newsfirstkannada.com

ವಿಷಕಾರಿ ಹಾವು.. ಸನಾತನ ಧರ್ಮದ ಬಳಿಕ ಬಿಜೆಪಿ, ಮೋದಿ ವಿರುದ್ಧ ಉದಯನಿಧಿ ವಿವಾದಾತ್ಮಕ ಹೇಳಿಕೆ

Share :

11-09-2023

    ಮನೆಗೆ ವಿಷಕಾರಿ ಹಾವು ಬಂದಾಗ ಅದನ್ನು ಎಸೆದರೆ ಸಾಕಾಗಲ್ಲ

    ಬಿಜೆಪಿ ಮೇಲೆ ಕಿಡಿಕಾರಿದ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ

    NDA ಮಿತ್ರಪಕ್ಷ AIADMK ಹಾವುಗಳಿಗೆ ಆಶ್ರಯ ನೀಡುವ ಕಸ

ಚೆನ್ನೈ: ಸನಾತನ ಧರ್ಮ ಡೆಂಗ್ಯೂ, ಮಲೇರಿಯಾ ಎಂದು ವಿವಾದ ಸೃಷ್ಟಿಸಿದ್ದ ತಮಿಳುನಾಡು ಸಿಎಂ ಎಂ.ಕೆ ಸ್ಟಾಲಿನ್ ಪುತ್ರ ಉದಯನಿಧಿ ಈಗ ಬಿಜೆಪಿ, ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದ್ದಾರೆ. ಬಿಜೆಪಿ ಪಕ್ಷವನ್ನು ವಿಷಕಾರಿ ಹಾವು ಎಂದು ಕರೆಯುವ ಮೂಲಕ ಮತ್ತೊಂದು ವಿವಾದವನ್ನು ಸೃಷ್ಟಿಸಿದ್ದಾರೆ. NDA ಮಿತ್ರಪಕ್ಷವಾದ ಎಐಎಡಿಎಂಕೆಯನ್ನು ಹಾವುಗಳಿಗೆ ಆಶ್ರಯ ನೀಡುವ ಕಸ ಎಂದು ಬಣ್ಣಿಸಿದ್ದಾರೆ.

ಇದನ್ನೂ ಓದಿ: ‘ಸೊಳ್ಳೆ ಬತ್ತಿ’ ಹಚ್ಚಿ ತಿರುಗೇಟು ಕೊಟ್ಟ ಉದಯನಿಧಿ ಸ್ಟಾಲಿನ್‌; ಸನಾತನ ಧರ್ಮ ಯುದ್ಧಕ್ಕೆ ಹೊಸ ಟ್ವಿಸ್ಟ್‌

ತಮಿಳುನಾಡಿನ ನೇವೇಲಿಯಲ್ಲಿ ನಿನ್ನೆ ಡಿಎಂಕೆ ಶಾಸಕ ಸಭಾ ರಾಜೇಂದ್ರನ್ ಅವರ ವಿವಾಹ ಸಮಾರಂಭ ನಡೀತು. ಈ ವೇಳೆ ಮಾತನಾಡಿರುವ ಉದಯನಿಧಿ ಸ್ಟಾಲಿನ್, ಬಿಜೆಪಿ ಪಕ್ಷವನ್ನು ವಿಷಪೂರಿತ ಹಾವು ಎಂದು ಕರೆದಿದ್ದಾರೆ. ನಿಮ್ಮ ಮನೆಗೆ ವಿಷಕಾರಿ ಹಾವು ಬಂದಾಗ ಅದನ್ನು ಎಸೆದರೆ ಸಾಕಾಗುವುದಿಲ್ಲ. ಏಕೆಂದರೆ ಅದು ನಿಮ್ಮ ಮನೆಯ ಸಮೀಪವಿರುವ ಕಸದಲ್ಲಿ ಅಡಗಿಕೊಳ್ಳುತ್ತದೆ. ನೀವು ಪೊದೆಗಳನ್ನು ತೆರವುಗೊಳಿಸದ ಹೊರತು ಹಾವು ನಿಮ್ಮ ಮನೆಗೆ ಮರಳುತ್ತಲೇ ಇರುತ್ತದೆ ಎಂದು ಉದಯನಿಧಿ ಸ್ಟಾಲಿನ್ ಹೇಳಿದ್ದಾರೆ.

ಸದ್ಯದ ರಾಜಕೀಯ ಪರಿಸ್ಥಿತಿಯನ್ನು ವಿವರಿಸಿರುವ ಉದಯನಿಧಿ ಅವರು ತಮಿಳುನಾಡು ನಮ್ಮ ಮನೆ. ವಿಷಕಾರಿ ಹಾವನ್ನು ಬಿಜೆಪಿ ಮತ್ತು ನಮ್ಮ ಮನೆಯ ಸಮೀಪವಿರುವ ಕಸವನ್ನು ಎಐಎಡಿಎಂಕೆ ಎಂದು ನಾನು ಪರಿಗಣಿಸುತ್ತೇನೆ. ನೀವು ಕಸವನ್ನು ತೆರವುಗೊಳಿಸದ ಹೊರತು ನೀವು ಬದುಕುಳಿಯಲು ಸಾಧ್ಯವಿಲ್ಲ. ವಿಷಕಾರಿ ಹಾವಿನಂತಹ ಬಿಜೆಪಿಯನ್ನು ತೊಡೆದು ಹಾಕಲು ನೀವು ಕಸದಂತಹ ಎಐಎಡಿಎಂಕೆಯನ್ನು ತೊಡೆದುಹಾಕಬೇಕು ಎಂದು ಉದಯನಿಧಿ ಸ್ಟಾಲಿನ್ ಕರೆ ನೀಡಿದ್ದಾರೆ.

‘ಮೋದಿ ಭ್ರಷ್ಟಾಚಾರದ ರಾಜ’

ಬಿಜೆಪಿಯನ್ನು ವಿಷಕಾರಿ ಹಾವು ಎಂದಿರುವ ಉದಯನಿಧಿ ಸ್ಟಾಲಿನ್, ಪ್ರಧಾನಿ ನರೇಂದ್ರ ಮೋದಿ ವಿರುದ್ಧವೂ ಕಿಡಿಕಾರಿದ್ದಾರೆ. ಮೋದಿ ಅವರು ಕರೆಪ್ಶನ್ ಕಿಂಗ್ ಅನ್ನೋ ಮೂಲಕ ಸನಾತನ ಧರ್ಮದ ಸಂಘರ್ಷ ಜೀವಂತವಾಗಿರುವಾಗಲೇ ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.

ಈ ಹಿಂದೆ ಡಿಎಂಕೆ ನಾಯಕ ಎ.ರಾಜಾ ಅವರು ಪ್ರಧಾನಿ ಮೋದಿಯನ್ನು ಹಾವಿಗೆ ಹೋಲಿಸಿದ್ದರು. ಮೋದಿ ಎಂಬ ಹಾವನ್ನು ಹೊಡೆಯಲು ಎಲ್ಲರೂ ಸಿದ್ಧರಾಗಿದ್ದಾರೆ. ಅವರೆಲ್ಲರೂ ಕೋಲುಗಳೊಂದಿಗೆ ಸಮೀಪಿಸುತ್ತಾರೆ, ಆದರೆ ಹಾವು ಕಚ್ಚುತ್ತದೆ ಎಂದು ಭಯಪಡುತ್ತಾರೆ. ಅದಕ್ಕೆ ಯಾರ ಬಳಿಯೂ ಪರಿಹಾರವಿಲ್ಲ. ಆದಾಗ್ಯೂ, ಪೆರಿಯಾರ್, ಅಣ್ಣಾ ಮತ್ತು ನಮ್ಮಲ್ಲಿ ಮಾತ್ರ ಪ್ರತಿರೋಧದ ವಿಷವಿದೆ. ದ್ರಾವಿಡರಿಗೆ ವಿಷಕಾರಿ ಹಾವನ್ನು ತಟಸ್ಥಗೊಳಿಸುವ ಸಾಮರ್ಥ್ಯವಿದೆ ಇದನ್ನು ಉತ್ತರ ಭಾರತೀಯರು ಅರಿತುಕೊಂಡಿದ್ದಾರೆ ಎಂದು ಅವರು ಹೇಳಿದ್ದರು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ವಿಷಕಾರಿ ಹಾವು.. ಸನಾತನ ಧರ್ಮದ ಬಳಿಕ ಬಿಜೆಪಿ, ಮೋದಿ ವಿರುದ್ಧ ಉದಯನಿಧಿ ವಿವಾದಾತ್ಮಕ ಹೇಳಿಕೆ

https://newsfirstlive.com/wp-content/uploads/2023/09/Udayanindhi-Stalin.jpg

Load More