ಡ್ರಗ್ ಸೇವಿಸಿದ ವಿದ್ಯಾರ್ಥಿಗಳು ಅರೆಸ್ಟ್
ಡ್ರಗ್ ಪೆಡ್ಲರ್ಸ್ಗೆ ವಿದ್ಯಾರ್ಥಿಗಳೇ ಟಾರ್ಗೆಟ್
ಕಾಲೇಜು ವಿದ್ಯಾರ್ಥಿಯಿಂದ ಡ್ರಗ್ ಸಾಗಾಟ
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಡ್ರಗ್ ಜಾಲದಲ್ಲಿ ಹೆಚ್ಚು ವಿದ್ಯಾರ್ಥಿಗಳೇ ಸಿಲುಕಿಕೊಳ್ಳುತ್ತಿದ್ದಾರೆ ಅಂತ ಪೊಲೀಸರ ಮಾಹಿತಿ ನೀಡಿದ್ದಾರೆ. ಹೀಗಾಗಿ ಯುವ ಪೀಳಿಗೆಯನ್ನ ಮಾದಕ ಜಾಲದಿಂದ ಹೊರ ತರಲು, ಕಾಲೇಜುಗಳಲ್ಲಿ ಡ್ರಗ್ಸ್ ಕಂಟ್ರೋಲ್ ಮಾಡಲು ಪೊಲೀಸರು ಬಿಗ್ ಪ್ಲಾನ್ ಮಾಡಿದ್ದಾರೆ. ಕೇವಲ ಅರಿವು ಮೂಡಿಸೋದು ಮಾತ್ರವಲ್ಲ, ಕಾಲೇಜಿನಲ್ಲಿ ಡ್ರಗ್ಸ್ ಕಂಟ್ರೋಲ್ ವಿದ್ಯಾರ್ಥಿಗಳ ಪಡೆಯನ್ನೂ ನಿರ್ಮಿಸಲಾಗುತ್ತೆ.
ಪ್ರತಿಯೊಬ್ಬ ವಿದ್ಯಾರ್ಥಿಗೂ ಡ್ರಗ್ಸ್ನಿಂದಾಗೋ ತೊಂದರೆಗಳು.. ಡ್ರಗ್ ಸೇವನೆ ಮಾಡೋರನ್ನ ಮಟ್ಟ ಹಾಕೋಕೆ ಇರುವ ಕಾನೂನಿನ ಪರಿಚಯ ಮಾಡೋಕೆ ಈ ಯೋಜನೆ ರೂಪಿಸಲಾಗಿದೆ. ಪೊಲೀಸರ ಜೊತೆ ಈ ಸ್ವ್ಕಾಡ್ನಲ್ಲಿ ಉತ್ತಮವಾಗಿ ಕೆಲಸ ಮಾಡಿದವರಿಗೆ ಪ್ರಶಂಸನಾ ಪತ್ರವನ್ನೂ ಕೊಡಲಿದೆ. ಈಗಾಗಲೇ ಕೆಲ ಕಾಲೇಜುಗಳಿಗೆ ಭೇಟಿ ಕೊಟ್ಟು ಮ್ಯಾನೇಜ್ಮೆಂಟ್ ಜೊತೆ ಚರ್ಚಿಸಿರೋ ಅಧಿಕಾರಿಗಳು ಶೀಘ್ರದಲ್ಲೇ ಈ ಯೋಜನೆ ಜಾರಿ ಮಾಡಲಿದ್ದಾರೆ.
ಇನ್ನು ಪೊಲೀಸರ ಈ ಆ್ಯಂಟಿ ಡ್ರಗ್ ತರಗತಿಗಳನ್ನ ಅಟೆಂಡ್ ಮಾಡಿದ ವಿದ್ಯಾರ್ಥಿಗಳಿಗೆ ಗ್ರೇಡ್ ಮಾರ್ಕ್ಸ್ ಕೂಡಾ ಕೊಡಲಾಗುತ್ತೆ. ಈ ಮೂಲಕ ವಿದ್ಯಾರ್ಥಿಗಳೇ ಮಾದಕ ವ್ಯಸನಿಗಳಾಗಬೇಡಿ ಅಂತ ಜಾಗೃತಿ ಮೂಡಿಸಲಿದ್ದಾರೆ. ಆದ್ರೆ ಪೊಲೀಸರ ಈ ಯೋಜನೆ ಸಕ್ಸಸ್ ಆಗುತ್ತಾ? ಫೇಲ್ ಆಗುತ್ತಾ ಅನ್ನೋದು ಮುಂದಿನ ದಿನಗಳಲ್ಲಿ ತಿಳಿದು ಬರಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ