Advertisment

ಭಾರತ-ಚೀನಾ ಮಧ್ಯೆ ಮತ್ತೊಂದು ದೊಡ್ಡ ಬೆಳವಣಿಗೆ.. 5 ವರ್ಷಗಳ ಬಳಿಕ ಮೋದಿ, ಜಿನ್​ಪಿಂಗ್ ಮಾತುಕತೆ..!

author-image
Ganesh
Updated On
ಭಾರತ-ಚೀನಾ ಮಧ್ಯೆ ಮತ್ತೊಂದು ದೊಡ್ಡ ಬೆಳವಣಿಗೆ.. 5 ವರ್ಷಗಳ ಬಳಿಕ ಮೋದಿ, ಜಿನ್​ಪಿಂಗ್ ಮಾತುಕತೆ..!
Advertisment
  • ರಷ್ಯಾ ಬ್ರಿಕ್ಸ್ ಸಮ್ಮೇಳನದಿಂದ ದೊಡ್ಡ ಸುದ್ದಿ ಹೊರಬಿದ್ದಿದೆ
  • ಉಭಯ ದೇಶಗಳ ನಡುವೆ ದ್ವಿಪಕ್ಷೀಯ ಮಾತುಕತೆ
  • ವಿದೇಶಾಂಗ ಕಾರ್ಯದರ್ಶಿ ವಿಕ್ರಮ್​ರಿಂದ ಮಹತ್ವದ ಮಾಹಿತಿ

ರಷ್ಯಾ ಬ್ರಿಕ್ಸ್ ಸಮ್ಮೇಳನದಿಂದ ದೊಡ್ಡ ಸುದ್ದಿಯೊಂದು ಹೊರಬಿದ್ದಿದೆ. ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಅಧ್ಯಕ್ಷ ಶಿ ಜಿನ್‌ಪಿಂಗ್ (Xi Jinping) ನಡುವೆ ದ್ವಿಪಕ್ಷೀಯ ಸಭೆ ನಡೆಯಲಿದೆ.

Advertisment

2019, ಅಕ್ಟೋಬ್​​​ನಲ್ಲಿ ಚೀನಾ ಅಧ್ಯಕ್ಷರು ಭಾರತಕ್ಕೆ ಭೇಟಿ ನೀಡಿದ್ದರು. ತಮಿಳುನಾಡಿನ ಮಹಾಬಲಿಪುರಮ್​​ನಲ್ಲಿ ಮೋದಿ, ಜಿನ್​ಪಿಂಗ್​ರನ್ನು ಭೇಟಿಯಾಗಿದ್ದರು. ಐದು ವರ್ಷಗಳ ಬಳಿಕ ಮತ್ತೆ ಉಭಯ ನಾಯಕರು ದ್ವಿಪಕ್ಷೀಯ ಮಾತುಕತೆ ನಡೆಸುತ್ತಿದ್ದಾರೆ. 2020ರಲ್ಲಿ ಗಾಲ್ವಾನ್‌ನಲ್ಲಿ ಭಾರತ ಮತ್ತು ಚೀನಾ ಸೇನೆಗಳ ನಡುವಿನ ಘರ್ಷಣೆ ನಡೆದಿತ್ತು. ನಂತರ ಉಭಯ ದೇಶಗಳ ನಡುವೆ ಉದ್ವಿಗ್ನಗೊಂಡಿತ್ತು. ಇದೀಗ ಎರಡು ದೇಶಗಳ ಮಾತುಕತೆ ಮತ್ತೆ ಹಳಿಗೆ ಬಂದಿದೆ.

ವಿದೇಶಾಂಗ ಕಾರ್ಯದರ್ಶಿ ಮಾಹಿತಿ
ಪ್ರಧಾನಿ ಮೋದಿ ಮತ್ತು ಜಿನ್‌ಪಿಂಗ್ ನಡುವೆ ನಡೆಯಲಿರುವ ಸಭೆಯ ಕುರಿತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಮಾಹಿತಿ ನೀಡಿದ್ದಾರೆ. ಬ್ರಿಕ್ಸ್ ಶೃಂಗಸಭೆಯ ಸಂದರ್ಭದಲ್ಲಿ ದ್ವಿಪಕ್ಷೀಯ ಸಭೆ ನಡೆಯಲಿದೆ ಎಂದು ತಿಳಿಸಿದ್ದಾರೆ.

ಪೂರ್ವ ಲಡಾಖ್‌ನಲ್ಲಿ ನಡೆಯುತ್ತಿದ್ದ ಗಡಿ ವಿವಾದ ಇತ್ಯರ್ಥಕ್ಕೆ ಒಪ್ಪಂದ ಆಗಿದೆ. ಎಲ್‌ಎಸಿಯಲ್ಲಿ ಗಸ್ತು ತಿರುಗುವ ಕುರಿತು ಉಭಯ ದೇಶಗಳ ನಡುವೆ ಒಪ್ಪಂದಕ್ಕೆ ಬರಲಾಗಿದೆ. ಕಳೆದ ಕೆಲವು ವಾರಗಳಿಂದ ಭಾರತ ಮತ್ತು ಚೀನಾದ ಸಂಧಾನಕಾರರು ಈ ವಿಷಯದ ಬಗ್ಗೆ ಸಂಪರ್ಕದಲ್ಲಿದ್ದಾರೆ. 2020ರಲ್ಲಿ ಈ ಪ್ರದೇಶಗಳಲ್ಲಿ ಉದ್ಭವಿಸಿದ ಸಮಸ್ಯೆಗಳಿಗೆ ಪರಿಹಾರ ಶೀಘ್ರದಲ್ಲೇ ಸಿಗಲಿದೆ ಎಂದು ವಿಕ್ರಮ್ ಮಿಸ್ರಿ ತಿಳಿಸಿದ್ದಾರೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment