newsfirstkannada.com

×

ಅಮೆರಿಕದಲ್ಲಿ ಪ್ರಧಾನಿ ಮೋದಿ ಕ್ಯಾಮೆರಾದಲ್ಲಿ ಕಂಡ ಕ್ಷಣಗಳು.. ಹೇಗಿವೆ ಗೊತ್ತಾ ಟಾಪ್​- 10 ಫೋಟೊಗಳು

Share :

Published June 24, 2023 at 8:25am

Update June 24, 2023 at 8:20am

    ಪ್ರಧಾನಿ ಮೋದಿಯವರು ಅಮೆರಿಕ ಅಧ್ಯಕ್ಷ ಜೋ ಬೈಡನ್ ಜತೆ ಚರ್ಚೆ

    ಕಮಲಾ ಹ್ಯಾರಿಸ್​ ಮೋದಿಯವರಿಗೆ ಫೋನ್​ನಲ್ಲಿ ತೋರಿಸಿದ್ದು ಏನು..?

    ನ್ಯೂಸ್​ಫಸ್ಟ್​ನಲ್ಲಿ ಪ್ರಧಾನಿ ಮೋದಿಯವರ ಟಾಪ್​- 10 ಫೋಟೋಗಳು

ಪ್ರಧಾನಿ ನರೇಂದ್ರ ಮೋದಿಯವರು ಅಮೆರಿಕ ಪ್ರವಾಸ ಮುಗಿಸಿದ್ದು ಅಲ್ಲಿಂದ ನೇರ ಈಜಿಪ್ಟ್​ ಕಡೆಗೆ ಯಾತ್ರೆ ಬೆಳೆಸಿದ್ದಾರೆ. ಮೂರು ದಿನಗಳ ಯುಎಸ್​ ಭೇಟಿ ವೇಳೆ ಹಲವು ಮಹತ್ವದ ಚರ್ಚೆ, ಮಾತುಕತೆ, ಒಪ್ಪಂದಗಳನ್ನು ಮಾಡಿಕೊಳ್ಳಲಾಯಿತು. ಈ ವೇಳೆ ಪ್ರಧಾನಿಯವರು ಅಮೆರಿಕ ಅಧ್ಯಕ್ಷ ಜೋ ಬೈಡನ್​ ಮತ್ತು ಪ್ರಥಮ ಮಹಿಳೆ ಜಿಲ್ ಬೈಡನ್, ಉಪಾಧ್ಯಕ್ಷ ಕಮಲಾ ಹ್ಯಾರಿಸ್ ಸೇರಿದಂತೆ ಗಣ್ಯ ಉದ್ಯಮಿಗಳು, ಸಿಇಓ ಜೊತೆ ಹಲವಾರು ವಿಷಯಗಳನ್ನು ಮಾತನಾಡಿದರು. ಭಾರತೀಯರನ್ನು ಭೇಟಿ ಮಾಡಿ ಕೆಲವು ಸಂತಸದ ಕ್ಷಣಗಳನ್ನು ಮೋದಿ ಕಳೆದಿದ್ದಾರೆ. ಈ ವೇಳೆ ಕ್ಯಾಮೆರಾಮೆನ್​ ತೆಗೆದಂತಹ ಕೆಲವು ಫೋಟೋಗಳು ಸಖತ್​ ಆಗಿ ಕಾಣಿಸುತ್ತಿವೆ.

ಸಭೆಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬೈಡನ್​ ಹಾಗೂ ಪ್ರಧಾನಿ ಮೋದಿಯವರು ಏನೋ ಗುಟ್ಟಾಗಿ ಮಾತನಾಡಿಕೊಂಡರು.

ಗೂಗಲ್​ ಸಿಇಓ ಸುಂದರ್ ಪಿಚೈ, ಮೈಕ್ರೋಸಾಫ್ಟ್ ಸಿಇಒ ಸತ್ಯ ನಾಡೆಲ್ಲಾ ಸೇರಿದಂತೆ ಪ್ರಮುಖ ಸಿಇಓಗಳು ಇರುವ ಸಭೆಯಲ್ಲಿ ಪ್ರಧಾನಿ ಮೋದಿ ಕೆಲ ವಿಷಯಗಳನ್ನು ಚರ್ಚೆ ಮಾಡಿದರು.

ಅಮೆರಿಕ ಅಧ್ಯಕ್ಷ ಜೋ ಬೈಡನ್ ಸಭೆಯ ಮಧ್ಯೆದಲ್ಲಿ ಪ್ರಧಾನಿ ಮೋದಿಯವರಿಗೆ ಟೀ ಶರ್ಟ್​ ಗಿಫ್ಟ್​ ಆಗಿ ನೀಡಿದರು.

ಅಮೆರಿಕದ ಉಪಾಧ್ಯಕ್ಷೆ ಕಮಲ ಕಮಲಾ ಹ್ಯಾರಿಸ್ ಜೊತೆ ಪ್ರಧಾನಿ ಮೋದಿಯವರು ಫೋಟೋಗೆ ಫೋಸ್ ಕೊಟ್ಟರು.

ಶ್ವೇತಭವನದ ಔತಣಕೂಟದ ವೇಳೆ ಉಪಾಧ್ಯಕ್ಷೆ ಕಮಲ ಕಮಲಾ ಹ್ಯಾರಿಸ್ ಅವರು ಪ್ರಧಾನಿ ಮೋದಿಗೆ ಮೊಬೈಲ್​ ಫೋನ್​ನಲ್ಲಿ ಏನನ್ನೋ ತೋರಿಸುತ್ತಿದ್ದರು.

ಪ್ರಧಾನಿ ಮೋದಿಯವರು ಉದ್ಯಮಿಗಳ ಜೊತೆ ಸಂವಾದ ನಡೆಸಲು ವೇದಿಕೆಗೆ ಆಗಮಿಸಿದರು. ಈ ವೇಳೆ ಅಲ್ಲಿದ್ದವರಿಗೆ ನಮಸ್ಕಾರ ಮಾಡಿದರು.

ಅಮೆರಿಕದ ಆಡಿಟೋರಿಯಂನಲ್ಲಿ ಉದ್ಯಮಿಯೊಬ್ಬರ ಜೊತೆ ಪ್ರಧಾನಿ ಮೋದಿಯವರು ಸೆಲ್ಫಿಗೆ ಪೋಸ್​ ಕೊಟ್ಟರು.

US ಕಾಂಗ್ರೆಸ್​ನಲ್ಲಿ ಪ್ರಧಾನಿ ಮೋದಿಯವರು ಭಾಷಣ ಮಾಡಿದ ಕ್ಷಣ.

ಸಭೆ ಮುಗಿದ ಬಳಿಕ ಜೋ ಬೈಡನ್​ ಮತ್ತು ಮೋದಿ ಹಸ್ತಾ ಲಾಘನ ನೀಡಿ, ಪರಸ್ಪರ ಮಾತನಾಡಿಕೊಂಡರು.

ಪ್ರಧಾನಿ ಮೋದಿಯವರು ಅಮೆರಿಕ ಪ್ರವಾಸ ಮುಗಿಸಿ ಈಜಿಪ್ಟ್​ಗೆ ತೆರಳಲು ವಿಮಾನವನ್ನು ಹತ್ತುವ ಮುನ್ನಾ ಕೈ ಬೀಸಿದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಅಮೆರಿಕದಲ್ಲಿ ಪ್ರಧಾನಿ ಮೋದಿ ಕ್ಯಾಮೆರಾದಲ್ಲಿ ಕಂಡ ಕ್ಷಣಗಳು.. ಹೇಗಿವೆ ಗೊತ್ತಾ ಟಾಪ್​- 10 ಫೋಟೊಗಳು

https://newsfirstlive.com/wp-content/uploads/2023/06/US_PM_MODI_JEO-1.jpg

Load More