newsfirstkannada.com

2 ಕಾನೂನಿನ ಮೇಲೆ ದೇಶ ಹೇಗೆ ನಡೆಸಲು ಸಾಧ್ಯ? ಎಂದ ಮೋದಿ- ಏಕರೂಪ ನಾಗರಿಕ ಸಂಹಿತೆ ಜಾರಿ ಸುಳಿವು ಕೊಟ್ರಾ?

Share :

27-06-2023

    "ಮೇರಾ ಬೂತ್​​ ಸಬ್ಸೇ ಮಜ್​ಬೂತ್" ಕಾರ್ಯಕ್ರಮದಲ್ಲಿ ಮೋದಿ

    ತ್ರಿವಳಿ ತಲಾಖ್ ಇಸ್ಲಾಂ ಧರ್ಮದ ಅಗತ್ಯ ಸಿದ್ದಾಂತವೇ ಎಂದ ಪ್ರಧಾನಿ

    ಪಾಕಿಸ್ತಾನ ಸೇರಿದಂತೆ ಮುಸ್ಲಿಂ ರಾಷ್ಟ್ರಗಳಲ್ಲಿ ತಲಾಖ್​​ ಯಾಕಿಲ್ಲ ಎಂದು ಪ್ರಶ್ನೆ

ಭೂಪಾಲ್​​​: ಮಧ್ಯಪ್ರದೇಶ ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಶುರುವಾಗಿದೆ. ಇತ್ತೀಚೆಗೆ ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿದ್ದ ಬಿಜೆಪಿ ಸಖತ್​​ ಅಲರ್ಟ್​ ಆಗಿದೆ. ಲೋಕಸಭಾ ಚುನಾವಣೆಗೆ ಮುನ್ನ ವರ್ಷಾಂತ್ಯದಲ್ಲಿ ನಡೆಯೋ ಮಧ್ಯಪ್ರದೇಶ ಎಲೆಕ್ಷನ್​​ ಹೇಗಾದ್ರೂ ಮಾಡಿ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿದೆ. ಇತ್ತ ಐದು ಗ್ಯಾರಂಟಿಗಳನ್ನು ಘೋಷಿಸಿ ಕರ್ನಾಟಕದಲ್ಲಿ ಅಧಿಕಾರಕ್ಕೆ ಬಂದಿರುವ ಕಾಂಗ್ರೆಸ್​ ಇದೇ ತಂತ್ರಗಾರಿಕೆ ಮೂಲಕ ಮಧ್ಯಪ್ರದೇಶವನ್ನು ಗೆಲ್ಲಲು ಮುಂದಾಗಿದೆ. ಅತ್ತ ಖುದ್ದು ಪ್ರಧಾನಿ ನರೇಂದ್ರ ಮೋದಿ ಅವರೇ ಮಧ್ಯಪ್ರದೇಶ ಗೆಲ್ಲಿಸೋ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಈ ಬಾರಿ ಕೇವಲ ಹಿಂದುಗಳು ಮಾತ್ರವಲ್ಲ ಮಧ್ಯಪ್ರದೇಶ ಚುನಾವಣೆಯಲ್ಲಿ ನಿರ್ಣಾಯಕ ಪಾತ್ರವಹಿಸುವ ಮುಸ್ಲಿಂ ಮತಗಳನ್ನು ಸೆಳೆಯಲು ಪ್ರಧಾನಿ ನರೇಂದ್ರ ಮೋದಿ ರಣತಂತ್ರ ರೂಪಿಸಿದ್ದಾರೆ. ಹೀಗಾಗಿ ಇಂದಿನಿಂದಲೇ “ಮೇರಾ ಬೂತ್​​ ಸಬ್ಸೇ ಮಜ್​ಬೂತ್” ಎಂಬ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದಾರೆ. ಇದರ ಉದ್ದೇಶ ಬೂತ್ ಮಟ್ಟದಲ್ಲಿ ಪಕ್ಷವನ್ನು ಬಲಪಡಿಸುವುದು.

ಇಂದು ಚುನಾವಣೆ ತಯಾರಿ ಭಾಗವಾಗಿ ನಡೆದ “ಮೇರಾ ಬೂತ್​​ ಸಬ್ಸೇ ಮಜ್​ಬೂತ್” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗಿಯಾಗಿದ್ದ ಪ್ರಧಾನಿ ನರೇಂದ್ರ ಮೋದಿ ಸಮಾನ ನಾಗರಿಕ ಸಂಹಿತೆ ಜಾರಿ ಮಾಡುವ ಬಗ್ಗೆ ಮಾತಾಡಿದ್ದಾರೆ. ತ್ರಿವಳಿ ತಲಾಖ್ ಇಸ್ಲಾಂ ಧರ್ಮದ ಅಗತ್ಯ ಸಿದ್ದಾಂತ ಎನ್ನುವುದಾದರೆ ಮುಸ್ಲಿಮರೇ ಹೆಚ್ಚಿರೋ ರಾಷ್ಟ್ರಗಳಲ್ಲಿ ಯಾಕಿಲ್ಲ. ಪಾಕಿಸ್ತಾನ, ಇಂಡೋನೇಷ್ಯಾ ಹಾಗೂ ಬಾಂಗ್ಲಾದೇಶ ಸೇರಿದಂತೆ ಬೇರೆ ಮುಸ್ಲಿಂ ರಾಷ್ಟ್ರಗಳಲ್ಲಿ ಯಾಕೆ ಆಚರಣೆಯಲಿಲ್ಲ ಎಂದು ಪ್ರಶ್ನಿಸಿದರು.

ಕುಟುಂಬದಲ್ಲೇ ಎರಡು ನಿಮಯಗಳು ಇರಲು ಸಾಧ್ಯವಿಲ್ಲ. ಮಗಳಿಗೊಂದು, ಮಗನಿಗೊಂದು ನಿಯಮ ಇದ್ದಲ್ಲಿ ಕುಟುಂಬ ಸುಗಮವಾಗಿ ಹೇಗೆ ನಡೆಯಲು ಸಾಧ್ಯ. ತ್ರಿವಳಿ ತಲಾಖ್ ಬೆಂಬಲಿಸುವ ರಾಜಕೀಯ ಪಕ್ಷಗಳು ವೋಟ್​ ಬ್ಯಾಂಕ್​ ಪಾಲಿಟಿಕ್ಸ್​ ಮಾಡುತ್ತಿದ್ದಾರೆ. ನಮ್ಮ ಮುಸ್ಲಿಂ ಹೆಣ್ಣುಮಕ್ಕಳಿಗೆ ಅನ್ಯಾಯ ಆಗುತ್ತಿದೆ. ತ್ರಿವಳಿ ತಲಾಖ್ ಕೇವಲ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಕೆಟ್ಟ ಪರಿಣಾಮ ಬೀರುವುದಲ್ಲ, ಜತೆಗೆ ಇಡೀ ಕುಟುಂಬಕ್ಕೆ ಹಾನಿ ಮಾಡುತ್ತದೆ ಎಂದರು ಮೋದಿ.

ಈಜಿಪ್ಟ್‌ನಲ್ಲಿ ಶೇ. 90ಕ್ಕಿಂತ ಹೆಚ್ಚಿನ ಜನ ಸುನ್ನಿ ಸಮುದಾಯಕ್ಕೆ ಸೇರಿದವರು ಇದ್ದಾರೆ. ಈ ದೇಶದಲ್ಲಿ 90 ವರ್ಷಗಳ ಹಿಂದೆಯೇ ತ್ರಿವಳಿ ತಲಾಖ್ ರದ್ದಾಗಿದೆ. ಇಸ್ಲಾಂ ಧರ್ಮದಲ್ಲಿ ತ್ರಿವಳಿ ತಲಾಖ್ ಅಗತ್ಯವೇ ಆಗಿದ್ದರೆ ಈ ರಾಷ್ಟ್ರಗಳಲ್ಲಿ ಯಾಕಿಲ್ಲ. ನಾವು ಏಕರೂಪ ನಾಗರಿಕ ಸಂಹಿತೆ ಜಾರಿ ಮಾಡಿಯೇ ಮಾಡುತ್ತೇವೆ. ರಾಜಕೀಯ ಪಕ್ಷಗಳು ನಿಮ್ಮನ್ನು ದಾರಿತಪ್ಪಿಸಲು ಪ್ರಯತ್ನಿಸುತ್ತಿವೆ ಎಂದು ಮುಸ್ಲಿಂ ಸಮುದಾಯ ಅರ್ಥಮಾಡಿಕೊಳ್ಳಬೇಕು ಎಂದರು.

ಎರಡು ವಿಭಿನ್ನ ನಿಯಮಗಳಿದ್ದರೆ ಕುಟುಂಬದ ನಿರ್ವಹಣೆಯೇ ಕಷ್ಟ. ಹೀಗುರುವಾಗ ದೇಶ ಹೇಗೆ ನಡೆಸಲು ಸಾಧ್ಯ. ನಮ್ಮ ಸಂವಿಧಾನ ಎಲ್ಲರಿಗೂ ಸಮಾನ ಹಕ್ಕುಗಳನ್ನು ನೀಡಿದೆ. ಸುಪ್ರೀಂ ಕೋರ್ಟ್ ಕೂಡ ಸಾಮಾನ್ಯ ನಾಗರಿಕ ಸಂಹಿತೆಗಾಗಿ ಒತ್ತಾಯಿಸುತ್ತಿದೆ ಎಂದು ಹೇಳಿದರು.

ಏಕರೂಪ ನಾಗರಿಕ ಸಂಹಿತೆ ಏಕೆ..?

ಭಾರತದಲ್ಲಿ ಮದುವೆ ಮತ್ತು ಆಸ್ತಿಗೆ ಸಂಬಂಧಿಸಿದ ಸಮಸ್ಯೆಗಳು ನಾಗರಿಕ ಕಾನೂನಿನ ವ್ಯಾಪ್ತಿಗೆ ಬರುತ್ತವೆ. ದೇಶದಲ್ಲಿ ಸಂಪ್ರದಾಯ, ಮದುವೆ, ಕುಟುಂಬ ಮತ್ತು ವಿವಿಧ ಧರ್ಮಗಳ ನಂಬಿಕೆಗಳು ಬೇರೆ ಇವೆ. ಈ ನಂಬಿಕೆಗಳನ್ನು ಆಧರಿಸಿ ನಿರ್ದಿಷ್ಟ ಧರ್ಮಗಳಿಗೆ ಪ್ರತ್ಯೇಕ ಕಾನೂನುಗಳಿವೆ. ಮುಸ್ಲಿಮರ ವಿವಾಹ ಮತ್ತು ಆಸ್ತಿ ಹಂಚಿಕೆ ಮುಸ್ಲಿಂ ವೈಯಕ್ತಿಕ ಕಾನೂನಿನ ಮೂಲಕ ನಿರ್ಧಾರ ಮಾಡಲಾಗುತ್ತದೆ. ಹಿಂದೂಗಳು ಹಿಂದೂ ವಿವಾಹ ಕಾಯಿದೆ ಮೂಲಕ ಮದುವೆಯಾಗುತ್ತಾರೆ. ಅದೇ ರೀತಿ ಕ್ರಿಶ್ಚಿಯನ್ನರು ಮತ್ತು ಸಿಖ್ಖರಿಗೆ ಪ್ರತ್ಯೇಕ ವೈಯಕ್ತಿಕ ಕಾನೂನುಗಳಿವೆ. ಇದು ಭಾರತದ ಕಾನೂನು ವ್ಯವಸ್ಥೆ. ಒಂದು ವೇಳೆ ಏಕರೂಪ ನಾಗರಿಕ ಸಂಹಿತೆ ಜಾರಿಯಾದಲ್ಲಿ ಈ ಎಲ್ಲ ವೈಯಕ್ತಿಕ ಕಾನೂನುಗಳು ರದ್ದಾಗುತ್ತವೆ. ಭಾರತದಲ್ಲಿ ವಾಸಿಸುವ ಪ್ರತಿಯೊಬ್ಬ ನಾಗರಿಕನಿಗೂ ಧರ್ಮ ಅಥವಾ ಜಾತಿ ಹೊರತಾಗಿ ಏಕರೂಪದ ಕಾನೂನು ನ್ಯಾಯ ಕಲ್ಪಿಸುತ್ತದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

2 ಕಾನೂನಿನ ಮೇಲೆ ದೇಶ ಹೇಗೆ ನಡೆಸಲು ಸಾಧ್ಯ? ಎಂದ ಮೋದಿ- ಏಕರೂಪ ನಾಗರಿಕ ಸಂಹಿತೆ ಜಾರಿ ಸುಳಿವು ಕೊಟ್ರಾ?

https://newsfirstlive.com/wp-content/uploads/2023/06/Modi_PM.jpg

Load More