newsfirstkannada.com

H-1B ವೀಸಾ ಇನ್ನೂ ಸುಲಭಗೊಳಿಸಿದ ಮೋದಿ-ಬೈಡನ್; ರಕ್ಷಣಾ, ಬಾಹ್ಯಾಕಾಶ ಕ್ಷೇತ್ರದಲ್ಲೂ ಮೆಗಾ ಡೀಲ್..!

Share :

23-06-2023

    ಇನ್ಮುಂದೆ ಜೆಟ್​ ಇಂಜಿನ್​ಗಳನ್ನು ಭಾರತದಲ್ಲಿ ಉತ್ಪಾದಿಸಲಾಗುತ್ತೆ

    US ಹಡಗುಗಳು ಕೆಟ್ಟು ಹೋದಲ್ಲಿ ಭಾರತೀಯ ಬಂದರುಗಳಲ್ಲಿ ದುರಸ್ತಿ

    ಅಮೆರಿಕದ MQ-9B ಸೀಗಾರ್ಡಿಯನ್ ಡ್ರೋನ್​ ಖರೀದಿಗೆ ಒಪ್ಪಂದ

ವಾಷಿಂಗ್ಟನ್​ ಡಿ.ಸಿ: ಪ್ರಧಾನಿ ನರೇಂದ್ರ ಮೋದಿ 3 ದಿನಗಳ ಕಾಲ ಅಮೆರಿಕ ಪ್ರವಾಸದಲ್ಲಿ ಕೆಲವು ಮಹತ್ವದ ಒಪ್ಪಂದಗಳು ಏರ್ಪಟ್ಟಿದ್ದು, ಉಬಯ ದೇಶಗಳು ವಿರೋಧಿ ಚೀನಾಗೆ ಎಚ್ಚರಿಕೆಯ ಸಂದೇಶವನ್ನು ರವಾನಿಸಿದ್ದಾರೆ.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಹಾಗೂ ಪ್ರಧಾನಿ ಮೋದಿಯವರು ಮಿಲಿಟರಿ ವ್ಯವಸ್ಥೆ ಮತ್ತು ಆರ್ಥಿಕ ಸಂಬಂಧಗಳನ್ನು ಸುಧಾರಿಸಲು ಕೆಲವು ರಕ್ಷಣಾ ಮತ್ತು ವಾಣಿಜ್ಯ ಒಪ್ಪಂದಗಳಿಗೆ ಸಹಿ ಮಾಡಿದ್ದಾರೆ. H-1B ವೀಸಾ ಬಗ್ಗೆ ಪ್ರಧಾನಿ ಮೋದಿ ಮತ್ತು ಜೋ ಬೈಡನ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇನ್ಮುಂದೆ H-1B ವೀಸಾವನ್ನು ರಿನೆವಲ್​ ಮಾಡಬಹುದಾಗಿದೆ. ಇದರಿಂದ ಅಮೆರಿಕದಲ್ಲಿ ಕೆಲಸ ಮಾಡುವ ಸಾವಿರಾರು ಭಾರತೀಯರಿಗೆ ಉಪಯೋಗವಾಗಲಿದೆ.

ಇದನ್ನೂ ಓದಿ: ಪ್ರಧಾನಿ ಮೋದಿಗಾಗಿ ಶ್ವೇತಭವನದಲ್ಲಿ US ಅಧ್ಯಕ್ಷ ‘ಸ್ಟೇಟ್​ ಡಿನ್ನರ್’​; ಎಷ್ಟು ಗಣ್ಯರು ಭಾಗಿಯಾಗಿದ್ದರು?

ಭಾರತೀಯ ಸೇನೆಗೆ ಮತ್ತಷ್ಟು ಶಕ್ತಿ

ಇಂಡಿಯನ್​ ಸೇನಾ ವಿಮಾನಗಳಿಗೆ ಇನ್ನಷ್ಟು ಶಕ್ತಿ ತುಂಬಲು ಜೆಟ್​ ಇಂಜಿನ್​ಗಳನ್ನು ಉತ್ಪಾದಿಸಲು ಜನರಲ್ ಎಲೆಕ್ಟ್ರಿಕ್ ಕೋ (GE.N) ಎನ್ನುವ ಟ್ರಯಲ್‌ಬ್ಲೇಜಿಂಗ್ (Trailblazing) ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರಿಂದ ಭಾರತದಲ್ಲಿ ಜೆಟ್ ಇಂಜಿನ್‌ಗಳನ್ನು ಉತ್ಪಾದಿಸಬಹುದಾಗಿದೆ. ಯುಎಸ್​ ಸೇನೆಯಲ್ಲಿರುವ MQ-9B ಸೀಗಾರ್ಡಿಯನ್ ಡ್ರೋನ್​​ಗಳನ್ನು ಭಾರತ ಖರೀದಿಸುವ ಯೋಜನೆಗೆ ಇಬ್ಬರು ಗಣ್ಯರು ಸಹಿ ಹಾಕಿದರು. ಈ ಡ್ರೋನ್​​​ಗಳು ಮುಂದಿನ ಪೀಳಿಗೆಗೆ ತುಂಬಾ ಉಪಕಾರಿಯಾಗಲಿವೆ.

ಎರಡು ದೇಶಗಳ ನಡುವಿನ ಕಡಲ ಒಪ್ಪಂದಕ್ಕೂ ಸಹಿ ಹಾಕಲಾಗಿದೆ. ಅಮೆರಿಕ ನೌಕಾಪಡೆಯ ಹಡಗುಗಳು ಕೆಟ್ಟು ಹೋದಲ್ಲಿ ಭಾರತೀಯ ಬಂದರುಗಳಲ್ಲಿ ದುರಸ್ತಿ ಮಾಡಲು ನಿಲ್ಲಿಸಬಹುದಾಗಿದೆ. ಅಮೆರಿಕದಲ್ಲಿ ಮೈಕ್ರೋ ಚಿಪ್​ಗಳನ್ನು ತಯಾರಿಸುವ ಮೈಕ್ರೋನ್​ ಟೆಕ್ನಾಲಜಿಯ ಜೊತೆ 2.7 ಬಿಲಿಯನ್ ಡಾಲರ್​ ಒಪ್ಪಂದಕ್ಕೆ ಭಾರತ ಒಪ್ಪಿಗೆ ಸೂಚಿಸಿದೆ.

ಮುಂದಿನ ದಿನಗಳಲ್ಲಿ ಚಿಪ್​ ತಯಾರಿಸುವಂತ ಸೆಮಿ ಕಂಡಕ್ಟರ್​ ಟೆಸ್ಟಿಂಗ್​ ಮತ್ತು ಪ್ಯಾಕೇಜಿಂಗ್​ ಕೇಂದ್ರವನ್ನು ಗುಜರಾತ್​ನಲ್ಲಿ ಸ್ಥಾಪಿಸುವ ಅಗ್ರಿಮೆಂಟ್​ಗೆ ಸಹಿ ಹಾಕಲಾಗಿದೆ. ಇದೇ ವೇಳೆ ಬಾಹ್ಯಾಕಾಶ ಸೇರಿದಂತೆ ಕೆಲವು ಮಹತ್ವದ ಒಪ್ಪಂದಗಳ ಬಗ್ಗೆ ಜೋ ಬೈಡನ್ ಹಾಗೂ ಪ್ರಧಾನಿ ಮೋದಿಯವರು ಚರ್ಚೆ ಮಾಡಿದ್ದಾರೆ.

ಬಾಹ್ಯಾಕಾಶ ನಿಲ್ದಾಣಕ್ಕೆ ಜಂಟಿ ಭೇಟಿ 

ನಾಸಾ ಮತ್ತು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಮುಂದಿನ ವರ್ಷ ಅಂತಾರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣಕ್ಕೆ ಭೇಟಿ ನೀಡಲು ಜಂಟಿಯಾಗಿ ಒಪ್ಪಂದ ಸೂಚಿವೆ. ನ್ಯೂಯಾರ್ಕ್​ನಲ್ಲಿ ಸ್ಪೇಸ್​ ಎಕ್ಸ್​ ಮುಖ್ಯಸ್ಥ ಎಲಾನ್​ ಮಸ್ಕ್​ ಜೊತೆಯು ಕೆಲವೊಂದು ವಾಣಿಜ್ಯ ಒಪ್ಪಂದಗಳ ಬಗ್ಗೆಯೂ ಮಾತುಕತೆ ನಡೆದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

H-1B ವೀಸಾ ಇನ್ನೂ ಸುಲಭಗೊಳಿಸಿದ ಮೋದಿ-ಬೈಡನ್; ರಕ್ಷಣಾ, ಬಾಹ್ಯಾಕಾಶ ಕ್ಷೇತ್ರದಲ್ಲೂ ಮೆಗಾ ಡೀಲ್..!

https://newsfirstlive.com/wp-content/uploads/2023/06/PM_MODI-1-2.jpg

Load More