newsfirstkannada.com

VIDEO: ಯುವತಿಯರನ್ನು ಹಿಡಿದು ಅಮಾನುಷವಾಗಿ ಎಳೆದಾಡಿದ ಪೊಲೀಸರು; ಉತ್ತರ ಪ್ರದೇಶದಲ್ಲಿ ತೀವ್ರ ಆಕ್ರೋಶ

Share :

07-11-2023

    112 ಹೆಲ್ಪ್‌ಲೈನ್ ನಂಬರ್‌ಗೆ ಕರೆ ಮಾಡಿದ್ರೆ ದೂರು ಸ್ವೀಕರಿಸೋ ಸಿಬ್ಬಂದಿ

    ಪ್ರತಿಭಟನೆಗೆ ಮುಂದಾದ ಯುವತಿಯರ ಮೇಲೆ ದೌರ್ಜನ್ಯ ನಡೆದ ಆರೋಪ

    ಪೊಲೀಸ್‌ ಹಾಗೂ ಹೋರಾಟ ನಡೆಸುತ್ತಿರುವ ಯುವತಿಯರ ಮಧ್ಯೆ ಸಂಘರ್ಷ

ಲಕ್ನೋ: ಉತ್ತರ ಪ್ರದೇಶ ಪೊಲೀಸ್ ಹೆಲ್ಪ್‌ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರು ನಡೆಸುತ್ತಿದ್ದ ಪ್ರತಿಭಟನೆ ಹಿಂಸಾರೂಪಕ್ಕೆ ತಿರುಗಿದೆ. ಹೆಲ್ಪ್‌ಲೈನ್‌ನಲ್ಲಿ ಕೆಲಸ ಮಾಡುತ್ತಿದ್ದ ಯುವತಿಯರು ಸೇವೆ ಖಾಯಂಗೆ ಪಟ್ಟು ಹಿಡಿದಿದ್ದಾರೆ. ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಯುತ್ತಿದ್ದ ಪ್ರತಿಭಟನೆಗೆ ಪೊಲೀಸರು ಅಡ್ಡಿ ಪಡಿಸಿದ್ದಾರೆ. ಪ್ರತಿಭಟನಾ ನಿರತ ಯುವತಿಯರ ಮೇಲೆ ಪೊಲೀಸರೇ ದೌರ್ಜನ್ಯ ಮಾಡಿರೋ ಆರೋಪ ಕೇಳಿ ಬಂದಿದೆ.

ಉತ್ತರಪ್ರದೇಶದಲ್ಲಿ 112 ಹೆಲ್ಪ್‌ಲೈನ್ ನಂಬರ್‌ಗೆ ಕರೆ ಮಾಡಿದ್ರೆ ದೂರು ದಾಖಲಿಸಲು ಈ ಯುವತಿಯರನ್ನ ನೇಮಿಸಲಾಗಿದೆ. 8 ಗಂಟೆ ಕೆಲಸ ಮಾಡೋ ಈ ಸಿಬ್ಬಂದಿಗೆ 12 ಸಾವಿರ ರೂಪಾಯಿ ಪಾವತಿ ಮಾಡಲಾಗುತ್ತಿದೆ. ಹಲವು ವರ್ಷಗಳಿಂದ ಹೆಲ್ಪ್‌ಲೈನ್‌ನಲ್ಲಿ ಕೆಲಸ ಮಾಡುತ್ತಿರುವ ಈ ಯುವತಿಯರು ಸೇವಾ ಖಾಯಂ ಸೇರಿದಂತೆ ಇತರೆ ಬೇಡಿಕೆಗಳ ಈಡೇರಿಕೆಗೆ ಪಟ್ಟು ಹಿಡಿದಿದ್ದಾರೆ.

ಪೊಲೀಸರು-ಯುವತಿಯರ ಮಧ್ಯೆ ಸಂಘರ್ಷ!

ಲಕ್ನೋದಲ್ಲಿ ಸೇವಾ ಖಾಯಂಗೆ ಆಗ್ರಹಿಸಿ ಪ್ರತಿಭಟನೆಗೆ ಮುಂದಾದ ಯುವತಿಯರ ಮೇಲೆ ದೌರ್ಜನ್ಯ ನಡೆದ ಆರೋಪ ಕೇಳಿ ಬಂದಿದೆ. ಪೊಲೀಸರು ಯುವತಿಯರನ್ನ ಹಿಡಿದು ಎಳೆದಾಡಿದ್ದಾರೆ. ಗರ್ಭಿಣಿ ಯುವತಿಗೆ ಪೊಲೀಸರು ಹೊಡೆದಿದ್ದಾರೆ ಎನ್ನಲಾಗಿದೆ.

ಪ್ರತಿಭಟನೆಯಲ್ಲಿ ಪೊಲೀಸರು ಹಾಗೂ ಹೋರಾಟ ನಡೆಸುತ್ತಿರುವ ಯುವತಿಯರ ಮಧ್ಯೆ ಸಂಘರ್ಷ ಏರ್ಪಟ್ಟಿದೆ. ಇವರ ಬೇಡಿಕೆಗೆ ಒಪ್ಪದ ಪೊಲೀಸರು ನಿಮ್ಮ ಎಲ್ಲರ ಮೇಲೂ ಕೇಸ್ ದಾಖಲಿಸುತ್ತೇವೆ. ನಿಮ್ಮ ಕೆರಿಯರ್ ಹಾಳಾಗುತ್ತೆ ಎಂದು ಧಮ್ಕಿ ಹಾಕಿದ್ದಾರಂತೆ. ಎಲ್ಲರನ್ನೂ ವಶಕ್ಕೆ ತೆಗೆದುಕೊಂಡು ಬಸ್‌ನಲ್ಲಿ ಕರೆದೊಯ್ದಿದ್ದಾರೆ. ಪ್ರತಿಭಟನಾ ನಿರತ ಯುವತಿಯರು ಪೊಲೀಸರ ಈ ದೌರ್ಜನ್ಯದ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

VIDEO: ಯುವತಿಯರನ್ನು ಹಿಡಿದು ಅಮಾನುಷವಾಗಿ ಎಳೆದಾಡಿದ ಪೊಲೀಸರು; ಉತ್ತರ ಪ್ರದೇಶದಲ್ಲಿ ತೀವ್ರ ಆಕ್ರೋಶ

https://newsfirstlive.com/wp-content/uploads/2023/11/UP-Police-Protest.jpg

Load More