ಮಕ್ಕಳ ಜೊತೆ ಪ್ರಧಾನಿ ಮೋದಿ ಕೀಟಲೆ
ಮೋದಿ ಭೇಟಿಗೆ ಗಣ್ಯರ ಜೊತೆ ಬಂದಿದ್ದ ಮಕ್ಕಳು
ಸೋಶಿಯಲ್ ಮೀಡಿಯಾದಲ್ಲಿ ವಿಡಿಯೋ ವೈರಲ್
ದೇಶವನ್ನು ಮುನ್ನಡೆಸುತ್ತಿರುವ ಪ್ರಧಾನಿ ಮೋದಿ ಪ್ರತಿ ಕ್ಷಣವೂ ಬ್ಯುಸಿ. ಹೀಗಿರುವಾಗ ಪ್ರಧಾನಿ ಮೋದಿಗೆ ಅವರಿಗೆ ಸಂಬಂಧಿಸಿದ ಅಪರೂಪದ ವಿಡಿಯೋ ಒಂದನ್ನು ಬಿಜೆಪಿ ಶೇರ್ ಮಾಡಿದೆ.
ಆ ವಿಡಿಯೋದಲ್ಲಿ ಮೋದಿ, ಇಬ್ಬರು ಮಕ್ಕಳ ಜೊತೆ ಮಗುವಾಗಿದ್ದಾರೆ. ಬಹುಶಃ ವಿಡಿಯೋ ಗಮನಿಸಿದ್ರೆ ದೆಹಲಿಯಲ್ಲಿರುವ ಪ್ರಧಾನಿ ಕಚೇರಿಗೆ ಮೋದಿಯನ್ನು ಭೇಟಿಯಾಗಲು ಗಣ್ಯರು ಬಂದಿದ್ದ ಸಂದರ್ಭದಲ್ಲಿ ಸೆರೆಯಾದ ವಿಡಿಯೋ ಎಂದು ಕಾಣುತ್ತದೆ.
ಗಣ್ಯರ ಜೊತೆ ಬಂದಿದ್ದ ಇಬ್ಬರು ಮಕ್ಕಳನ್ನು ತಮ್ಮ ಪಕ್ಕಕ್ಕೆ ಕರೆಯುವ ಪ್ರಧಾನಿ, ಮಕ್ಕಳ ಕಿವಿಯನ್ನು ಹಿಡಿದು ಇಬ್ಬರ ತಲೆಗೆ ಡಿಚ್ಚಿ ಕೊಡಿಸುತ್ತಾರೆ. ನಂತರ ಬಾಲಕಿಯ ತಲೆಗೆ ತಮಾಷೆಯಿಂದ ಹೊಡೆಯುತ್ತಾರೆ. ಕೊನೆಗೆ ಬಾಲಕಿಯ ಮುಂದೆ ನಿಂತು, ತಮ್ಮ ಹಣೆಗೆ ನಾಣ್ಯವನ್ನು ಅಂಟಿಸಿಕೊಂಡು ತಲೆಯ ಹಿಂಬದಿಂದ ಹೊಡೆದು ಅದನ್ನು ಬೀಳಿಸುತ್ತಾರೆ.
ನಂತರ ನಾನು ಮಾಡಿದ ಮ್ಯಾಜಿಕ್ ಅನ್ನು ನೀವು ಮಾಡುವಂತೆ ಮಕ್ಕಳಿಗೆ ಮೋದಿ ಹೇಳಿತ್ತಾರೆ. ಮೋದಿ ಅವರೇ ಇಬ್ಬರು ಮಕ್ಕಳ ಹಣೆಗೆ ನಾಣ್ಯವನ್ನು ಅಂಟಿಸಿದಂತೆ ಮಾಡುತ್ತಾರೆ. ಆದರೆ ನಾಣ್ಯವನ್ನು ಅಂಟಿಸಿರುವುದಿಲ್ಲ. ಹೀಗಿದ್ದೂ ನಾಣ್ಯವನ್ನು ಬೀಳಿಸುವಂತೆ ಮೋದಿ ಹೇಳುತ್ತಾರೆ. ಅವರ ತಲೆಗೆ ನಿಧಾನವಾಗಿ ತಟ್ಟುವ ವಿಡಿಯೋ ಅದಾಗಿದೆ. ಈ ವಿಡಿಯೋವನ್ನು ಶೇರ್ ಮಾಡಿರುವ ಬಿಜೆಪಿ, ಮಕ್ಕಳ ಜೊತೆ ಮೋದಿ ಮಗುವಾಗಿದ್ದಾರೆ ಎಂದು ಕ್ಯಾಪ್ಷನ್ ನೀಡಿದೆ.
ವಿಡಿಯೋದಲ್ಲಿ ಇಬ್ಬರು ಮಕ್ಕಳ ಜೊತೆ ಮೋದಿ ಮಾತುಕತೆ ನಡೆಸಿದ್ದಾರೆ. ಆದರೆ ಏನೆಲ್ಲ ಮಾತನ್ನಾಡಿದ್ದಾರೆ ಅನ್ನೋದು ಗೊತ್ತಾಗುತ್ತಿಲ್ಲ. ಸಂಭಾಷಣೆಯೊಂದಿಗೆ ತಮಾಷೆ ಮಾಡಿದ ವಿಡಿಯೋ ಅದಾಗಿದೆ. ವಿಡಿಯೋದಲ್ಲಿನ ಆಡಿಯೋವನ್ನು ಮ್ಯೂಟ್ ಮಾಡಲಾಗಿದೆ.
बच्चों के साथ बच्चे बन जाते हैं मोदी जी… pic.twitter.com/UUOXT5oouX
— BJP (@BJP4India) November 16, 2023
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ