ದೀಪಾವಳಿ ಹಬ್ಬಕ್ಕೆ ಶುಭಾಶಯ ಕೋರಿದ ಪ್ರಧಾನಿ ಮೋದಿ
ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಉತ್ತರ ನೀಡಲಾಗಿದೆ-ಮೋದಿ
‘ರಾಷ್ಟ್ರೀಯ ಏಕತಾ ದಿನ’ ಕಾರ್ಯಕ್ರಮದಲ್ಲಿ ಮೋದಿ ಹೇಳಿಕೆ
ಪ್ರಜಾಪ್ರಭುತ್ವವನ್ನು ಬಲಪಡಿಸುವ ಒಂದು ರಾಷ್ಟ್ರ, ಒಂದು ಚುನಾವಣೆಯ ಮೇಲೆ ಕೆಲಸ ಮಾಡುತ್ತಿದ್ದೇವೆ. ಇದು ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ಸಹಾಯ ಆಗಲಿದೆ. ಜೊತೆಗೆ ನಿಗಧಿತ ಗುರಿಯನ್ನು ಸಾಧಿಸುತ್ತದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
ಸರ್ದಾರ್ ವಲ್ಲಭಭಾಯಿ ಪಟೇಲ್ ಜನ್ಮದಿನ ಹಿನ್ನೆಲೆಯಲ್ಲಿ ಗುಜರಾತ್‌ನ ಕೆವಾಡಿಯಾದಲ್ಲಿ (Kevadiya) ‘ರಾಷ್ಟ್ರೀಯ ಏಕತಾ ದಿನ’ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಇಲ್ಲಿ ಭಾಗಿಯಾಗಿದ್ದ ಪ್ರಧಾನಿ ಮೋದಿ, ಪರೇಡ್ ವೀಕ್ಷಿಸಿದರು. ಬಳಿಕ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಭಯೋತ್ಪಾದನೆಗೆ ತಕ್ಕ ಉತ್ತರವನ್ನು ನೀಡಿದ್ದೇವೆ. ಕಳೆದ 10 ವರ್ಷಗಳ ಪ್ರಯತ್ನದಿಂದ ನಕ್ಸಲಿಸಂ ಕೂಡ ಭಾರತದಲ್ಲಿ ಕೊನೆಯುಸಿರೆಳೆದಿದೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಬಿರುಕು? ಗಂಭೀರ್-ರೋಹಿತ್ ಮಧ್ಯೆ ಜಗಳ..! 3 ಬಣವಾದ ತಂಡ!
ಜಮ್ಮು ಮತ್ತು ಕಾಶ್ಮೀರ ಪ್ರತ್ಯೇಕತಾವಾದಿಗಳಿಗೆ ಉತ್ತರ ನೀಡಲಾಗಿದೆ. ಭಯೋತ್ಪಾದನೆಯ ಮಾಸ್ಟರ್ಸ್ ದೇಶವನ್ನು ತೊರೆಯಬೇಕಾಗಿದೆ. ಕಳೆದ 10 ವರ್ಷಗಳ ಅವಧಿಯು ಭಾರತದ ಏಕತೆ ಮತ್ತು ಸಮಗ್ರತೆಗೆ ಅಭೂತಪೂರ್ವ ಸಾಧನೆಗಳಿಂದ ತುಂಬಿದೆ. ರಾಷ್ಟ್ರೀಯ ಏಕತೆಯ ಬದ್ಧತೆಯು ಸರ್ಕಾರದ ಪ್ರತಿಯೊಂದು ಕೆಲಸ ಮತ್ತು ಧ್ಯೇಯಗಳಲ್ಲಿಯೂ ಗೋಚರಿಸುತ್ತದೆ ಎಂದರು. ಇದೇ ವೇಳೆ ದೇಶದ ಸಮಸ್ತ ಜನರಿಗೆ ದೀಪಾವಳಿ ಹಬ್ಬದ ಶುಭಾಶಯವನ್ನು ಕೋರಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ