newsfirstkannada.com

ಎಲ್ಲರಂಥಲ್ಲ ಈ ಜಪಾನ್ ರಾಯಭಾರಿ.. ಅಂದು ಪ್ರಧಾನಿ ಮೋದಿಯಿಂದಲೂ ಸಿಕ್ಕಿದೆ ಭಾರೀ ಮೆಚ್ಚುಗೆ..!

Share :

20-08-2023

    ಜಪಾನ್​ ರಾಯಭಾರಿ ‘ಕಾವಾಲಯ್ಯ’ ​ಸ್ಟೆಪ್​ ಸೂಪರ್​

    ಭಾರತದ ಕಲೆ, ಸಂಸ್ಕೃತಿಗೆ ಮನಸೋತ ರಾಯಭಾರಿ

    ರಜನಿಕಾಂತ್​ರವರ ಬಿಗ್​ ಫ್ಯಾನ್​ ಹಿರೋಶಿ ಸುಜುಕಿ

ರಾಯಭಾರಿಗಳೆಂದರೇ ಅವರಿಗೆ ಅವರದ್ದೇ ಆದ ಶಿಷ್ಟಾಚಾರಗಳಿರುತ್ತವೆ. ಜನರೊಂದಿಗೆ ಹೆಚ್ಚು ಬೆರೆಯದೇ ತಮ್ಮದೇ ಆದ ದಂತಗೋಪುರದಲ್ಲಿ ಇರುತ್ತಾರೆ. ಆದರೇ ಭಾರತದಲ್ಲಿರುವ ಜಪಾನ್ ದೇಶದ ರಾಯಭಾರಿ ಇದಕ್ಕೆ ವಿಭಿನ್ನವಾಗಿ ನಿಲ್ಲುತ್ತಾರೆ. ದೇಶದ ವಿಭಿನ್ನ ಆಹಾರ ಪದ್ದತಿಯನ್ನು ಸವಿಯುವುದರಿಂದ ಹಿಡಿದು ರಜನಿಕಾಂತ್ ನಟನೆಯ ಜೈಲರ್ ಸಿನಿಮಾಗೆ ಡ್ಯಾನ್ಸ್ ಕೂಡ ಮಾಡಿ ಗಮನ ಸೆಳೆದಿದ್ದಾರೆ.

ಭಾರತದ ಕಲೆ, ಸಂಸ್ಕೃತಿಗೆ ಮನಸೋತ ಜಪಾನ್​ ರಾಯಭಾರಿ

ನಮ್ಮ ಭಾರತದ ರಾಜಧಾನಿ ದೆಹಲಿಯಲ್ಲಿ ವಿಶ್ವದ ಪ್ರಮುಖ ದೇಶಗಳ ರಾಯಭಾರಿಗಳಿದ್ದಾರೆ. ಭಾರತದಲ್ಲಿ ತಮ್ಮ ದೇಶಗಳನ್ನು ಪ್ರತಿನಿಧಿಸುತ್ತಾ ಎರಡೂ ದೇಶಗಳ ಬಾಂಧವ್ಯದ ಕೊಂಡಿಯಾಗಿ ಕೆಲಸ ಮಾಡ್ತಾರೆ. ಇಂಥ ರಾಯಭಾರಿಗಳಿಗೆ ತಮ್ಮದೇ ಆದ ಶಿಷ್ಟಾಚಾರಗಳೂ ಇವೆ. ಹೀಗಾಗಿ ರಾಯಭಾರಿಗಳು ಹೆಚ್ಚು ಮುಕ್ತವಾಗಿ ಕಾಣಿಸಿಕೊಳ್ಳಲ್ಲ. ಕೆಲವು ರಾಯಭಾರಿಗಳು ಜನರ ಜೊತೆಗೆ ಸುಲಭವಾಗಿ ಬೆರೆಯುತ್ತಾರೆ. ಅಂಥವರಲ್ಲಿ ದೆಹಲಿಯಲ್ಲಿರುವ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಪ್ರಮುಖರು.

ದೆಹಲಿಯಲ್ಲಿರುವ ಜಪಾನ್ ರಾಯಭಾರಿ ಹಿರೋಶಿ ಸುಜುಕಿ ಅವರಿಗೆ ಭಾರತದ ಕಲೆ, ಸಂಸ್ಕೃತಿ, ಇಲ್ಲಿನ ವೈವಿದ್ಯಮಯ ಆಹಾರ ಪದ್ದತಿ ಬಗ್ಗೆ ಎಲ್ಲಿಲ್ಲದ ಅಭಿರುಚಿಯಿದೆ. ಕಳೆದ ಜೂನ್​ನಲ್ಲಿ ಪತ್ನಿಯ ಜೊತೆ ಮಹಾರಾಷ್ಟ್ರದ ಪುಣೆಗೆ ಭೇಟಿ ನೀಡಿ, ರೆಸ್ಟೋರೆಂಟ್​ನಲ್ಲಿ ತಮಗಿಷ್ಟವಾದ ಭೋಜನ ಸವಿದ್ರು. ಅದರಲ್ಲೂ ಹಿರೋಶಿ ಸುಜುಕಿ ಪತ್ನಿ, ತಮಗೆ ಹಾಟ್ ಸ್ಪೈಸಿ ಕೊಲ್ಲಾಪುರಿ ಫುಡ್ ಬೇಕೆಂದು ತರಿಸಿಕೊಂಡು ರುಚಿ ಸವಿದಿದ್ದಾರೆ. ಇಷ್ಟೇ ಅಲ್ಲ, ಮಹಾರಾಷ್ಟ್ರದ ಪ್ರಸಿದ್ದ ವಡಾ ಪಾವ್, ಸೀಬೆ ಹಣ್ಣು ರುಚಿಯನ್ನು ಸವಿದು, ಪುಣೆಯ ಕಯಾನಿ ಬೇಕರಿಗೂ ಭೇಟಿ ನೀಡಿ ಬೇಕರಿ ಐಟಂಗಳನ್ನು ಖರೀದಿಸಿದ್ದಾರೆ.

ಭಾರತದ ವೈವಿದ್ಯಮ ಆಹಾರ ಪದ್ಧತಿ ಸೇವಿಯುತ್ತ ಎಂಜಾಯ್​ ಮಾಡಿದ ವಿಡಿಯೋವನ್ನು ಜಪಾನ್​ ರಾಯಭಾರಿ ತಮ್ಮ ಟ್ವಿಟರ್​ ಖಾತೆಯಲ್ಲಿ ಹಂಚಿಕೊಂಡಿದ್ದರು. ಇದಕ್ಕೆ ಪ್ರತಿಕ್ರಿಯಿಸಿರುವ ಪ್ರಧಾನಿ ಮೋದಿ, ಸಂಸತ ವ್ಯಕ್ತಪಡಿಸಿದ್ದು, ಇಂಥ ವಿಡಿಯೋಗಳು ಮತ್ತಷ್ಟು ಬರಲಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇನ್ನೂ ಜಪಾನ್ ರಾಯಬಾರಿ ಹಿರೋಶಿ ಸುಜುಕಿಗೆ, ಭಾರತೀಯ ಸಿನಿಮಾಗಳು ಅಂದ್ರೂ ಇಷ್ಟ. ಅದರಲ್ಲೂ ರಜನಿಕಾಂತ್​ ಅವರ ಸ್ಟೈಲ್​ಗೆ ಫಿದಾ ಆಗಿದ್ದಾರೆ. ಇತ್ತೀಚೆಗೆ ರಜನಿಕಾಂತ್​ ಸ್ಟೈಲ್​ನಲ್ಲೇ ಗ್ಲಾಸ್​ ಹಾಕಿಕೊಂಡು ಗಮನ ಸೆಳೆದಿದ್ರು. ಜೈಲರ್​ ಚಿತ್ರದ ಕಾವಾಲಯ್ಯ ಹಾಡಿಗೂ ಸಕತ್​ ​ಸ್ಟೆಪ್​ ಹಾಕಿದ್ದಾರೆ. ಜಪಾನ್​ ರಾಯಭಾರಿಯ ಈ ಹುಕ್​ಸ್ಟೆಪ್​ಗೆ ನೆಟ್ಟಿಗರು ಫಿದಾ ಹಾಗಿದ್ದಾರೆ.

ಹಿರೋಶಿ ಸುಜುಕಿ ಅವರು ಆಗಸ್ಟ್ 15 ರಂದು ದೆಹಲಿಯಲ್ಲಿ ಭಾರತದ 77ನೇ ಸ್ವಾತಂತ್ಯ ದಿನವನ್ನು ಆಚರಿಸಿದ್ದರು. ಈ ವಿಡಿಯೋವನ್ನು ಅವರು ಹಂಚಿಕೊಂಡಿದ್ದಾರೆ. ಒಟ್ಟಾರೆ, ಜಪಾನ್ ರಾಯಭಾರಿ ಹಿರೋಶಿ ಸುಜುಕಿ ತಮ್ಮ ರಾಯಭಾರಿ ಕೆಲಸದ ಅಧಿಕೃತ ಕಾರ್ಯಕ್ರಮಗಳ ಜೊತೆಗೆ ಭಾರತದ ಆಚಾರ-ವಿಚಾರ, ಕಲೆ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು, ಅವುಗಳ ಆಚರಿಸುತ್ತಾ ಆಸ್ವಾದಿಸುತ್ತಿರುವುದು ವಿಶೇಷ..

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಎಲ್ಲರಂಥಲ್ಲ ಈ ಜಪಾನ್ ರಾಯಭಾರಿ.. ಅಂದು ಪ್ರಧಾನಿ ಮೋದಿಯಿಂದಲೂ ಸಿಕ್ಕಿದೆ ಭಾರೀ ಮೆಚ್ಚುಗೆ..!

https://newsfirstlive.com/wp-content/uploads/2023/08/PM_MODI-2.jpg

Load More