newsfirstkannada.com

ಬಾಲಕ ಬುದ್ಧಿ.. ರಾಹುಲ್ ಗಾಂಧಿ ಹೇಳಿಕೆಗೆ ನರೇಂದ್ರ ಮೋದಿ ಕೌಂಟರ್‌ ಅಟ್ಯಾಕ್‌; ಏನಂದ್ರು?

Share :

Published July 2, 2024 at 6:37pm

Update July 2, 2024 at 6:39pm

    ಬಾಲಕ ಬುದ್ಧಿ ಎಂದು ರಾಹುಲ್ ಗಾಂಧಿ ವಿರುದ್ಧ ಪರೋಕ್ಷ ಕಿಡಿ

    ಪ್ರಜಾಪ್ರಭುತ್ವದಲ್ಲಿ ಜನ ನಮ್ಮನ್ನು ಗೆಲ್ಲಿಸಿದ್ದಾರೆ- ನರೇಂದ್ರ ಮೋದಿ

    10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ

ಶಿವನ ಫೋಟೋ ತೋರಿಸಿ ಹಿಂದೂ ಎಂದು ಹೇಳಿಕೊಳ್ಳುವವರೇ ಹಿಂಸೆ ಬಗ್ಗೆ ಮಾತಾಡ್ತಾರೆ ಎಂದು ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ರಾಹುಲ್ ಗಾಂಧಿ ತೀವ್ರ ವಾಗ್ದಾಳಿ ನಡೆಸಿದ್ದರು. ವಿಪಕ್ಷ ನಾಯಕನ ಈ ವಾಕ್ಸಮರಕ್ಕೆ ಪ್ರಧಾನಿ ನರೇಂದ್ರ ಮೋದಿ ಕೌಂಟರ್ ಅಟ್ಯಾಕ್ ಮಾಡಿದ್ದಾರೆ.

ಲೋಕಸಭೆಯಲ್ಲಿ ಇಂದು ಪ್ರಧಾನಿ ಮೋದಿ ಅವರು ಸುದೀರ್ಘ ಭಾಷಣ ಮಾಡಿದ್ದಾರೆ. ರಾಹುಲ್ ಗಾಂಧಿ ಅವರ ಹೆಸರು ಹೇಳದ ಮೋದಿ ಅವರು ಬಾಲಕ ಬುದ್ಧಿ ಎನ್ನುತ್ತಾ ಪರೋಕ್ಷವಾಗಿ ಒಂದೊಂದು ಹೇಳಿಕೆಗೆ ತಿರುಗೇಟು ಕೊಟ್ಟರು. ಪ್ರಜಾಪ್ರಭುತ್ವದಲ್ಲಿ ಜನ ನಮ್ಮನ್ನು ಗೆಲ್ಲಿಸಿದ್ದಾರೆ. ಜನ ಮತ್ತೊಮ್ಮೆ ಸೇವೆ ಮಾಡಲು ಅವಕಾಶ ನೀಡಿದ್ದಾರೆ. ದೇಶದ ಜನತೆ ನಮ್ಮ 10 ವರ್ಷಗಳ ಆಡಳಿತ ಮೆಚ್ಚಿದ್ದಾರೆ ಎಂದು ಸಮರ್ಥಿಸಿಕೊಂಡಿದ್ದಾರೆ.

ಇದನ್ನೂ ಓದಿ: ‘ಶಿವನ ಫೋಟೋ ತೋರಿಸಿ ಹಿಂದೂಗಳಿಗೆ ಅವಮಾನ ಮಾಡಿದ ರಾಹುಲ್​ ಗಾಂಧಿ’- ಬಿಜೆಪಿಯಿಂದ ಟ್ರೋಲ್​​ 

ಪ್ರಮುಖವಾಗಿ ಬಡವರ ಅಭಿವೃದ್ಧಿಗೆ ಸಮರ್ಪಣೆಯಿಂದ ನಾವು ಕೆಲಸ ಮಾಡಿದ್ದೇವೆ. ಕಳೆದ 10 ವರ್ಷಗಳಲ್ಲಿ 25 ಕೋಟಿ ಜನ ಬಡತನದಿಂದ ಮುಕ್ತರಾಗಿದ್ದಾರೆ. ಸಾಮಾನ್ಯ ಜನ ಭ್ರಷ್ಟಾಚಾರದಿಂದ ಪೀಡಿತರಾಗಿದ್ದಾರೆ. ಜಾಗತಿಕವಾಗಿ ಭಾರತದ ಸ್ಥಾನಮಾನ ಬದಲಾಗಿದೆ. ವಿಶ್ವ ಮಟ್ಟದಲ್ಲಿ ಭಾರತದ ಗೌರವ ಹೆಚ್ಚಾಗಿದೆ. ಸಬ್​ ಕಾ ಸಾತ್, ಸಬ್​ ಕಾ ವಿಕಾಸ್ ನಮ್ಮ ಮಂತ್ರ ಎಂದು ಮೋದಿ ಹೇಳಿದ್ದಾರೆ.

ದೇಶದ 140 ಕೋಟಿ ಜನರ ಸೇವೆಗೆ ಅವಕಾಶ ಸಿಕ್ಕಿದೆ. ಭಾರತದ ಅಭಿವೃದ್ಧಿಗಾಗಿ ಜನರ ಆಶೀರ್ವಾದ ಕೇಳಿದ್ದೆವು. ನಮ್ಮ ನೀತಿ, ನಿಷ್ಠೆಗೆ ದೇಶದ ಜನತೆ ವಿಶ್ವಾಸವಿಟ್ಟಿದ್ದಾರೆ. ದೇಶದ ಜನತೆ ಅತ್ಯಂತ ವಿವೇಕದಿಂದ ನಿರ್ಣಯಿಸಿದ್ದಾರೆ. ಸತತವಾಗಿ ಸುಳ್ಳು ಹಬ್ಬಿಸಿದ್ರೂ ಅವರು ಸೋತಿದ್ದಾರೆ. ಭ್ರಷ್ಟಾಚಾರದ ಬಗ್ಗೆ ಶೂನ್ಯ ಸಹಿಷ್ಣುತೆ ಹೊಂದಿದ್ದೇವೆ. 2014ಕ್ಕೂ ಮುನ್ನ ಜನತೆ ನಿರಾಶೆಯಲ್ಲಿ ಮುಳುಗಿದ್ದರು. ದೇಶದ ಜನತೆ ಆತ್ಮವಿಶ್ವಾಸವನ್ನೇ ಕಳೆದುಕೊಂಡಿದ್ದರು. ನಾವು ದೇಶದ ಜನತೆಯ ಸಂಕಲ್ಪವನ್ನು ಈಡೇರಿಸುತ್ತೇವೆ ಎಂದರು.

ಇದನ್ನೂ ಓದಿ: ‘ಹಿಂದೂ ಎಂದು ಹೇಳಿಕೊಳ್ಳುವವರೇ ಹಿಂಸೆ ಬಗ್ಗೆ ಮಾತಾಡ್ತಾರೆ’- ಬಿಜೆಪಿ ವಿರುದ್ಧ ರಾಹುಲ್​​ ವಾಗ್ದಾಳಿ!

2014ಕ್ಕೂ ಮುನ್ನ ಹಗರಣಗಳದ್ದೇ ಸುದ್ದಿಯಾಗುತ್ತಿತ್ತು. 1 ರೂ. ಬಿಡುಗಡೆಯಾದರೆ 15 ಪೈಸೆ ಜನರಿಗೆ ತಲುಪುತ್ತಿತ್ತು. 1 ರೂ.ಯಲ್ಲಿ 85 ಪೈಸೆ ಲೂಟಿಯಾಗುತ್ತಿತ್ತು. ಬಡವರು ಮನೆಗಾಗಿ ಸಾವಿರಾರು ರೂ. ಲಂಚ ನೀಡಬೇಕಿತ್ತು. ಕಮಿಷನ್ ನೀಡದಿದ್ದರೆ ಗ್ಯಾಸ್ ಕನೆಕ್ಷನ್ ಸಿಗುತ್ತಿರಲಿಲ್ಲ. ಗ್ಯಾಸ್ ಸಿಲಿಂಡರ್​ಗಾಗಿ ಜನ ಅಲೆಯಬೇಕಾಗಿತ್ತು. ಲಂಚ ಕೊಡದಿದ್ದರೆ ಪಡಿತರ ಸಹ ಸಿಗುತ್ತಿರಲಿಲ್ಲ. 10 ವರ್ಷಗಳಲ್ಲಿ ಜನ ನಿರಾಶೆಯಿಂದ ಹೊರ ಬಂದಿದ್ದಾರೆ. ದೇಶದ ಜನರಲ್ಲಿ ವಿಶ್ವಾಸ ಮೂಡಿಸುವ ಕೆಲಸ ಮಾಡಿದ್ದೇವೆ. ತೀವ್ರಗತಿಯಲ್ಲಿ 5ಜಿ ಸೇವೆಯನ್ನು ಒದಗಿಸಿದ್ದೇವೆ. 2014ಕ್ಕೂ ಮುನ್ನ ದೇಶದಲ್ಲಿ ಉಗ್ರರ ಚಟುವಟಿಕೆ ಇತ್ತು. ದೇಶದ ಮೂಲೆ ಮೂಲೆಯನ್ನೂ ಗುರಿಯಾಗಿಸಿ ದಾಳಿ ಮಾಡಿದ್ದಾರೆ.

2014ರ ನಂತರ ದೇಶದ ಪರಿಸ್ಥಿತಿ ಬದಲಾಯಿತು. 2014ರ ಬಳಿಕ ಶತ್ರುಗಳ ಮನೆಗೇ ಹೊಕ್ಕಿ ಹೊಡೆಯುತ್ತಿದೆ. ತನ್ನ ಸುರಕ್ಷತೆಗಾಗಿ ಭಾರತ ದೇಶ ಎಲ್ಲದಕ್ಕೂ ಸಿದ್ಧವಾಗಿದೆ. ಕೆಲವರು ಸಂವಿಧಾನದ ಪ್ರತಿ ಹಿಡಿದು ಮಾತಾಡ್ತಾರೆ. ಆದರೆ ಜಮ್ಮು-ಕಾಶ್ಮೀರದಲ್ಲಿ ಸಂವಿಧಾನ ಜಾರಿಗೊಳಿಸಿರಲಿಲ್ಲ. ಜಮ್ಮು-ಕಾಶ್ಮೀರದಲ್ಲಿ ಕಲ್ಲು ತೂರಾಟ ನಡೆಯುತ್ತಿತ್ತು. 370ನೇ ವಿಧಿ ಜಮ್ಮು-ಕಾಶ್ಮೀರದ ಅಧಿಕಾರ ಕಿತ್ತುಕೊಂಡಿತ್ತು. 370 ವಿಧಿಯಿಂದಾಗಿ ಜಮ್ಮು-ಕಾಶ್ಮೀರಕ್ಕೆ ನಷ್ಟವಾಗಿತ್ತು. ಇಂದು ಭಾರತದ ಗುರಿ ಬಹು ದೊಡ್ಡಮಟ್ಟದಲ್ಲಿದೆ. ಭಾರತ 10ನೇ ಸ್ಥಾನದಿಂದ 5ನೇ ಸ್ಥಾನಕ್ಕೆ ಬಂದಿದ್ದೇವೆ. ಭಾರತವನ್ನು 3ನೇ ಆರ್ಥಿಕತೆಯಾಗಿಸುವುದು ಗುರಿ. 3ನೇ ಅವಧಿಯಲ್ಲಿ 3 ಪಟ್ಟು ವೇಗದಿಂದ ಕೆಲಸ ಮಾಡುತ್ತೇವೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಬಾಲಕ ಬುದ್ಧಿ.. ರಾಹುಲ್ ಗಾಂಧಿ ಹೇಳಿಕೆಗೆ ನರೇಂದ್ರ ಮೋದಿ ಕೌಂಟರ್‌ ಅಟ್ಯಾಕ್‌; ಏನಂದ್ರು?

https://newsfirstlive.com/wp-content/uploads/2024/07/Narendra-Modi-Speech.jpg

Load More