ಕಾವ್ಯ ಪೊಲೀಸ್ ಇಲಾಖೆಯ ಧೈರ್ಯವಂತೆ ಶ್ವಾನ
9 ವರ್ಷ, 6 ತಿಂಗಳುಗಳ ಕಾಲ ಇಲಾಖೆಯಲ್ಲಿ ಸೇವೆ
ಹಲವು ಬಾಂಬ್ ಪತ್ತೆ ಕಾರ್ಯಗಳಲ್ಲಿ ಭಾಗಿಯಾಗಿದ್ದ ಶ್ವಾನ
ಪೊಲೀಸ್ ಇಲಾಖೆಯ ಧೈರ್ಯವಂತೆ ಶ್ವಾನ ಕಾವ್ಯ ಸಾವನ್ನಪ್ಪಿದೆ. ಇಲಾಖೆಯಲ್ಲಿ 9 ವರ್ಷ ಸೇವೆ ಸಲ್ಲಿಸಿದ ಕಾವ್ಯ ವಯೋಸಹಜವಾಗಿ ಕೊನೆಯುಸಿರೆಳೆದಿದೆ.
2014 ರಲ್ಲಿ ಜನಿಸಿದ್ದ ಕಾವ್ಯ, ಅದೇ ವರ್ಷ ಇಲಾಖೆಗೆ ಸೇರ್ಪಡೆಗೊಂಡಿತ್ತು. ಕಾವ್ಯ ಜೀವದ ಹಂಗು ತೊರೆದು ಸೇವೆ ಸಲ್ಲಿಸಿದ್ದ ಗಟ್ಟಿಗಿತ್ತಿ. ಪೊಲೀಸ್ ಇಲಾಖೆ ಬಾಂಬ್ ನಿಷ್ಕ್ರಿಯ ದಳದಲ್ಲಿ ಕರ್ತವ್ಯ ನಿರ್ವಹಿಸಿತ್ತು.
ಒಂಭತ್ತು ವರ್ಷ, ಆರು ತಿಂಗಳುಗಳ ಕಾಲ ಇಲಾಖೆಯಲ್ಲಿ ಸೇವೆ ಸಲ್ಲಿಸಿದೆ. ಹಲವು ಬಾಂಬ್ ಪತ್ತೆ ಕಾರ್ಯಗಳಲ್ಲಿ ಈ ಶ್ವಾನ ಭಾಗಿಯಾಗಿತ್ತು.
ಇಷ್ಟೆಲ್ಲಾ ಸಾಹಸ ಮಾಡಿದ ಕಾವ್ಯಗೆ ಇಲಾಖೆಯಿಂದ ಪೊಲೀಸ್ ಗೌರವ ವಂದನೆ ಸಮರ್ಪಿಸಲಾಗಿದೆ. ಪೊಲೀಸರು ಕೂಡ ಶ್ವಾನ ಕಾವ್ಯಗೆ ಶ್ರದ್ಧಾಂಜಲಿ ಅರ್ಪಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ