newsfirstkannada.com

ಸೀರಿಯಲ್ ನಟಿ ಹನಿಟ್ರ್ಯಾಪ್‌ಗೆ ಬಿದ್ದ ಮಾಜಿ ಸೈನಿಕ; 25 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟ ಮೇಲೆ ಏನಾಯ್ತು ಗೊತ್ತಾ?

Share :

27-07-2023

    ಮನೆಯೊಂದು ಬಾಡಿಗೆಗೆ ಬೇಕು ಎಂದು ಕಾಲ್ ಮಾಡಿದ್ದ ನಟಿ

    ಬೆತ್ತಲೆ ಫೋಟೋಗಳನ್ನು ಫುಲ್ ವೈರಲ್ ಮಾಡುವ ಬೆದರಿಕೆ

    11 ಲಕ್ಷ ರೂಪಾಯಿ ಕೊಟ್ಟ ಮೇಲೂ ಪೀಡಿಸುತ್ತಿದ್ದ ಮೋಹಕ ತಾರೆ

ಕೊಲ್ಲಂ: ಮೋಹದ ಜಾಲಕ್ಕೆ ಸಿಲುಕಿಸಿ ವಂಚನೆ ಮಾಡುವ ಹನಿಟ್ರ್ಯಾಪ್‌ ಆರೋಪದಲ್ಲಿ ಕಿರುತೆರೆ ನಟಿಯನ್ನು ಕೇರಳದ ಪೊಲೀಸರು ಬಂಧಿಸಿದ್ದಾರೆ. ನಿತ್ಯಾ ಶಶಿ ಬಂಧಿತ ಸೀರಿಯಲ್ ನಟಿ. ನಟಿ ನಿತ್ಯಾ ಶಶಿ ತನ್ನ ಸ್ನೇಹಿತನ ಜೊತೆ ಸೇರಿ ಹನಿಟ್ರ್ಯಾಪ್ ಬಲೆ ಬೀಸಿದ್ದರು. ಮಾಜಿ ಸೈನಿಕರೊಬ್ಬರ ಬಳಿ ಬರೋಬ್ಬರಿ 25 ಲಕ್ಷ ರೂಪಾಯಿಗೆ ಡಿಮ್ಯಾಂಡ್ ಮಾಡಿದ್ದರು ಅನ್ನೋ ದೂರು ಇವರ ವಿರುದ್ಧ ದಾಖಲಾಗಿದೆ. 25 ಲಕ್ಷಕ್ಕೆ ಡಿಮ್ಯಾಂಡ್ ಮಾಡಿದ್ದ ಈ ಮೋಹಕ ನಟಿ ಹಾಗೂ ಆತನ ಸ್ನೇಹಿತ 11 ಲಕ್ಷ ರೂಪಾಯಿ ಪಡೆದು ವಂಚಿಸಿದ್ದಾರೆ ಎನ್ನಲಾಗಿದೆ.

ಕೇರಳದ ಸೀರಿಯಲ್ ನಟಿ ನಿತ್ಯಾ ಶಶಿ ತನ್ನ ಸ್ನೇಹಿತನ ಜೊತೆ ಸೇರಿ ಹನಿಟ್ರ್ಯಾಪ್ ಭರ್ಜರಿ ಬಲೆ ಹೆಣೆದಿದ್ದಾರೆ. LLB ಕೂಡ ಮಾಡಿದ್ದ ಈ ನಟಿಮಣಿ ತಾನೇ ಹೆಣೆದ ಜಾಲಕ್ಕೆ ಸಿಕ್ಕಿಬಿದ್ದಿರೋದು ಮತ್ತೊಂದು ಆಶ್ಚರ್ಯದ ಸಂಗತಿ. 32 ವರ್ಷದ ನಿತ್ಯಾ ಶಶಿ, 75 ವರ್ಷದ ಮಾಜಿ ಸೈನಿಕರೊಬ್ಬರನ್ನು ತಮ್ಮ ಮಾಯಾಜಾಲಕ್ಕೆ ಬೀಳಿಸಿದ್ದಾರೆ. ತಿರುವನಂತಪುರಂನ 75 ವರ್ಷದ ಮಾಜಿ ಸೈನಿಕ ನಟಿ ನಿತ್ಯಾಳ ಹನಿಟ್ರ್ಯಾಪ್ ಬಲೆಗೆ ಬಿದ್ದಿದ್ದರು ಎನ್ನಲಾಗಿದೆ.

ಕಳೆದ ಮೇ 24ರಂದಿಲೇ ನಟಿ ನಿತ್ಯಾ ಶಶಿಯ ಹನಿಟ್ರ್ಯಾಪ್ ಶುರುವಾಗಿದೆ. ನಿತ್ಯಾ ನನಗೆ ಮನೆಯೊಂದು ಬಾಡಿಗೆಗೆ ಬೇಕಿದೆ ಎಂದು ಕಾಲ್ ಮಾಡಿದ್ದಾರೆ. ಸ್ವಲ್ಪ ದಿನದ ತನ್ನ ಸ್ನೇಹಿತನ ಜೊತೆ ನಿತ್ಯಾ ಬಾಡಿಗೆ ಮನೆ ನೋಡಲು ಹೋಗಿದ್ದಾಳೆ. ಆಗ ಮನೆಯೊಳಗಿದ್ದ ವ್ಯಕ್ತಿಯನ್ನ ಬೆದರಿಸಿದ್ದು ಅಲ್ಲೇ ಬಟ್ಟೆ ಬಿಚ್ಚಿಸಿದ್ದಾರೆ. ಕೂಡಲೇ ಬೆತ್ತಲೆ ಫೋಟೋಗಳನ್ನು ತೆಗೆದುಕೊಂಡಿರುವ ದುಷ್ಕರ್ಮಿಗಳು ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಇದನ್ನೂ ಓದಿ: ಸಮಂತಾ ಜೊತೆ ಮಂಗಣ್ಣ.. ಬ್ಯೂಟಿಗೆ ಸೆಲ್ಫಿ ಕೊಟ್ಟ ಮೇಲೆ ಏನಾಯ್ತು ಗೊತ್ತಾ?

ನಿತ್ಯಾ ಶಶಿ ಅಂಡ್ ಗ್ಯಾಂಗ್ 75 ವರ್ಷದ ವೃದ್ಧನ ಬಳಿ 25 ಲಕ್ಷ ರೂಪಾಯಿ ಕೊಡುವಂತೆ ಬೇಡಿಕೆ ಇಟ್ಟಿದ್ದಾರೆ. ಇಲ್ಲದಿದ್ದರೆ ಬೆತ್ತಲೆ ಫೋಟೋಗಳನ್ನು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಮಾಡುವ ಬೆದರಿಕೆ ಹಾಕಿದ್ದಾರೆ. ಹೀಗೆ ಹೆದರಿಸಿದ ಮೇಲೆ ದೂರುದಾರರು 11 ಲಕ್ಷ ರೂಪಾಯಿ ಕೊಟ್ಟಿದ್ದಾರೆ. ಇಷ್ಟಾದ ಮೇಲೂ ಹಣಕ್ಕೆ ಬೇಡಿಕೆಯಿಡುತ್ತಿದ್ದಾಗ ಮಾಜಿ ಸೈನಿಕರು ಪರವೂರ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ತನಿಖೆ ನಡೆಸಿದಾಗ ಸೀರಿಯಲ್ ನಟಿ ನಿತ್ಯಾ ಶಶಿಯ ಹನಿಟ್ರ್ಯಾಪ್ ಜಾಲ ಪತ್ತೆಯಾಗಿದೆ. 75 ವರ್ಷದ ಮಾಜಿ ಸೈನಿಕನ ಜೊತೆ ಹಲವರಿಗೆ ಈ ಮೋಹಕ ನಟಿ ಬಲೆ ಬೀಸಿರುವ ಅನುಮಾನ ವ್ಯಕ್ತವಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ 

ಸೀರಿಯಲ್ ನಟಿ ಹನಿಟ್ರ್ಯಾಪ್‌ಗೆ ಬಿದ್ದ ಮಾಜಿ ಸೈನಿಕ; 25 ಲಕ್ಷಕ್ಕೆ ಡಿಮ್ಯಾಂಡ್ ಇಟ್ಟ ಮೇಲೆ ಏನಾಯ್ತು ಗೊತ್ತಾ?

https://newsfirstlive.com/wp-content/uploads/2023/07/Serial-Actor-Nithya-Sasi.jpg

Load More