/newsfirstlive-kannada/media/post_attachments/wp-content/uploads/2024/09/HARSHA_SAI.jpg)
ಹೈದರಾಬಾದ್: ತೆಲುಗು ಯೂಟ್ಯೂಬ್ ಸ್ಟಾರ್ ಹರ್ಷ ಸಾಯಿ ವಿರುದ್ಧ ಓರ್ವ ಯುವತಿ ಅ*ತ್ಯಾಚಾರ ಪ್ರಕರಣ ದಾಖಲು ಮಾಡಿದ್ದಾರೆ. ಮದುವೆ ಆಗುತ್ತೇನೆಂದು ಹೇಳಿ, ನಂಬಿಸಿ ದೈಹಿಕವಾಗಿ ಬಳಸಿಕೊಂಡು, ನಗ್ನ ಫೋಟೋ ಕ್ಲಿಕ್ಕಿಸಿ, ಬ್ಲ್ಯಾಕ್​ಮೇಲ್ ಮಾಡಿದ್ದಾನೆ ಎಂದು ಆರೋಪಿಸಿ ಯುವತಿ ನರಸಿಂಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದಾರೆ.
ಇದನ್ನೂ ಓದಿ:ಇಂದು ಸಿದ್ದರಾಮಯ್ಯ ವಿರುದ್ಧ FIR ದಾಖಲಾಗುತ್ತಾ.. ಸಿಎಂ ಕೇರಳಕ್ಕೆ ಹೋಗುತ್ತಿರುವುದು ಏಕೆ?
ಮುಂಬೈ ಮೂಲದ ಯುವತಿ ನಟಿಯಾಗಿದ್ದು ಕೆಲ ವರ್ಷಗಳ ಹಿಂದೆ ಹೈದರಾಬಾದ್​ಗೆ ಸಿನಿಮಾ ಅವಕಾಶಕ್ಕೆ ಬಂದಿದ್ದರು. ಬಳಿಕ ತೆಲುಗು ರಿಯಾಲಿಟಿ ಶೋವೊಂದರಲ್ಲಿ ಭಾಗವಹಿಸಿದ್ದರು. ಖಾಸಗಿ ಪಾರ್ಟಿಯಲ್ಲಿ ಹರ್ಷಸಾಯಿಯನ್ನ ಭೇಟಿಯಾಗಿದ್ದರು. ಈ ವೇಳೆ ಇಬ್ಬರ ಮಧ್ಯೆ ಸ್ನೇಹ ಬೆಳೆದು ಸಲುಗೆಯಿಂದ ಇರುತ್ತಿದ್ದರು. ಆದರೆ ಹರ್ಷ ಸಾಯಿ ಮದುವೆ ಆಗುವುದಾಗಿ ಹೇಳಿ, ತನ್ನನ್ನು ಬಳಸಿಕೊಂಡಿದ್ದಾನೆ ಎಂದು ಯುವತಿ ಆರೋಪ ಮಾಡಿದ್ದಾರೆ. ಅಲ್ಲದೇ ಯುವತಿಯ ನಗ್ನ ಫೋಟೋ ತೆಗೆದು ಬ್ಲ್ಯಾಕ್​ಮೇಲ್ ಮಾಡಿ ಕೋಟಿ ಲೆಕ್ಕದಲ್ಲಿ ಹಣ ವಸೂಲಿ ಮಾಡಿದ್ದಾನೆ ಎಂದು ಆರೋಪ ಮಾಡಲಾಗಿದೆ.
ಇದನ್ನೂ ಓದಿ: ಕರ್ನಾಟಕದ ರೆವಿನ್ಯೂ ಇಲಾಖೆಯಲ್ಲಿ ಬೃಹತ್ ಹುದ್ದೆಗಳ ನೇಮಕಾತಿ.. ಅರ್ಜಿ ಆರಂಭ, ಕೊನೆ ದಿನಾಂಕ?
/newsfirstlive-kannada/media/post_attachments/wp-content/uploads/2024/09/HARSHA_SAI_1.jpg)
ಸದ್ಯ ಈ ಸಂಬಂಧ ತೆಲಂಗಾಣದ ರಂಗಾರೆಡ್ಡಿ ಜಿಲ್ಲೆಯ ನರಸಿಂಗಿ ಪೊಲೀಸ್ ಠಾಣೆಯಲ್ಲಿ ಯೂಟ್ಯೂಬ್ ಸ್ಟಾರ್ ಹರ್ಷ ಸಾಯಿ ಹಾಗೂ ಇವರ ತಂದೆ ರಾಧಕೃಷ್ಣ ವಿರುದ್ಧ ಕೇಸ್ ದಾಖಲಾಗಿದೆ. ಸದ್ಯ ಪೊಲೀಸರು ವೈದ್ಯಕೀಯ ಪರೀಕ್ಷೆಗಾಗಿ ಯುವತಿಯನ್ನು ಕೊಂಡಪುರದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ ಎಂದು ತಿಳಿದು ಬಂದಿದೆ.
ಆಂಧ್ರ ಹಾಗೂ ತೆಲಂಗಾಣದಲ್ಲಿ ಹರ್ಷ ಸಾಯಿ ಯೂಟ್ಯೂಬರ್ ಮೂಲಕ ಸಖತ್ ಫೇಮಸ್ ಆಗಿದ್ದನು​. ಬಡವರಿಗೆ, ಮನೆ ಇಲ್ಲದವರಿಗೆ, ರಸ್ತೆ ಬದಿ ಇರುವವರಿಗೆ ಹೀಗೆ ನೂರಾರು ಜನಕ್ಕೆ ಹಣ ಕೊಟ್ಟು ಸಾಕಷ್ಟು ಖ್ಯಾತಿ ಗಳಿಸಿದ್ದಾನೆ. ಹರ್ಷ ಸಾಯಿ ಟಾಲಿವುಡ್ ಸಿನಿ ರಂಗಕ್ಕೂ ಎಂಟ್ರಿ ಕೊಟ್ಟು ಹೀರೋ ಆಗಿ ಒಂದು ಚಿತ್ರ ಕೂಡ ಶುರು ಮಾಡಿದ್ದರು. ಆದರೆ ಇದೀಗ ಅವರ ವಿರುದ್ಧ ಪ್ರಕರಣವೊಂದು ಕೇಳಿ ಬಂದಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us