newsfirstkannada.com

‘ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಜೊತೆ ವಿಲೀನ ಪಕ್ಕಾ, ಆದರೆ..’ ಕೇಂದ್ರ ಸಚಿವರಿಂದ ಭರವಸೆ

Share :

12-09-2023

    ಚೀನಾ ಮ್ಯಾಪ್ ವಿವಾದ ಬೆನ್ನಲ್ಲೇ ಹೇಳಿಕೆ

    ಪಿಒಕೆ ನಮ್ಮದು, ಭಾರತಕ್ಕೆ ದಕ್ಕಲಿದೆ-ವಿಕೆ ಸಿಂಗ್

    ವಿ.ಕೆ ಸಿಂಗ್ ಹೇಳಿಕೆ ಟೀಕಿಸಿದ ಶಿವಸೇನೆ

ಪಾಕ್ ಆಕ್ರಮಿತ ಕಾಶ್ಮೀರ (ಪಿಒಕೆ) ಭಾರತದ ಜೊತೆ ವಿಲೀನ ಆಗಲಿದೆ. ಅದಕ್ಕಾಗಿ ನಾವು ಕೆಲವು ಸಮಯ ಕಾಯಬೇಕು ಅಷ್ಟೇ ಎಂದು ಕೇಂದ್ರ ಸಚಿವ, ಮಾಜಿ ಸೇನಾ ಮುಖ್ಯಸ್ಥ ವಿ.ಕೆ. ಸಿಂಗ್ ಭರವಸೆ ನೀಡಿದ್ದಾರೆ.

ರಾಜಸ್ಥಾನದಲ್ಲಿ ನಡೆದ ಬಿಜೆಪಿಯ ‘ಪರಿವರ್ತನ್ ಸಂಕಲ್ಪ ಯಾತ್ರೆ’ಯಲ್ಲಿ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದಾರೆ. ಪಿಒಕೆ ನಮ್ಮದು, ಅದು ಭಾರತದ ಜೊತೆಗೆ ವಿಲೀನ ಆಗಲಿದೆ. ಅದಕ್ಕೆ ಸಮಯ ಬರಬೇಕು ಅಷ್ಟೇ ಎಂದಿದ್ದಾರೆ. ಚೀನಾ ತಿರುಚಿದ ಮ್ಯಾಪ್ ಬಿಡುಗಡೆ ಮಾಡಿರುವ ಕುರಿತ ಚರ್ಚೆ ಹಸಿಯಾಗಿರುವಾಗಲೇ ಕೇಂದ್ರ ಸಚಿವರು ಈ ಹೇಳಿಕೆ ನೀಡಿದ್ದಾರೆ.

ವಿ.ಕೆ.ಸಿಂಗ್ ಹೇಳಿಕೆ ಬೆನ್ನಲ್ಲೇ ವಿಪಕ್ಷಗಳು ಕೇಂದ್ರ ಸಚಿವರ ಹೇಳಿಕೆಯನ್ನು ಟೀಕಿಸಿವೆ. ಒಂದು ಕಡೆ ಚೀನಾ, ಭಾರತವನ್ನು ಆಕ್ರಮಣ ಮಾಡುತ್ತ ಅರುಣಾಚಲ ಪ್ರದೇಶದವರೆಗೆ ತಲುಪಿದೆ. ಈ ಕುರಿತ ಚರ್ಚೆಯ ದಿಕ್ಕಿ ತಪ್ಪಿಸಲು ಸಚಿವರು ಹೀಗೆ ಹೇಳಿದ್ದಾರೆ ಎಂದು ಶಿವಸೇನೆ ಸಂಸದ ಸಂಜಯ್ ರಾವತ್ ಹೇಳಿದ್ದಾರೆ. ನಾವು ಯಾವಾಗಲೂ ಅಖಂಡ ಭಾರತದ ಕನಸನ್ನು ಕಾಣುತ್ತೇವೆ. ಪಾಕ್ ಆಕ್ರಮಿತ ಕಾಶ್ಮೀರ ನಮ್ಮದು ಎಂದು ಹೇಳುತ್ತೇವೆ. ಕೇಂದ್ರ ಸಚಿವರು ಅಂದು ಸೇನಾ ಮುಖ್ಯಸ್ಥರಾಗಿದ್ದರು ಎಂದು ಟೀಕಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಜೊತೆ ವಿಲೀನ ಪಕ್ಕಾ, ಆದರೆ..’ ಕೇಂದ್ರ ಸಚಿವರಿಂದ ಭರವಸೆ

https://newsfirstlive.com/wp-content/uploads/2023/09/POK.jpg

Load More