದು, ಒಲಿಂಪಿಕ್ಸ್​ನ ಇಡೀ ವ್ಯವಸ್ಥೆಯನ್ನು ಟೀಕಿಸಿದ್ದಾರೆ ಕುಸ್ತಿಪಟುಗಳ ಜೊತೆಗೆ ಇಡೀ ದೇಶವೇ ಭಾವನಾತ್ಮಕವಾಗಿದೆ ಎಂದು ಹೇಳಿದ್ದಾರೆ.
Advertisment
ಭಾರತೀಯರು ಈ ಮಹಿಳಾ ಪರಾಕ್ರಮಿ ಬಗ್ಗೆ ಭಾರೀ ನಿರೀಕ್ಷೆ ಇಟ್ಟು ಕೊಂಡಿತ್ತು. ಆದರೆ ಇದ್ದಕ್ಕಿದ್ದಂತೆಯೇ ತೂಕದಲ್ಲಾದ ಬದಲಾವಣೆ ಭಾರತೀಯರಿಗೆ ನೋವು ತರಿಸಿದೆ. ಅನೇಕರು ಸಾಮಾಜಿಕ ಜಾಲತಾಣದಲ್ಲಿ ವಿನೇಶ್​​ ಫೋಗಾಟ್​ ಬೆನ್ನಿಗೆ ನಿಂತು ಸಾಂತ್ವನ ಹೇಳುತ್ತಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
Advertisment
Advertisment
Advertisment