ಯಾವ ವರ್ಷದ ಬರ್ತ್ಡೇಯಂದು ಕಾಶಿವಿಶ್ವನಾಥ ದರ್ಶನ ಪಡೆದ್ರು?
73ನೇ ವಸಂತಕ್ಕೆ ಕಾಲಿಟ್ಟಿರುವ ಪ್ರಧಾನಿ ನರೇಂದ್ರ ಮೋದಿ
ಮೋದಿಯ ಕಳೆದ 5 ವರ್ಷದ ಹುಟ್ಟುಹಬ್ಬ ಆಚರಣೆ ಹೇಗಿದ್ದವು?
ಪ್ರಧಾನಿ ನರೇಂದ್ರ ಮೋದಿಯವರು ಇಂದು 73ನೇ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದು ದೇಶದಲ್ಲೆಡೆ ಅವರ ಅಭಿಮಾನಿಗಳು, ಬಿಜೆಪಿಯ ನಾಯಕರು, ಮುಖಂಡರು, ಕಾರ್ಯಕರ್ತರು ವಿಶೇಷ ರೀತಿಯಲ್ಲಿ ಆಚರಣೆ ಮಾಡುತ್ತಿದ್ದಾರೆ. ಈ ಎಲ್ಲದರ ನಡುವೆ ಕಳೆದ 5 ವರ್ಷಗಳಿಂದ ಮೋದಿ ಬರ್ತ್ಡೇಯನ್ನು ಯಾವ ರೀತಿ ಆಚರಿಸಲಾಗಿದೆ ಎನ್ನುವುದರ ಮಾಹಿತಿ ಇಲ್ಲಿದೆ.
ಗುಜರಾತ್ನ ಮೆಹ್ಸಾನಾ ಜಿಲ್ಲೆಯ ವಡ್ನಗರ ಎನ್ನುವಲ್ಲಿ ಮೋದಿಯವರು 1950 ಸೆಪ್ಟೆಂಬರ್ 17 ರಂದು ಹುಟ್ಟಿದರು. ದಾಮೋದರದಾಸ್ ಮುಲ್ಚಂದ್ ಮೋದಿ ಮತ್ತು ಹೀರಾಬೆನ್ ಮೋದಿ ದಂಪತಿಯ ಆರು ಮಕ್ಕಳಲ್ಲಿ ಮೂರನೇ ಮಗನೇ ನರೇಂದ್ರ ಮೋದಿ. ವಡ್ನಗರನಲ್ಲಿದ್ದ ರೈಲ್ವೆ ನಿಲ್ದಾಣದಲ್ಲಿ ಮೋದಿಯವರು ತಂದೆ ಜೊತೆ ಟೀ ಅಂಗಡಿಯಲ್ಲಿ ಚಹಾ ಮಾರುತ್ತ, ಸಣ್ಣ-ಪುಟ್ಟ ಕೆಲಸಗಳನ್ನು ಮಾಡುತ್ತಿದ್ದರು ಎಂದು ಹೇಳಲಾಗಿದೆ. ಮೋದಿಯವರು ಕಳೆದ 5 ಬರ್ತ್ಡೇಗಳನ್ನು ಹೇಗೆ ಆಚರಣೆ ಮಾಡಿಕೊಂಡಿದ್ದಾರೆ ಎಂದರೆ.
2018ರ ಬರ್ತ್ಡೇ ವೇಳೆ ಕಾಶಿವಿಶ್ವನಾಥ ದರ್ಶನ
ತಮ್ಮ 68ನೇ ಹುಟ್ಟುಹಬ್ಬದ ಅಂಗವಾಗಿ ಪ್ರಧಾನಿ ಮೋದಿ ತಮ್ಮ ಲೋಕಸಭಾ ಕ್ಷೇತ್ರವಾದ ವಾರಣಾಸಿಗೆ ಹೋಗಿ ಅಲ್ಲಿ ಕಾಶಿ ವಿಶ್ವನಾಥ ದೇವರ ದರ್ಶನ ಪಡೆದಿದ್ದರು. ಇದೇ ವೇಳೆ ಅವರು ಕಾಶಿ ವಿದ್ಯಾಪೀಠ ಬ್ಲಾಕ್‌ನಲ್ಲಿನ ರೊಹನಿಯಾದ ನರೌರ್ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳ ಜೊತೆ ಕೆಲ ಸಮಯ ಕಳೆದಿದ್ದರು.
2019ರಲ್ಲಿ ತಾಯಿ ಜೊತೆ ಹುಟ್ಟುಹಬ್ಬ
2019ರಲ್ಲಿ ತಮ್ಮ ಜನ್ಮದಿನದಂದು ಪ್ರಧಾನಿ ಮೋದಿಯವರು ಮೊದಲು ತಮ್ಮ ತಾಯಿ ಹೀರಾಬೆನ್ ಅವರ ಆಶೀರ್ವಾದ ಪಡೆದರು. ನಂತರ ಅವರು ಗುಜರಾತ್‌ನಲ್ಲಿ ನಡೆದ ಕೆವಾಡಿಯಾದಲ್ಲಿ ನಡೆದ ನಮಾಮಿ ನರ್ಮದಾ ಉತ್ಸವದಲ್ಲಿ ಭಾಗವಹಿಸಿದ್ದರು. ಏಕತಾ ಪ್ರತಿಮೆ ಪಕ್ಕದಲ್ಲಿ ಬೃಹತ್ ಸಮಾವೇಶದಲ್ಲಿ ಭಾಗಿಯಾಗಿ ಮಾತನಾಡಿದ್ದರು.
2020ರಲ್ಲಿ ಕೊರೊನಾ, ಬರ್ಡೇ ಇಲ್ಲ
2020ರಲ್ಲಿ ಕೊರೊನಾ ತಾಂಡವಾಡುತ್ತಿದ್ದ ಹಿನ್ನೆಲೆಯಲ್ಲಿ ಪ್ರಧಾನಿ ಮೋದಿಯ ಹುಟ್ಟುಹಬ್ಬ ಆಚರಣೆ ಮಾಡಲಿಲ್ಲ. ಆದರೂ ಬಿಜೆಪಿಯು ಸೇವಾ ಸಪ್ತಾಹದಂತಹ ಹಲವಾರು ಕಾರ್ಯಕ್ರಮಗಳನ್ನು ಕೈಗೊಂಡಿತ್ತು. ಈ ವೇಳೆ ಜನರಿಗೆ ದಿನಸಿಗಳನ್ನು ಹಂಚಿ, ರಕ್ತದಾನ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಬಿಜೆಪಿ ಮುಖ್ಯಸ್ಥ ಜೆಪಿ ನಡ್ಡಾ ಅವರು ಅಂದು ಮೋದಿ ಸರ್ಕಾರದ 243 ಅಭೂತಪೂರ್ವ ಸಾಧನೆಗಳ ಮಾಹಿತಿ ಇರುವ ಲಾರ್ಡ್ ಆಫ್ ರೆಕಾರ್ಡ್ಸ್ ಎಂಬ ಬುಕ್ ರಿಲೀಸ್ ಮಾಡಿದ್ದರು.
2021ರಲ್ಲಿ 2.26 ಕೋಟಿ ಕೋವಿಡ್ ಲಸಿಕೆ ವಿತರಣೆ
ವಿಶೇಷ ಅಭಿಯಾನದ ಭಾಗವಾಗಿ ದೇಶದಲ್ಲಿ 2.26 ಕೋಟಿ ಕೋವಿಡ್ ಲಸಿಕೆಗಳನ್ನು ನೀಡಲಾಗಿತ್ತು. 2021ರಲ್ಲಿ ಪ್ರಧಾನಿ ಮೋದಿಗೆ ಗಿಫ್ಟ್ ರೀತಿಯಲ್ಲಿ ಬಂದಿದ್ದ ಹಲವಾರು ವಸ್ತುಗಳನ್ನು ಸ್ಮರಣಿಕೆಗಳಾಗಿ ಇ-ಹರಾಜು ಮಾಡಲಾಗಿತ್ತು.
2022 ಆಫ್ರಿಕಾದ 8 ಚೀತಾಗಳನ್ನ ಅರಣ್ಯಕ್ಕೆ ಬಿಟ್ಟಿದ್ದರು
ಆಫ್ರಿಕಾದಿಂದ ಭಾರತಕ್ಕೆ ವಿಶೇಷ ವಿಮಾನದಲ್ಲಿ ರವಾನೆ ಮಾಡಿಕೊಂಡಿದ್ದ 8 ಚೀತಾಗಳನ್ನು 2022ರಲ್ಲಿ ತಮ್ಮ ಹುಟ್ಟುಹಬ್ಬದಂದು ಪ್ರಧಾನಿ ಮೋದಿಯವರು ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಬಿಟ್ಟಿದ್ದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ