ಭೋಪಾಲ್ನಿಂದ ಚಾಲನೆ ನೀಡಲಿರುವ ಪ್ರಧಾನಿ ಮೋದಿ
ಮೈಸೂರು-ಚೆನ್ನೈ ಬಳಿಕ ಇದು ರಾಜ್ಯಕ್ಕೆ ಎರಡನೇ ರೈಲು
ಸಾರ್ವಜನಿಕರ ಸಂಚಾರಕ್ಕೆ ಯಾವಾಗಿಂದ ಅವಕಾಶ..?
ಬೆಂಗಳೂರಿನಿಂದ-ಹುಬ್ಬಳ್ಳಿ ಧಾರವಾಡ ಅವಳಿನಗರಕ್ಕೆ ಸಂಚರಿಸುವ ನೂತನ ‘ವಂದೇ ಭಾರತ್ ಎಕ್ಸ್ಪ್ರೆಸ್’ ಹೈ-ಸ್ಪೀಡ್ ರೈಲು ಸೇವೆಗೆ ಇವತ್ತು ಪ್ರಧಾನಿ ಮೋದಿ ಚಾಲನೆ ನೀಡಲಿದ್ದಾರೆ. ಈ ಮೂಲಕ ರಾಜ್ಯಕ್ಕೆ ಎರಡನೇ ಐಷಾರಾಮಿ ವಂದೇ ಭಾರತ್ ಎಕ್ಸ್ಪ್ರೆಸ್ ಸೇವೆ ಸಿಗಲಿದೆ.
ಬೆಳಗ್ಗೆ 10.30ಕ್ಕೆ ಉದ್ಘಾಟನೆ
ಇಂದು ಮಧ್ಯಪ್ರದೇಶದ ಭೋಪಾಲ್ಗೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡಲಿದ್ದಾರೆ. ಬೆಳಗ್ಗೆ 10.30 ಕ್ಕೆ ರಾಜಧಾನಿ ಭೋಪಾಲ್ನಲ್ಲಿ ವಂದೇ ಭಾರತ್ ಟ್ರೈನ್ಗೆ ಚಾಲನೆ ನೀಡಲಿದ್ದಾರೆ. ದೇಶದ ಐದು ವಿವಿಧ ಮಾರ್ಗಗಳಲ್ಲಿ ಸಂಚರಿಸುವ ವಂದೇ ಭಾರತ್ ಟ್ರೈನ್ಗೆ ಚಾಲನೆ ಸಿಗಲಿದ್ದು, ಭೋಪಾಲ್ನ ರಾಣಿ ಕಮಲಪಾಟಿ ರೈಲ್ವೆ ನಿಲ್ದಾಣದಲ್ಲಿ ವಿಡಿಯೋ ಕಾನ್ಫರೆನ್ಸ್ ಮೂಲಕ ಚಾಲನೆ ಸಿಗಲಿದೆ.
ಬೆಂಗಳೂರು- ಧಾರವಾಡ, ಗೋವಾ- ಮುಂಬೈ, ಇಂಧೋರ್- ಭೋಪಾಲ್ ನಡುವಿನ ವಂದೇ ಭಾರತ್ ಟ್ರೈನ್ಗೆ ಚಾಲನೆ ಸಿಗಲಿದೆ. ಕರ್ನಾಟಕಕ್ಕೆ ಇಂದಿನಿಂದ ಎರಡನೇ ‘ವಂದೇ ಭಾರತ್ ಟ್ರೈನ್’ ಸೇವೆ ಸಿಗಲಿದೆ. ಈಗಾಗಲೇ ಮೈಸೂರು- ಬೆಂಗಳೂರು- ಚೆನ್ನೈ ನಡುವೆ ವಂದೇ ಭಾರತ್ ಟ್ರೈನ್ ಸಂಚಾರ ನಡೆಯುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ