ಭಾರತ ದೇಶವೂ ಎತ್ತರಕ್ಕೆ ಏರುತ್ತಲೇ ಇರುತ್ತದೆ
ಯಾವಾಗ ಬೇಕಾದ್ರೂ ಆಕಾಶ ತಲುಪಬಹುದು
ಅತೀ ದೊಡ್ಡ ಭರವಸೆ ಕೊಟ್ಟ ಪ್ರಧಾನಿ ಮೋದಿ!
ನವದೆಹಲಿ: ಮುಂದಿನ ಲೋಕಸಭಾ ಚುನಾವಣೆ ಗೆಲ್ಲಲು ಈಗಿನಿಂದಲೇ ಪ್ರಧಾನಿ ನರೇಂದ್ರ ತಯಾರಿ ನಡೆಸಿಕೊಂಡಿದ್ದಾರೆ. ಈ ಮುನ್ನವೇ ದೇಶದ ಜನತೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅತೀದೊಡ್ಡ ಭರವಸೆಯೊಂದು ನೀಡಿದ್ದಾರೆ.
ಇಂದು ದೆಹಲಿಯಲ್ಲಿ ಪರಿಷ್ಕೃತ ಪ್ರಗತಿ ಮೈದಾನವನ್ನು ಉದ್ಘಾಟಿಸಿ ಮಾತಾಡಿದ ನರೇಂದ್ರ ಮೋದಿ, ನನ್ನ 3ನೇ ಅವಧಿಯಲ್ಲಿ ಭಾರತದ ಆರ್ಥಿಕತೆ ವಿಶ್ವದ 3ನೇ ಸ್ಥಾನದಲ್ಲಿರಲಿದೆ. ಭಾರತ ವಿಶ್ವದ ಮೊದಲ ಮೂರು ಸ್ಥಾನಗಳಲ್ಲಿ ಒಂದಾಗಿರಲಿದೆ ಎಂದರು.
ನಾವು ಮೊದಲ ಬಾರಿಗೆ ಅಧಿಕಾರಕ್ಕೆ ಬಂದಾಗ ಭಾರತ ಆರ್ಥಿಕತೆಯಲ್ಲಿ 10ನೇ ಸ್ಥಾನದಲ್ಲಿತ್ತು. ಎರಡನೇ ಅವಧಿಯಲ್ಲಿ ವಿಶ್ವದ 5ನೇ ಆರ್ಥಿಕತೆಯ ದೇಶವಾಗಿದೆ. ನನ್ನ ಪ್ರಕಾರ ಮೂರನೇ ಅವಧಿಗೆ ಭಾರತದ ಆರ್ಥಿಕತೆ ವಿಶ್ವದ ಮೂರು ಅಗ್ರಸ್ಥಾನಗಳಲ್ಲಿ ಒಂದಾಗಲಿದೆ. ಇದು ನಾನು ಕೊಡುತ್ತಿರೋ ಭರವಸೆ ಎಂದರು ಮೋದಿ.
ಭಾರತ ಯಾವಾಗ ಬೇಕಾದರೂ ಆಕಾಶ ತಲುಪಲಿದೆ ಎಂದ ಮೋದಿ
ನಾವು ಎತ್ತರಕ್ಕೆ ಏರುತ್ತಲೇ ಇರುತ್ತೇವೆ. ಯಾವಾಗ ಬೇಕಾದರೂ ಆಕಾಶಕ್ಕೆ ತಲುಪಬಹುದು. ಭಾರತದ ಎಲ್ಲಾ ದಿಕ್ಕುಗಳಲ್ಲೂ ಬದಲಾವಣೆ ಆಗುತ್ತಿದೆ. ಜಗತ್ತಿನ ಅತೀ ಎತ್ತರದ ರೈಲು ಸೇತುವೆ, ಅತಿ ಉದ್ದದ ಸುರಂಗ, ಅತ್ಯಂತ ದೊಡ್ಡ ಸ್ಟೇಡಿಯಂ, ಬೃಹತ್ ಮೋಟಾರು ರಸ್ತೆ, ಬಹಳ ಎತ್ತರದ ಪ್ರತಿಮೆ ನಮ್ಮಲ್ಲೇ ಇದೆ. ಆರ್ಥಿಕತೆಯಲ್ಲೂ ಭಾರತ ಮುಂದೆ ಮೊದಲ ಮೂರು ಸ್ಥಾನಗಳಲ್ಲಿ ಇರಲಿದೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ