newsfirstkannada.com

‘ಕಾಂಗ್ರೆಸ್ ದೊಡ್ಡ, ದೊಡ್ಡ ಘೋಷಣೆ ಈಗ ಏನಾಗ್ತ್ತಿದೆ’- ಡಿಕೆ ಶಿವಕುಮಾರ್‌ ಹೇಳಿಕೆಗೆ ಟಕ್ಕರ್ ಕೊಟ್ಟ ಪ್ರಧಾನಿ ಮೋದಿ

Share :

Published August 1, 2023 at 6:13pm

Update August 1, 2023 at 6:21pm

    2023ರ ಬಾಲಗಂಗಾಧರ ತಿಲಕ್ ಪ್ರಶಸ್ತಿ ಸ್ವೀಕರಿಸಿದ ಮೋದಿ

    ದೊಡ್ಡ, ದೊಡ್ಡ ಘೋಷಣೆ ಮಾಡಿದ ಮೇಲೆ ಏನಾಗುತ್ತಿದೆ?

    ಅಭಿವೃದ್ಧಿಗೆ ನೀತಿ, ನಿಯತ್ತು, ನಿಷ್ಠೆ ಮುಖ್ಯ ಎಂದ ಪ್ರಧಾನಿ

ಪುಣೆ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು 2023ರ ಲೋಕಮಾನ್ಯ ಬಾಲಗಂಗಾಧರ ತಿಲಕ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಪುಣೆಯಲ್ಲಿ ಅದ್ಧೂರಿ ಲೋಕಮಾನ್ಯ ತಿಲಕ್ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೀತು. ಮೋದಿ ಅವರ ನಾಯಕತ್ವಕ್ಕಾಗಿ ಲೋಕಮಾನ್ಯ ತಿಲಕ್ ರಾಷ್ಟ್ರೀಯ ಪ್ರಶಸ್ತಿ ನೀಡಿ ಗೌರವಿಸಲಾಗಿದೆ. ಈ ಕಾರ್ಯಕ್ರಮದ ಬಳಿಕ ಪುಣೆಯಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ, ರಾಜ್ಯ ಸರ್ಕಾರದ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ. ತಮ್ಮ ಭಾಷಣದಲ್ಲಿ ಪದೇ ಪದೆ ಕರ್ನಾಟಕವನ್ನು ಪ್ರಸ್ತಾಪಿಸಿದ ಅವರು, ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರಕ್ಕೆ ಟಕ್ಕರ್ ಕೊಟ್ಟಿದ್ದಾರೆ.

ಇದನ್ನೂ ಓದಿ: ನಾಳೆ ಹೈಕಮಾಂಡ್​​ ಜೊತೆ ರಾಜ್ಯ ಕಾಂಗ್ರೆಸ್ ನಾಯಕರ ಸಭೆ; ಸಚಿವರ ವಿರುದ್ಧ ಶಾಸಕರ ದೂರಿನ ಬಗ್ಗೆ ಚರ್ಚೆ

ಒಂದೆಡೆ ನಾವು ಪುಣೆಯಲ್ಲಿ ಅಭಿವೃದ್ಧಿಯನ್ನು ನೋಡುತ್ತಿದ್ದೇವೆ. ಮತ್ತೊಂದೆಡೆ ಬೆಂಗಳೂರಲ್ಲಿ ಏನಾಗುತ್ತಿದೆ ಎಂದು ನೋಡುತ್ತಿದ್ದೇವೆ. ಬೆಂಗಳೂರು ದೇಶದ ಪ್ರಮುಖ ಐಟಿ ಹಬ್‌. ಸಿಲಿಕಾನ್ ಸಿಟಿಯಲ್ಲಿ ವೇಗದ ಅಭಿವೃದ್ಧಿ ಆಗಬೇಕು. ಆದರೆ, ಅಲ್ಲಿ ರಚನೆಯಾದ ನೂತನ ಸರ್ಕಾರ, ದೊಡ್ಡ, ದೊಡ್ಡ ಘೋಷಣೆ ಮಾಡಿ, ಈಗ ಕಡಿಮೆ ಅವಧಿಯಲ್ಲಿ ಏನಾಗುತ್ತಿದೆ ಎಂಬುದಕ್ಕೆ ಇಡೀ ದೇಶವೇ ಸಾಕ್ಷಿಯಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಇನ್ನು, ಡಿಸಿಎಂ ಡಿ.ಕೆ ಶಿವಕುಮಾರ್ ಅವರ ಹೇಳಿಕೆಯನ್ನು ಪರೋಕ್ಷವಾಗಿ ಪ್ರಸ್ತಾಪಿಸಿದ ಪ್ರಧಾನಿ ಮೋದಿ ಸಖತ್ ಟಾಂಗ್ ಕೊಟ್ಟರು. ಕರ್ನಾಟಕ ಸರ್ಕಾರವೇ ಅಭಿವೃದ್ಧಿಗೆ ತಮ್ಮ ಬಳಿ ಹಣ ಇಲ್ಲ ಎಂದಿದೆ. ಇದೇ ರೀತಿಯ ಪರಿಸ್ಥಿತಿ ರಾಜಸ್ಥಾನದಲ್ಲೂ ಇದೆ. ರಾಜ್ಯ ಸರ್ಕಾರದ ಸಾಲ ಹೆಚ್ಚಾಗುತ್ತಿದೆ. ಯಾವುದೇ ಅಭಿವೃದ್ಧಿ ಕಾರ್ಯಗಳೂ ಆಗುತ್ತಿಲ್ಲ. ಕರ್ನಾಟಕದಲ್ಲಿ ರಚನೆಯಾದ ರಾಜ್ಯ ಸರ್ಕಾರದ ದುಷ್ಪರಿಣಾಮ ಏನು ಅನ್ನೋದನ್ನ ಇಡೀ ದೇಶವೇ ನೋಡುತ್ತಿದೆ. ಒಂದು ರಾಜಕೀಯ ಪಕ್ಷ ತನ್ನ ಸ್ವಾರ್ಥಕ್ಕಾಗಿ ಇಡೀ ಸರ್ಕಾರದ ಖಜಾನೆ ಖಾಲಿ ಮಾಡುತ್ತಿದೆ. ಇದರಿಂದ ಜನರ ಭವಿಷ್ಯ ಅಪಾಯದಲ್ಲಿರುತ್ತೆ. ಕರ್ನಾಟಕ ಸರ್ಕಾರ ಖುದ್ದಾಗಿ ತನ್ನ ಬಳಿ ಬೆಂಗಳೂರಿನ ಅಭಿವೃದ್ಧಿಗೆ ಹಣ ಇಲ್ಲ ಎಂದಿದೆ. ಇದು ಚಿಂತಾಜನಕ ಎಂದು ಪ್ರಧಾನಿ ಮೋದಿ ಹೇಳಿದರು. ಅಭಿವೃದ್ಧಿಗೆ ನೀತಿ, ನಿಯತ್ತು, ನಿಷ್ಠೆಯು ಬಹಳ ಮುಖ್ಯ. ನೀತಿ, ನಿಯತ್ತು, ನಿಷ್ಠೆಯೇ ಅಭಿವೃದ್ಧಿ ಆಗುತ್ತೋ ಇಲ್ಲವೋ ಅನ್ನೋದನ್ನು ನಿರ್ಧರಿಸುತ್ತೆ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಕಾಂಗ್ರೆಸ್ ದೊಡ್ಡ, ದೊಡ್ಡ ಘೋಷಣೆ ಈಗ ಏನಾಗ್ತ್ತಿದೆ’- ಡಿಕೆ ಶಿವಕುಮಾರ್‌ ಹೇಳಿಕೆಗೆ ಟಕ್ಕರ್ ಕೊಟ್ಟ ಪ್ರಧಾನಿ ಮೋದಿ

https://newsfirstlive.com/wp-content/uploads/2023/08/PM-Narendra-Modi.jpg

Load More