ಇಂದು ಉಕ್ರೇನ್ಗೆ ಪ್ರಯಾಣ ಬೆಳೆಸಲಿರುವ ಪ್ರಧಾನಿ ನರೇಂದ್ರ ಮೋದಿ
ಯುದ್ಧಭೂಮಿಯಲ್ಲಿ ಯುದ್ಧ ಕೊನೆಗೊಳಿಸುವ ಮಾತು ನಡೆಯಲಿವೆಯಾ?
ಉಕ್ರೇನ್-ಭಾರತ ಈ ಭೇಟಿ ಜಾಗತಿಕವಾಗಿ ಎಷ್ಟು ಪ್ರಾಮುಖ್ಯತೆ ಪಡೆದಿದೆ
ಕ್ಯಿವ್: ಪ್ರಧಾನಿ ನರೇಂದ್ರ ಮೋದಿ ಸದ್ಯ ಎರಡು ಪ್ರಮುಖ ರಾಷ್ಟ್ರಳಿಗೆ ಭೇಟಿ ನೀಡುವ ಮೂಲಕ ಅಂತಾರಾಷ್ಟ್ರೀಯವಾಗಿ ಭಾರತದ ಬೆಸುಗೆಯನ್ನು ಮತ್ತಷ್ಟು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಪ್ರಮುಖ ಹೆಜ್ಜೆಯಿಟ್ಟಿದ್ದಾರೆ. 45 ವರ್ಷಗಳ ಬಳಿಕ ಭಾರತ ಪ್ರಧಾನಿ ಮೊದಲ ಬಾರಿ ಪೊಲೆಂಡ್ಗೆ ಭೇಟಿ ನೀಡಿದ ಇತಿಹಾಸವನ್ನು ಬರೆದ ಮೋದಿ, ಇಂದು ಪೊಲೆಂಡ್ನಿಂದ ಉಕ್ರೇನ್ಗೆ ಹೊರಟಿದ್ದಾರೆ. ಪುಟಿನ್ ಭೇಟಿ ಬೆನ್ನಲ್ಲೆ ಝಲನಸ್ಕಿ ಭೇಟಿಯಾಗಲಿದ್ದಾರೆ.
ಯುರೋಪ್ ಅಂಗಳದಲ್ಲಿ ಈಗ ಯುದ್ಧ ಕಾಲ, ಉಕ್ರೇನ್ ರಷ್ಯಾ ನಡವೆ ಸುಮಾರು ಎರಡು ವರ್ಷಗಳಿಂದ ದೊಡ್ಡ ಪ್ರಮಾಣದಲ್ಲಿ ಯುದ್ಧ ನಡೆಯುತ್ತಿದೆ. ಉಕ್ರೇನ್ ಹೆಚ್ಚು ಕಡಿಮೆ ಮುರಿದ ಮಂಟಪದಂತಾಗಿದೆ. ಪೊಲೆಂಡ್ ವೇದಿಕೆಯಲ್ಲಿ ಮಾತನಾಡಿದ ಮೋದಿ, ಪ್ರತಿ ಸಮಸ್ಯೆಗೂ ರಣಭೂಮಿಯೇ ಉತ್ತರವಲ್ಲ ಎಂದು ಪರೋಕ್ಷವಾಗಿ ಉಕ್ರೇನ್ ಹಾಗೂ ರಷ್ಯಾದ ಯುದ್ಧದ ಬಗ್ಗೆ ಮಾತನಾಡಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ರಷ್ಯಾಗೆ ತೆರಳಿದ್ದ ಮೋದಿ ಅಲ್ಲಿನ ಅಧ್ಯಕ್ಷ ವ್ಲಾಡಮೀರ್ ಪುಟಿನ್ರನ್ನ ಭೇಟಿಯಾಗಿ ಬಂದಿದ್ರು. ಈಗ ರಷ್ಯಾದ ಬದ್ಧ ವೈರಿ ಉಕ್ರೇನ್ಗೆ ಭೇಟಿ ನೀಡಲು ಮೋದಿ ಹೊರಟಿದ್ದಾರೆ.
ಇದನ್ನೂ ಓದಿ: ಮೋದಿ ಸ್ವಾಗತಕ್ಕೆ ಕಾದಿದೆ ಸರ್ಪಗಾವಲಿನ ರೈಲು: ಉಕ್ರೇನ್ನಿಂದ ಯುದ್ಧ ಭೂಮಿಗೆ 20 ಗಂಟೆಗಳ ನಮೋ ಪ್ರಯಾಣ
ಪ್ರಧಾನಿ ನರೇಂದ್ರ ಮೋದಿ ಉಕ್ರೇನ್ ಭೇಟಿ ಅನೇಕ ಸಂದೇಶಗಳನ್ನು ಜಗತ್ತಿಗೆ ಕೊಡುತ್ತಿದೆ. ಭಾರತ ರಷ್ಯಾದೊಂದಿಗೆ ಇರುವ ಬಲಿಷ್ಠ ಸಂಬಂಧವನ್ನು ಬಿಟ್ಟುಕೊಡುವುದಿಲ್ಲ ಅದೇ ರೀತಿ ಪಶ್ಚಿಮ ರಾಷ್ಟ್ರಗಳ ಜೊತೆಗೂ ನಮ್ಮ ವ್ಯವಹಾರಗಳು ನಿಲ್ಲುವುದಿಲ್ಲ ಎಂಬ ಸಂದೇಶ ಈ ಮೂಲಕ ರವಾನೆಯಾಗಿಲಿದೆ. ಅಮೆರಿಕಾರದ ಥಿಂಕ್ ಟ್ಯಾಂಕರ್ಗಳು ಮೋದಿಯ ಈ ಭೇಟಿಯನ್ನು ಬೇರೆಯದ್ದೇ ರೀತಿ ವರ್ಣಿಸುತ್ತಿವೆ.
ಇದನ್ನೂ ಓದಿ: ಸಮುದ್ರದಲ್ಲಿ ಮುಳುಗಿದ ಐಷಾರಾಮಿ ಹಡಗು; ಬ್ರಿಟನ್ ಬಿಲ್ಗೇಟ್ಸ್ ಮೈಕ್ ಲಿಂಚ್ ನಾಪತ್ತೆ!
ಭಾರತ ಪ್ರಧಾನಿಯ ಉಕ್ರೇನ್ ಭೇಟಿ, ಉಭಯ ದೇಶಗಳ ನಡುವಿನ ಸ್ನೇಹವನ್ನು ಮತ್ತಷ್ಟು ಗಟ್ಟಿಗೊಳಿಸುವುದು ಹಾಗೂ ರಷ್ಯಾ-ಉಕ್ರೇನ್ ನಡುವಿನ ಯುದ್ಧದ ಬಗ್ಗೆ ತನಗಿದ್ದ ಅಭಿಪ್ರಾಯವನ್ನು ಸ್ಪಷ್ಟಪಡಿಸುವುದು. ಈ ಎರಡು ವಿಷಯಗಳು ಉಕ್ರೇನ್ ಮತ್ತು ಭಾರತದ ನಡುವೆ ನಡೆಯಲಿವೆ ಎನ್ನುತ್ತಿದೆ.
ಭಾರತ ಈ ಹಿಂದಿನಿಂದಲೂ ಪ್ರತಿ ಪ್ರದೇಶದ ಗೌರವ, ಸಾರ್ವಭೌಮತೆಯ, ಸಮಗ್ರತೆಯ ಬಗ್ಗೆ ಮಾತನಾಡುತ್ತಲೇ ಬಂದಿದೆ. ಹೀಗಾಗಿ ಭಾರತದ ಇಂತಹ ರಾಜತಾಂತ್ರಿಕ ಭೇಟಿಗಳು ಒಂದು ಯುದ್ಧವನ್ನು ಕೊನೆಗೊಳಿಸುವಂತ ಮಾತುಕತೆಯನ್ನಾಡಲು ಸಹಾಯಕವಾಗುತ್ತವೆ ಎಂದು ಪಾಶ್ಚಾತ್ಯ ಮಾಧ್ಯಮಗಳು ಉಲ್ಲೇಖಿಸಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ