newsfirstkannada.com

‘ಪೊಲೀಸ್​​ ಇರ್ತಾರೆ ನೋಡ್ಕೊಂಡ್ ಹೋಗಿ’- ಕಿಡಿಗೇಡಿಗಳ ಹೊಸ ಟ್ರಿಕ್‌ಗೆ​ ಟ್ರಾಫಿಕ್​ ಪೊಲೀಸರೇ ಶಾಕ್​!!

Share :

Published July 9, 2024 at 6:24pm

  ರಾಜ್ಯದಲ್ಲಿ ಎಲ್ಲೆಲ್ಲಿ ಟ್ರಾಫಿಕ್​ ಪೊಲೀಸರು ಇರ್ತಾರೆ ಎಂದು ನೀವು ನೋಡಿ

  ಪೊಲೀಸರಿಂದ ತಪ್ಪಿಸಿಕೊಳ್ಳಲು ಕಿಡಿಗೇಡಿಗಳು ಹುಡುಕಿದರು ಹೊಸ ಐಡಿಯಾ​

  ರಾಜ್ಯದ ಸಂಚಾರಿ ಪೊಲೀಸ್​ ಅಧಿಕಾರಿಗಳೇ ಶಾಕ್ ಆಗುವಂತ ಸ್ಟೋರಿ ಇದಾಗಿದೆ

ಸಿಲಿಕಾನ್ ಸಿಟಿಯಲ್ಲಿ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡೋರು ಇದ್ದೇ ಇರ್ತಾರೆ. ಮನೆಯಲ್ಲಿದ್ದ ಅಣ್ಣ ಅಥವಾ ಅಪ್ಪನ ಬೈಕ್​ ತೆಗೆದುಕೊಂಡು ಅಲ್ಲಿಂದ ಇಲ್ಲಿಗೆ ಇಲ್ಲಿಂದ ಅಲ್ಲಿಗೆ ಸುತ್ತಾಡುವ ಜನರೇ ಜಾಸ್ತಿಯಾಗಿದ್ದಾರೆ. ಹೀಗೆ ಟ್ರಾಫಿಕ್ ರೂಲ್ಸ್​ ಬ್ರೇಕ್​ ಮಾಡಿ ಓಡಾಡೋ ಪೊಲೀಸರು ನಾನಾ ಟೆಕ್ನಿಕ್ ಯೂಸ್ ಮಾಡುತ್ತಿದ್ದಾರೆ. ಆದ್ರೆ ಇದರ ನಡುವೆ ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಕೆಲ ಕಿಡಿಗೇಡಿಗಳು ಹೊಸ ಐಡಿಯಾ​ ಹುಡುಕಿದ್ದಾರೆ. ಅದುವೇ ‘ಪೊಲೀಸ್​​ ಇರ್ತಾರೆ ನೋಡ್ಕೊಂಡ್ ಹೋಗಿ’.

ಇದನ್ನೂ ಓದಿ: 300 ಬಾರಿ ಟ್ರಾಫಿಕ್‌ ರೂಲ್ಸ್​ ಬ್ರೇಕ್.. ಆಸಾಮಿಗೆ ಬಿತ್ತು ಭಾರೀ ದಂಡ; ಎಷ್ಟು ಅಂತ ಗೊತ್ತಾದ್ರೆ ಶಾಕ್ ಆಗ್ತೀರಾ!

ಹೌದು, ನೀವೇನಾದರೂ ಗೂಗಲ್ ಮ್ಯಾಪ್‌ನಲ್ಲಿ Police ertare.. ಎಂದು ಹುಡುಕಿದರೆ ಅಂತಹ ಹಲವಾರು ಹೆಸರಿನ ಸ್ಥಳಗಳನ್ನು ಕಾಣಬಹುದಾಗಿದೆ. ಇದು ಟ್ರಾಫಿಕ್ ಪೊಲೀಸರು ಹೆಚ್ಚಾಗಿ ಇರುವ ಸ್ಥಳಗಳನ್ನು ಗುರುತಿಸಿದ್ದು, ಇತರೆ ವಾಹನ ಸವಾರರು ಟ್ರಾಫಿಕ್ ಪೊಲೀಸರಿಂದ ತಪ್ಪಿಸಿಕೊಳ್ಳಲು ಸಹಾಯ ಮಾಡುವಂತಿದೆ. ರಾಜ್ಯದಲ್ಲಿ ಎಲ್ಲೆಲ್ಲಿ ಟ್ರಾಫಿಕ್​ ಪೊಲೀಸರು ಇರ್ತಾರೆ ಎಂದು ನೀವು ಈಗ ಗೂಗಲ್ ಮ್ಯಾಪ್‌ನಲ್ಲಿ ನೀವು ನೋಡಬಹುದಾಗಿದೆ.

ಅದರಲ್ಲೂ ಬೈಕ್​, ಕಾರು ಇನ್ನಿತರ ವಾಹನ ಸವಾರರು ಪೊಲೀಸರಿಂದ ತಪ್ಪಿಸಿಕೊಳ್ಳಲು ಹಲವು ಸ್ಥಳಗಳಲ್ಲಿ ‘Police ertare nodkond hogi’ ಅಂತ ಉಲ್ಲೇಖಿಸಲಾಗಿದೆ. ಹೀಗೆ ನೀವು ಕೂಡ ಗೂಗಲ್ ಮ್ಯಾಪ್‌ನಲ್ಲಿ ಹುಡುಕಿದರೆ ರಾಜ್ಯದ ಹಲವು ಸ್ಥಳಗಳಲ್ಲಿ ಪೊಲೀಸರು ಎಲ್ಲೆಲ್ಲಿ ಇದ್ದಾರೆ ಅನ್ನೋದನ್ನು ತೋರಿಸುತ್ತದೆ. ‘ಪೊಲೀಸ್ ಇರ್ತಾರೆ ನೋಡ್ಕೊಂಡ್ ಹೋಗಿ’, ‘ಪೊಲೀಸ್ ಇರ್ತಾರೆ’, ‘ಪೊಲೀಸ್ ಇರ್ತಾರೆ ಹುಷಾರು’ ಎಂದು ಹಲವು ಸ್ಥಳಗಳಲ್ಲಿ ಈ ರೀತಿಯಲ್ಲಿ ಬರೆದಿರುವುದನ್ನು ಕಾಣಬಹುದಾಗಿದೆ.  ಪೊಲೀಸರು ಹಲವು ಕಡೆ ಗಾಡಿಗಳನ್ನು ಪರಿಶೀಲನೆ ಮಾಡುವುದು, ತಪಾಸಣೆ ಮಾಡುವ ಸ್ಥಳಗಳನ್ನು ಕಿಡಿಗೇಡಿಗಳು ಮ್ಯಾಪ್‌ನಲ್ಲಿ ಈ ರೀತಿ ಗುರುತಿಸಿದ್ದಾರೆ. ಸದ್ಯ ಪೊಲೀಸರಿಂದ ತಪ್ಪಿಸಿಕೊಳ್ಳಲು ಗೂಗಲ್ ಮ್ಯಾಪ್‌ನಲ್ಲಿ ಈ ರೀತಿ ಬರೆದು ಬೇರೆ ವಾಹನ ಸವಾರರಿಗೇ ಸಹಾಯ ಮಾಡುವಂತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

‘ಪೊಲೀಸ್​​ ಇರ್ತಾರೆ ನೋಡ್ಕೊಂಡ್ ಹೋಗಿ’- ಕಿಡಿಗೇಡಿಗಳ ಹೊಸ ಟ್ರಿಕ್‌ಗೆ​ ಟ್ರಾಫಿಕ್​ ಪೊಲೀಸರೇ ಶಾಕ್​!!

https://newsfirstlive.com/wp-content/uploads/2024/07/google2.jpg

Load More