Advertisment

ಗೋಧ್ರಾ ದುರಂತದ ಹಿಂದಿನ ಸತ್ಯ ಸಿನಿಮಾ ಮೂಲಕ ಬಹಿರಂಗ.. ಚರ್ಚೆಗೆ ಗ್ರಾಸವಾದ ಮೋದಿ ಕಾಮೆಂಟ್

author-image
Bheemappa
Updated On
ಗೋಧ್ರಾ ದುರಂತದ ಹಿಂದಿನ ಸತ್ಯ ಸಿನಿಮಾ ಮೂಲಕ ಬಹಿರಂಗ.. ಚರ್ಚೆಗೆ ಗ್ರಾಸವಾದ ಮೋದಿ ಕಾಮೆಂಟ್
Advertisment
  • ಈ ಸಿನಿಮಾದ ಬಗ್ಗೆ ಪಾಸಿಟಿವ್-​ ನೆಗೆಟಿವ್​ ವಿಶ್ಲೇಷಣೆ ನಡೆಯುತ್ತಿದೆ
  • ವಿಕ್ರಾಂತ್ ಮಾಸ್ಸಿ ಅಭಿನಯದ ಸಾಬರಮತಿ ರಿಪೋರ್ಟ್‌ ಸಿನಿಮಾ
  • ಬಾಲಿವುಡ್ ಸಿನಿಮಾಗೆ ಆ್ಯಕ್ಷನ್‌ ಕಟ್ ಹೇಳಿರುವ ಧೀರಜ್ ಶರ್ಮಾ

2002ರಲ್ಲಿ ನಡೆದ ಗೋಧ್ರಾ ದುರಂತಕ್ಕೆ ಕಾರಣವಾದ ಘಟನೆಗಳ ಆಧಾರದ ಮೇಲೆ ‘ದಿ ಸಾಬರಮತಿ ರಿಪೋರ್ಟ್ ಸಿನಿಮಾ ರಿಲೀಸ್​ ಆಗಿದೆ. ಚಿತ್ರದ ಬಗ್ಗೆ ಪಾಸಿಟಿವ್​ ನೆಗೆಟಿವ್​ ವಿಶ್ಲೇಷಣೆ ನಡೀತಿದೆ. ಈ ಮಧ್ಯೆ ಚಿತ್ರವನ್ನು ಪ್ರಧಾನಿ ಮೋದಿ ಶ್ಲಾಘಿಸಿ, ಘಟನೆ ಹಿಂದಿನ ಸತ್ಯವನ್ನು ಬಹಿರಂಗಪಡಿಸಿದ್ದಕ್ಕಾಗಿ ಚಿತ್ರತಂಡವನ್ನು ಹೊಗಳಿದ್ದು ಚರ್ಚೆಗೆ ಗ್ರಾಸವಾಗಿದೆ.

Advertisment

ಗೋಧ್ರಾ ರೈಲು ದುರಂತ ಇಂದಿಗೂ ಅದು ಮಾಸದ ಘಟನೆ. 2002ರಲ್ಲಿ ನಡೆದ ಆ ಘಟನೆಯ ಬಳಿಕ ಇಡೀ ಗುಜರಾತ್ ಹೊತ್ತಿ ಉರಿದಿತ್ತು. ಗುಜರಾತ್​ನಲ್ಲಿ ಹತ್ಯಾಕಾಂಡಗಳೇ ನಡೆದೋಗಿದ್ದವು. ಪ್ರಧಾನಿ ಮೋದಿ ಆಗ ತಾನೇ ಗುಜರಾತ್​ ಸಿಎಂ ಆಗಿ ಕೆಲವೇ ದಿನಗಳಾಗಿದ್ದವು. ಈಗ ಭರ್ತಿ 22 ವರ್ಷಗಳ ಬಳಿಕ ಬಾಲಿವುಡ್​ನಲ್ಲಿ ರಿಲೀಸ್​​​ ಆದ ಸಿನಿಮಾವೊಂದು ಸಂಚಲನವನ್ನೇ ಸೃಷ್ಟಿಸಿದೆ.

publive-image

ಸಾಬರಮತಿ ರಿಪೋರ್ಟ್‌ ಚಿತ್ರಕ್ಕೆ ಮೋದಿ ಪ್ರಶಂಸೆ

ಗೋದ್ರಾ ನರಮೇಧ, ಗುಜರಾತ್​​​ ಹತ್ಯಾಕಾಂಡ ಹೆಸರಲ್ಲಿ ಹಲವು ಸಾಕ್ಷ್ಯಚಿತ್ರಗಳು ಬಂದೋಗಿವೆ. ಇದೀಗ ಬಾಲಿವುಡ್​ನಲ್ಲಿ ದಿ ಸಾಬರಮತಿ ರಿಪೋರ್ಟ್​ ಸಿನಿಮಾ ಬಿಡುಗಡೆ ಆಗಿದೆ. ವಿಕ್ರಾಂತ್ ಮಾಸ್ಸಿ ನಟನೆಯ ಈ ಸಿನಿಮಾ ರಿಲೀಸ್​ಗೂ ಮೊದಲೇ ಸಾಕಷ್ಟು ಸದ್ದು ಮಾಡಿತ್ತು. ರಿಲೀಸ್‌ ಆದ ಬೆನ್ನಲ್ಲೇ ಉತ್ತಮ ಪ್ರತಿಕ್ರಿಯೆಗಳೂ ಬರುತ್ತಿದ್ದು, ಪ್ರಧಾನಿ ಮೋದಿ ಕೂಡ ಚಿತ್ರವನ್ನ ಶ್ಲಾಘಿಸಿದ್ದಾರೆ.

‘ಕೊನೆಗೂ ಸತ್ಯ ಹೊರಗೆ ಬರುತ್ತದೆ’

‘ತುಂಬಾ ಚೆನ್ನಾಗಿ ಹೇಳಿದ್ದೀರಿ. ಈ ರೀತಿಯ ಸತ್ಯ ಹೊರಬರುತ್ತಿರುವುದು ತುಂಬಾ ಒಳ್ಳೆಯದು, ಅದೂ ಜನಸಾಮಾನ್ಯರು ನೋಡುವಂತಹ ರೀತಿಯಲ್ಲಿದೆ. ಒಂದು ನಕಲಿ ನಿರೂಪಣೆಯು ಸೀಮಿತ ಅವಧಿವರೆಗೆ ಮಾತ್ರ ಹಾಗೇ ಇರುತ್ತದೆ. ಕೊನೆಯದಾಗಿ, ಸತ್ಯ ಅನ್ನೋದು ಒಂದು ದಿನ ಹೊರಬರುತ್ತದೆ’

- ನರೇಂದ್ರ ಮೋದಿ, ಪ್ರಧಾನಮಂತ್ರಿ

Advertisment

ಇದನ್ನೂ ಓದಿ: ‘ಮಂತ್ರಾಲಯ ರಾಯರ ಮಠದ ಸ್ಥಳ ಕೊಟ್ಟಿದ್ದು ನವಾಬರು’ -ವಕ್ಫ್​ ವಿವಾದದಲ್ಲಿ ಸಿಎಂ ಇಬ್ರಾಹಿಂ ಹೊಸ ಪುರಾಣ

publive-image

2002, ಫೆಬ್ರವರಿ 27ರಂದು ದುರಂತ ಘಟನೆಯೊಂದರ ಕಥೆಯನ್ನಾಧರಿಸಿ ರಚಿಸಿದ ಚಿತ್ರ ಇದಾಗಿದೆ.. ಅಯೋಧ್ಯೆಯಿಂದ ವಾರಣಾಸಿಗೆ ಹೋಗುತ್ತಿದ್ದ ಸಾಬರಮತಿ ಎಕ್ಸ್‌ಪ್ರೆಸ್‌ ರೈಲಿನ ಮೇಲೆ ಘೋರ ದಾಳಿ ನಡೆದಿತ್ತು. ರೈಲಿನ 4 ಬೋಗಿಗಳಿಗೆ ಹತ್ತಿದ ಬೆಂಕಿಯಿಂದ ಯಾತ್ರಾರ್ಥಿಗಳು, ಸ್ವಯಂಸೇವಕರು ಸೇರಿ 59 ಮಂದಿ ಸಜೀವ ದಹನವಾಗಿದ್ದರು. ಘಟನೆ ಬಳಿಕ ನಡೆದ ಗಲಭೆ 3 ತಿಂಗಳವರೆಗೆ ನಡೆದಿತ್ತು.

ಸಿನಿಮಾದಲ್ಲಿ ವಿಕ್ರಾಂತ್ ಮಾಸ್ಸಿ, ರಾಶಿ ಖನ್ನಾ ಮತ್ತು ರಿಧಿ ಡೋಗ್ರಾ ನಟಿಸಿದ್ದಾರೆ. ಧೀರಜ್ ಶರ್ಮಾ ಸಿನಿಮಾಗೆ ಆ್ಯಕ್ಷನ್‌ ಕಟ್ ಹೇಳಿದ್ದು, ಏಕ್ತಾ ಕಪೂರ್​ ಬಂಡವಾಳ ಹೂಡಿದ್ದು, ಉತ್ತಮ ಕಲೆಕ್ಷನ್ ಸಹ ಮಾಡ್ತಿದೆ. ಪ್ರಧಾನಿ ಮೋದಿ ಅವಧಿಯ ನಂಟು ಬೆಸೆದ ಈ ಸಿನಿಮಾ ಸಾಕಷ್ಟು ಸದ್ದು ಮಾಡುತ್ತಿದೆ.

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment