newsfirstkannada.com

ಕುತೂಹಲ ಮೂಡಿಸಿದ ಈಜಿಪ್ಟ್​ ಪ್ರವಾಸ.. ಐತಿಹಾಸಿಕ ಅಲ್ ಹಕೀಮ್ ಮಸೀದಿಗೆ ಭೇಟಿ ನೀಡಲಿರೋ ಪ್ರಧಾನಿ ಮೋದಿ

Share :

24-06-2023

    ಒಂದು ಸಾವಿರ ವರ್ಷಗಳಷ್ಟು ಹಳೆಯ ಮಸೀದಿ ನಿರ್ಮಿಸಿದ್ದು ಯಾರು?

    ಅಮೆರಿಕ ನಂತರ 2 ದಿನಗಳ ಈಜಿಪ್ಟ್​ ಪ್ರವಾಸದಲ್ಲಿ ಪ್ರಧಾನಿ ಮೋದಿ

    ಮೋದಿ ವಿದೇಶ ಪ್ರವಾಸದ ವೇಳೆ 3ನೇ ಮಸೀದಿಗೆ ಭೇಟಿ ನೀಡ್ತಿದ್ದಾರೆ

ಸದ್ಯ ಅಮೆರಿಕ ಪ್ರವಾಸ ಮುಗಿಸಿರುವ ಪ್ರಧಾನಿ ನರೇಂದ್ರ ಮೋದಿಯವರು ಮತ್ತೊಂದು ಐತಿಹಾಸಿಕ ಪ್ರವಾಸ ಕೈಗೊಂಡಿದ್ದಾರೆ. ಯುಎಸ್​ನಿಂದ ನೇರ ಈಜಿಪ್ಟ್​ ವಿಮಾನ ಹತ್ತಿರುವ ಮೋದಿ 2 ದಿನ ಅಲ್ಲಿನ ಪ್ರಮುಖ ಸ್ಥಳಗಳಿಗೆ ಭೇಟಿ ನೀಡಿ ಹಾಗೂ ಗಣ್ಯರ ಜೊತೆ ಸಭೆಯಲ್ಲಿ ಪಾಲ್ಗೊಳ್ಳಲಿದ್ದಾರೆ. ಇದೇ ವೇಳೆ ಮೋದಿಯವರು ಮಸೀದಿಯೊಂದಕ್ಕೆ ಭೇಟಿ ನೀಡುತ್ತಿರುವುದು ಕುತೂಹಲಕ್ಕೆ ಕಾರಣವಾಗಿದೆ.

ಈಜಿಪ್ಟ್​ಗೆ ಭೇಟಿ ನೀಡುತ್ತಿರುವ ಮೋದಿ ಕೈರೋದಲ್ಲಿನ ಒಂದು ಸಾವಿರ ವರ್ಷಗಳಷ್ಟು ಹಳೆಯ ಐತಿಹಾಸಿಕ ಇಮಾಮ್ ಅಲ್- ಹಕೀಮ್ ಬಿ ಅಮರ್ ಅಲ್ಲಾ ಮಸೀದಿಗೆ ಭೇಟಿ ನೀಡಲಿದ್ದಾರೆ. ಈ ಮಸೀದಿಯನ್ನು ಪತಿಮಿಡ್ ವಂಶಸ್ಥರು ಖಲೀಫನ ಕಾಲದಲ್ಲಿ ನಿರ್ಮಾಣ ಮಾಡಿದ್ದಾರೆ. ವರ್ಷಗಳು ಕಳೆದಂತೆ ಮಸೀದಿ ಅವನತಿಯತ್ತ ಸಾಗಿತ್ತು. ಆದ್ರೆ, ದಾವೂದಿ ಬೊಹರ್​ ಎನ್ನುವ ಸಮುದಾಯದವರು ಮರುನಿರ್ಮಾಣ ಮಾಡಿದ್ದಾರೆ.

ಪ್ರಧಾನಿ ಮೋದಿ ವಿದೇಶಗಳಲ್ಲಿ ಮಸೀದಿಗೆ ಭೇಟಿ ನೀಡುತ್ತಿರುವ 3ನೇ ಮಸೀದಿ ಇದಾಗಿದೆ. ಈ ಮೊದಲು ಅಂದರೆ, 2015ರಲ್ಲಿ ಅಮೆರಿಕಕ್ಕೆ ಹೋಗಿದ್ದಾಗ ಅಲ್ಲಿನ ಮಸೀದಿಗೆ ಭೇಟಿ ಕೊಟ್ಟಿದ್ದರು. ನಂತರ 2018ರಲ್ಲಿ ಇಂಡೋನೇಷ್ಯಾ ರಾಷ್ಟ್ರದ ಮಸೀದಿಗೆ ಭೇಟಿ ನೀಡಿರುವುದು ಕೊನೆಯದಾಗಿತ್ತು. ಸದ್ಯ ಈಜಿಪ್ಟ್​ ಪ್ರವಾಸದಲ್ಲಿರುವ ಪ್ರಧಾನಿ ಈಜಿಪ್ಟ್​ನಲ್ಲಿ ನಿರ್ಮಿಸಿದ 11ನೇ ಶತಮಾನದ ಮಸೀದಿಗೆ ಭೇಟಿ ನೀಡುತ್ತಿರುವುದು ಕುತೂಹಲ ಮೂಡಿಸಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಕುತೂಹಲ ಮೂಡಿಸಿದ ಈಜಿಪ್ಟ್​ ಪ್ರವಾಸ.. ಐತಿಹಾಸಿಕ ಅಲ್ ಹಕೀಮ್ ಮಸೀದಿಗೆ ಭೇಟಿ ನೀಡಲಿರೋ ಪ್ರಧಾನಿ ಮೋದಿ

https://newsfirstlive.com/wp-content/uploads/2023/06/US_PM_MODI_EGYPT_1.jpg

Load More