ಅಮೆರಿಕದ ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ಭವ್ಯ ಸ್ವಾಗತ..!
ವಿಶ್ವದ ದಿಗ್ಗಜ ನಾಯಕರ ನಡುವೆ ಕೆಲವು ಮಹತ್ವದ ಮಾತುಕತೆ
ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಲಿರುವ PM
ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಇದೇ ತಿಂಗಳು 3 ದಿನಗಳ ಕಾಲ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದಾರೆ ಎಂದು ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ವಿನಯ್ ಮೋಹನ್ ಕ್ವಾತ್ರಾ ಮಾಹಿತಿ ನೀಡಿದ್ದಾರೆ.
ಅಮೆರಿಕ ಅಧ್ಯಕ್ಷ ಜೋ ಬೈಡನ್ ಆಹ್ವಾನದ ಮೇರೆಗೆ ಪ್ರಧಾನಿ ಮೋದಿಯವರು ಇದೇ ಜೂನ್ 21, 22 ಮತ್ತು 23ರ ವರಗೆ ಭೇಟಿ ನೀಡಲಿದ್ದಾರೆ. ಜೂನ್ 21 ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಯೋಗ ದಿನ ಹಿನ್ನೆಲೆಯಲ್ಲಿ ನ್ಯೂಯಾರ್ಕ್ ನಗರದ ಯೋಗ ಕಾರ್ಯಕ್ರಮದಲ್ಲಿ ಬೆಳಗ್ಗೆ ಭಾಗವಹಿಸಲಿದ್ದಾರೆ. ಬಳಿಕ ಅಲ್ಲಿಂದ ವಾಷಿಂಗ್ಟನ್ ಡಿ.ಸಿ ನಗರಕ್ಕೆ ತೆರಳಿ ಅಲ್ಲಿ ಕೌಶಲ್ಯಾಭಿವೃದ್ಧಿ ಸಭೆಯಲ್ಲಿ ಭಾಗಿಯಾಗುವರು ಎಂದು ಹೇಳಿದ್ದಾರೆ.
ಜೂನ್ 22 ರಂದು ಪ್ರಧಾನಿ ಮೋದಿಯವರು ಅಮೆರಿಕದ ಶ್ವೇತಭವನಕ್ಕೆ ಭೇಟಿ ನೀಡುವ ಹಿನ್ನೆಲೆಯಲ್ಲಿ ಭವ್ಯ ಸ್ವಾಗತ ಕೋರಿ ಸೇನೆಯಿಂದ ಗನ್ ಸೆಲ್ಯೂಟ್ ಮಾಡಲಾಗುತ್ತದೆ. ವಿಶ್ವದ ದಿಗ್ಗಜ ನಾಯಕರ ನಡುವೆ ನಿಯೋಗ ಮಟ್ಟದ ಸಭೆ ನಡೆಯಲಿದೆ. ಸಭೆ ನಂತರ ಮೋದಿ- ಜೋ ಬೈಡನ್ ಭೋಜನ ಕೂಟವನ್ನು ಸ್ವೀಕರಿಸುವರು. ಬಳಿಕ ಸಮಾರಂಭದಲ್ಲಿ ಅಲ್ಲಿನ ಕಾಂಗ್ರೆಸ್ನ್ನುದ್ದೇಶಿಸಿ ಮೋದಿ ಭಾಷಣ ಮಾಡಲಿದ್ದಾರೆ ಎಂದು ತಿಳಿಸಿದರು.
ಜೂ. 23 ರಂದು 4-5 ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆ
ಪ್ರಧಾನಿ ಮೋದಿಯವರು ಜೂನ್ 23 ರಂದು 4-5 ಕಾರ್ಯಕ್ರಮಗಳಲ್ಲಿ ಭಾಗಿಯಾಗುವ ಸಾಧ್ಯತೆಯಿದೆ. ಮೊದಲು ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮೋದಿ ಭಾಷಣ ಮಾಡುವರು. ಮತ್ತೆ ಕೆಲವು ನಿರ್ದಿಷ್ಟಪಡಿಸಿದ ಸಿಇಒಗಳ ಜತೆಗೆ ಚರ್ಚಿಸಲಿದ್ದಾರೆ. ಇದಾದ ನಂತರ ಯುಎಸ್ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್, ವಿದೇಶಾಂಗ ಕಾರ್ಯದರ್ಶಿ ಆಂಟೊನಿ ಬ್ಲಿಂಕೆನ್ರನ್ನು ಭೇಟಿ ಮಾಡಿ ಕೆಲವು ಮಹತ್ವದ ಚರ್ಚೆಗಳನ್ನು ಕೈಗೊಳ್ಳುವರು.
ಕೊನೆಗೆ ಪ್ರಮುಖ ವೃತ್ತಿಪರರ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಅಮೆರಿಕದಲ್ಲಿ ಈ ಎಲ್ಲ ಮುಗಿದ ನಂತರ ಪ್ರಧಾನಿ ಮೋದಿಯವರು ಅಲ್ಲಿಂದ ನೇರ ಈಜಿಪ್ಟ್ಗೆ ದೇಶಕ್ಕೆ ಪ್ರಯಾಣ ಬೆಳೆಸುವರು ಎಂದು ಕಾರ್ಯದರ್ಶಿ ವಿನಯ್ ಮೋಹನ್ ಅವರು ಮಾಧ್ಯಮಗೋಷ್ಠಿಯಲ್ಲಿ ತಿಳಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ