ಒಂದು ವರ್ಷಗಳ ಕಾಲ ಗಡೀಪಾರು ಆದೇಶ ಸಾಧ್ಯತೆ
‘ಸರ್ಕಾರದಿಂದ ಬಜರಂಗದಳ ಕಾರ್ಯಕರ್ತರು ಟಾರ್ಗೆಟ್’
‘ಕೈ’ ವಿರುದ್ಧ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕಿಡಿ
ಮಂಗಳೂರು: ಚುನಾವಣೆಗೂ ಮುನ್ನ ಭಾರೀ ಚರ್ಚೆಯಲ್ಲಿದ್ದ ಸಂಘಟನೆ. ಕಾಂಗ್ರೆಸ್ ಸರ್ಕಾರ ಬರ್ತಿದ್ದಂತೆ ಬ್ಯಾನ್ ಬಗ್ಗೆ ಪ್ರಸ್ತಾಪಿತವಾಗಿದ್ದ ಹಿಂದೂ ಸಂಘಟನೆ. ಆದರೆ ಈ ಕೇಸರಿ ಸೇನೆಯ ಕಾರ್ಯಕರ್ತರಿಗೆ ನೆತ್ತಿಯ ಮೇಲೆ ಕಾನೂನಿನ ತೂಗು ಗತ್ತಿ ನೇತಾಡುತ್ತಿದೆ. ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಆಗಾಗ ನೈತಿಕ ಪೊಲೀಸ್ ಗಿರಿ ನಡೆಯುತ್ತಲೇ ಇರುತ್ತೆ. ಬಜರಂಗದಳ ಸೇರಿದಂತೆ ಅನೇಕ ಹಿಂದೂಪರ ಸಂಘಟನೆಗಳ ಹೆಸರಲ್ಲಿ ದಾಳಿಗಳು ನಡೆದಿರೋ ಹಲವು ಉದಾಹರಣೆಗಳೂ ಇವೆ. ಇದೀಗ ಇದೇ ನೈತಿಕ ಪೊಲೀಸ್‌ಗಿರಿ ಆರೋಪದಲ್ಲಿ ಮಂಗಳೂರಿನ ಬಜರಂಗದಳ ಮೂವರು ಕಾರ್ಯಕರ್ತರಿಗೆ ಗಡಿಪಾರು ನೋಟಿಸ್ ಜಾರಿಯಾಗಿದೆ. ನಿಮ್ಮನ್ನ ಗಡಿಪಾರು ಮಾಡಬಾರದ್ಯಾಕೆ? ಅಂತಾ ಕಾರಣ ಕೇಳಿ ನೋಟಿಸ್ ಜಾರಿ ಮಾಡಲಾಗಿದೆ.
ಮಂಗಳೂರಿನಲ್ಲಿ ಎರಡು ನೈತಿಕ ಪೊಲೀಸ್‌ಗಿರಿ ಕೇಸ್ನಲ್ಲಿ ಮೂವರು ಬಜರಂಗದಳ ಕಾರ್ಯಕರ್ತರು ಭಾಗಿಯಾಗಿದ್ರು. ಸುಲ್ತಾನ್ ಜ್ಯುವೆಲ್ಲರಿ, ಮರೋಳಿ ಹೋಳಿ ವೇಳೆ ದಾಳಿ ಮಾಡಿ ನೈತಿಕ ಪೊಲೀಸ್‌ಗಿರಿಯನ್ನ ಪ್ರದರ್ಶಿಸಿದ್ರು. ಹೀಗಾಗಿ ಹಿಂದೂ ಕಾರ್ಯಕರ್ತರಾದ ಬಾಲಚಂದ್ರ ಅತ್ತಾವರ, ಗಣೇಶ್ ಅತ್ತಾವರ, ಜಯಪ್ರಶಾಂತ್ ಶಕ್ತಿನಗರ ಸೇರಿ ಮೂವರಿಗೆ ನೋಟಿಸ್ ನೀಡಲಾಗಿದೆ. ಈ ಮೂವರು ಬಜರಂಗದಳ ಕಾರ್ಯಕರ್ತರಿಗೆ ಜಿಲ್ಲಾ ಪೊಲೀಸ್ ಇಲಾಖೆ ನೋಟಿಸ್ ಜಾರಿ ಮಾಡಿದೆ.
ಮಂಗಳೂರು ಡಿಸಿಪಿ ಮುಂದೆ ಹಾಜರಾಗಲು ಸೂಚನೆ ನೀಡಲಾಗಿದೆ. ಅಲ್ಲದೇ ಸ್ಥಳೀಯ ಠಾಣೆಗಳ ಇನ್ಸ್ಪೆಕ್ಟರ್ಗಳು ಗಡಿಪಾರಿಗೆ ವರದಿಯನ್ನ ನೀಡಿದ್ದು, ಒಂದು ವರ್ಷಗಳ ಕಾಲ ಗಡೀಪಾರು ಮಾಡುವ ಆದೇಶ ನೀಡುವ ಸಾಧ್ಯತೆ ಇದೆ. ಈ ಮೂಲಕ ನೈತಿಕ ಪೊಲೀಸ್‌ಗಿರಿಗೆ ಅಧಿಕೃತವಾಗಿ ಕಾನೂನು ಪ್ರಕಾರ ಗಡಿಪಾರು ಅಸ್ತ್ರ ಪ್ರಯೋಗವಾಗುವ ಸಾಧ್ಯತೆ ಇದೆ.
ಕ್ರೈಂನಲ್ಲಿ ಭಾಗಿಯಾದವರ ಮೇಲೆ ಕ್ರಮ ಎಂದ ಕಮಿಷನರ್
ನಮ್ಮ ನಗರದಲ್ಲಿ ಪದೇ ಪದೇ ಕ್ರೈಂನಲ್ಲಿ ಭಾಗಿಯಾಗುತ್ತಿದ್ದವರಿಗೆ ನೋಟಿಸ್ ನೀಡಲಾಗಿದೆ. ಅವರು ಚಟುವಟಿಕೆಗಳನ್ನು ಗಮನಿಸಿ ಇನ್ನು ಜಾಸ್ತಿ ಪ್ರಮಾಣದಲ್ಲಿ ಗಲಾಟೆ ನಡೆಸುತ್ತಿದ್ದರೆ ಅವರಿಗೆ ಗಡಿ ಪಾರು ಮಾಡಲು ಕ್ರಮವನ್ನು ಕೈಗೊಳ್ಳುತ್ತೇವೆ.
– ಕಮಿಷನರ್ ಕುಲದೀಪ್ ಜೈನ್
ಕಾಂಗ್ರೆಸ್ ಸರ್ಕಾರ ಬಂದ ಮೇಲೆ ನಿರಂತರವಾಗಿ ಬಜರಂಗದಳ, ಕಾರ್ಯಕರ್ತರು, ಭಾರತೀಯ ಜನತಾ ಪಾರ್ಟಿಯ ಮೇಲೆ ಹಲ್ಲೆ ನಡೆಯತ್ತಿದೆ. ಬಜರಂಗದಳ ಕಾರ್ಯಕರ್ತರನ್ನ ಟಾರ್ಗೆಟ್ ಮಾಡುತ್ತಿದ್ದಾರೆ. ಬೆದರಿಕೆ ಹಾಕುವಂತಹ ಕೆಲಸ ಮಾಡುತ್ತಿದೆ.
– ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಒಟ್ಟಾರೆ, ನೈತಿಕ ಪೊಲೀಸ್‌ಗಿರಿ ವಿರುದ್ಧ ಮಂಗಳೂರು ಪೊಲೀಸ್ ಇಲಾಖೆ ದಿಟ್ಟ ಕ್ರಮಕೈಗೊಂಡಿದೆ. ಆದ್ರೆ, ಇದಕ್ಕೂ ರಾಜಕೀಯ ಬೆರೆತಿದ್ದು, ಗಡಿಪಾರು ವಿಚಾರ ಬಿಜೆಪಿ-ಕಾಂಗ್ರೆಸ್ ನಾಯಕರ ಮಧ್ಯೆ ಮಾತಿನಸಮರಕ್ಕೂ ಕಾರಣವಾಗೋದಂತೂ ನಿಶ್ಚಿತ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ