newsfirstkannada.com

ವಿಶ್ವಕಪ್ ಗೆದ್ದವರಿಗೆ ಟ್ರೋಫಿ ಕೊಡೋದು ಪ್ರಧಾನಿ ನರೇಂದ್ರ ಮೋದಿ..?

Share :

17-11-2023

    ಆರಂಭದಿಂದ ಅಬ್ಬರಿಸುತ್ತಿರುವ ಟೀಂ ಇಂಡಿಯಾದ ಆಟಗಾರರು

    ಒಂದು ಸೋಲಿಲ್ಲದೇ ಫೈನಲ್​ಗೆ ಎಂಟ್ರಿ ಕೊಟ್ಟ ರೋಹಿತ್ ಪಡೆ

    ಕಪ್​ ಗೆಲುವು ವಿಶ್ವಾಸದಲ್ಲಿ ಆಸಿಸ್​ನ ಕ್ಯಾಪ್ಟನ್​ ಪ್ಯಾಟ್ ಕಮಿನ್ಸ್

ಗುಜರಾತ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯುವ ವರ್ಲ್ಡ್​​ಕಪ್​ ಫೈನಲ್ ಪಂದ್ಯ ಬಗ್ಗೆ ವಿಶ್ವದಲ್ಲಿ ಸಾಕಷ್ಟು ಚರ್ಚೆಯಾಗುತ್ತಿದೆ. ಕಪ್ ಗೆಲ್ಲುವ ಫೆವರಿಟ್ ಪಂದ್ಯ ಭಾರತವಾದರೂ ಈಗಾಗಲೇ ಹಲವು ಬಾರಿ ವಿಶ್ವಕಪ್​ ಗೆದ್ದು ದಾಖಲೆ ಬರೆದಿರುವ ಆಸಿಸ್​ ಮತ್ತೆ ಕಪ್​ಗೆ ಮುತ್ತಿಕ್ಕುವ ತವಕದಲ್ಲಿದೆ.

ಈಗಾಗಲೇ 2 ತಂಡಗಳು ನೆಟ್ಸ್​ನಲ್ಲಿ ಭರ್ಜರಿ ಅಭ್ಯಾಸ ನಡೆಸಿದ್ದು ರಣಕಣದಲ್ಲಿ ಗೆಲ್ಲಲ್ಲು ಬೇಕಾದ ತಂತ್ರಗಾರಿಕೆಗಳನ್ನ ರೂಪಿಸುತ್ತಿವೆ. ಎಲ್ಲದರ ನಡುವೆ ಫೈನಲ್ ಮ್ಯಾಚ್ ಗೆಲ್ಲುವ ತಂಡಕ್ಕೆ ವಿಶ್ವಕಪ್​ ಅನ್ನು ಪ್ರಧಾನಿ ನರೇಂದ್ರ ಮೋದಿಯವರು ಹಸ್ತಾಂತರ ಮಾಡುತ್ತಾರೆ ಎಂದು ಹೇಳಲಾಗುತ್ತಿದೆ.

ಭಾರತ ಮತ್ತು ಆಸ್ಟ್ರೇಲಿಯಾ ನಡುವಿನ​ ವರ್ಲ್ಡ್​​ಕಪ್​ ಫೈನಲ್​ ಕದನ ಸದ್ಯ ವಿಶ್ವದ ಕೇಂದ್ರ ಬಿಂದುವಾಗಿದೆ. ಪ್ರತಿಷ್ಠೆಯ ಟೂರ್ನಿಯಲ್ಲಿ ಲೀಗ್​, ಸೆಮಿಫೈನಲ್​ ಪಂದ್ಯಗಳೆಲ್ಲ ಮುಗಿದಿದ್ದು ಭಾನುವಾರ ಅಂದರೆ ನವೆಂಬರ್ 19 ರಂದು ಕ್ರಿಕೆಟ್​ ವರ್ಲ್ಡ್​ಕಪ್​ನ ಫೈನಲ್​ ಪಂದ್ಯ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡಕ್ಕೆ ಪ್ರಧಾನಿ ನರೇಂದ್ರ ಮೋದಿಯವರೇ ಸ್ವತಹ ವರ್ಲ್ಡ್​​ಕಪ್​ ಅನ್ನು ಪ್ರದಾನ ಮಾಡುತ್ತಾರೆ ಎನ್ನಲಾಗುತ್ತಿದೆ. ಈ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಪೋಸ್ಟ್ ಒಂದು ವೈರಲ್ ಆಗಿದೆ.

ಕ್ಯಾಪ್ಟನ್ ರೋಹಿತ್ ಶರ್ಮಾ

ಫೈನಲ್​ ಪಂದ್ಯಕ್ಕಾಗಿ ಈಗಾಗಲೇ ಸ್ಟೇಡಿಯಂ ಸಿದ್ಧವಾಗಿದ್ದು ಭಾರತ-ಆಸಿಸ್​ ನಡುವಿನ ಪಂದ್ಯ ವೀಕ್ಷಕರಿಗೆ ರಸದೌತಣ ನೀಡಲಿದೆ. ಕ್ಯಾಪ್ಟನ್​ ರೋಹಿತ್ ಶರ್ಮಾ ನೇತೃತ್ವದ ತಂಡ ತವರಿನಲ್ಲಿ ನಡೆಯುವ ಮ್ಯಾಚ್ ಅನ್ನು ಗೆಲ್ಲುವ ನಿರೀಕ್ಷೆಯಲ್ಲಿದೆ. ಅದರಂತೆ ಪ್ಯಾಟ್ ಕಮಿನ್ಸ್ ಪಡೆ ಸೌತ್ ಆಫ್ರಿಕಾವನ್ನು ಮನೆಗೆ ಕಳುಹಿಸಿ ಮತ್ತೆ ಫೈನಲ್​​ಗೆ ಎಂಟ್ರಿ ಕೊಟಿದ್ದು, ಕಪ್ ಗೆದ್ದುಕೊಂಡು ಹೋಗುವ ಭಾವನೆಯಲ್ಲಿದೆ. ಆದರೆ ಭಾನುವಾರ ನಡೆಯುವ ಮ್ಯಾಚ್ ಹಲವು ನೆನಪುಗಳಿಗೆ ಸಾಕ್ಷಿಯಾಗಲಿದ್ದು ಎಲ್ಲರಿಗೂ ಅವಿಸ್ಮರಣೀಯವಾಗಿದೆ. ಈ ಎಲ್ಲದಕ್ಕೂ ಉತ್ತರ ನಾಡಿದ್ದು ಸಿಗಲಿದೆ.

ರೋಹಿತ್ ಸಾರಥ್ಯದ ತಂಡ ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ ಪಂದ್ಯ ಗೆದ್ದು ಫೈನಲ್​​ಗೆ ಎಂಟ್ರಿ ಕೊಟ್ಟಿದೆ. ಅದರಂತೆ ಬಲಿಷ್ಠ ದಕ್ಷಿಣ ಆಫ್ರಿಕಾವನ್ನು ಹೊಡೆದುರುಳಿಸಿ ಆಸ್ಟ್ರೇಲಿಯಾ ತಂಡ ಫೈನಲ್​ಗೆ ಬಂದಿದೆ. ಹೀಗಾಗಿ ಫೈನಲ್ ಪಂದ್ಯ ಯಾವ ತಂಡ ಗೆಲ್ಲುತ್ತದೆ ಎಂದು ಅಭಿಮಾನಿಗಳಲ್ಲಿ ಕುತೂಹಲ ಮತ್ತಷ್ಟು ಹೆಚ್ಚಾಗಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ವಿಶ್ವಕಪ್ ಗೆದ್ದವರಿಗೆ ಟ್ರೋಫಿ ಕೊಡೋದು ಪ್ರಧಾನಿ ನರೇಂದ್ರ ಮೋದಿ..?

https://newsfirstlive.com/wp-content/uploads/2023/11/WORLD_CUP_MODI.jpg

Load More